ಟಿ20 ವಿಶ್ವಕಪ್‌, ಐಪಿಎಲ್‌ ಭವಿಷ್ಯ ಇಂದು ನಿರ್ಧಾರ

- ಐಸಿಸಿ ಟೆಲಿ ಕಾನ್ಫರೆನ್ಸ್‌ - ಟಿ20 ವಿಶ್ವಕಪ್‌ 2022ಕ್ಕೆ? ಐಪಿಎಲ್‌ ಹಾದಿ ಸುಗಮ?

Team Udayavani, May 28, 2020, 6:28 AM IST

ಟಿ20 ವಿಶ್ವಕಪ್‌, ಐಪಿಎಲ್‌ ಭವಿಷ್ಯ ಇಂದು ನಿರ್ಧಾರ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ಈ ವರ್ಷಾಂತ್ಯ ನಡೆಯುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಹಾಗೂ 2020ರ ಐಪಿಎಲ್‌ ಕೂಟದ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ. ಐಸಿಸಿ ನಡೆಸಲಿರುವ ಟೆಲಿ ಕಾನ್ಫರೆನ್ಸ್‌ನಲ್ಲಿ ಕ್ರಿಕೆಟ್‌ ಅಭಿಮಾನಿಗಳ ಕಾತರ, ನಿರೀಕ್ಷೆಗಳಿಗೆಲ್ಲ ಬಹುತೇಕ ತೆರೆ ಬೀಳಲಿದೆ.

ಜಗತ್ತನ್ನೇ ವ್ಯಾಪಿಸಿರುವ ಕೋವಿಡ್ ದಿಂದಾಗಿ ಐಪಿಎಲ್‌ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗೆಯೇ 2020ರ ಕೊನೆಯಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಕೂಡ ಅನಿಶ್ಚಿತತೆಯಲ್ಲಿದೆ. ಈಗಿನ ಲೆಕ್ಕಾಚಾರವೊಂದರ ಪ್ರಕಾರ ಟಿ20 ವಿಶ್ವಕಪ್‌ ಪಂದ್ಯಾವಳಿ 2022ಕ್ಕೆ ಮುಂದೂಡಲ್ಪಡಲಿದೆ. ಇಲ್ಲಿ ಲಭಿಸಿದ ಅವಕಾಶದಲ್ಲಿ ಐಪಿಎಲ್‌ ಪಂದ್ಯಾ ವಳಿಯನ್ನು ಆಡಿಸುವುದು ಬಿಸಿಸಿಐ ಯೋಜನೆಯಾಗಿದೆ.

“ಗುರುವಾರದ ಸಭೆಯಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ಮುಂದೂಡುವ ಎಲ್ಲ ಸಾಧ್ಯತೆ ಗೋಚರಿಸುತ್ತಿದೆ. ಈ ವರ್ಷ ಟಿ20 ವಿಶ್ವಕಪ್‌ ನಡೆಯುವ ಸಾಧ್ಯತೆ ಕ್ಷೀಣಿಸಿದೆೆ’ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾನಾ ಲೆಕ್ಕಾಚಾರಗಳು
ಬಿಸಿಸಿಐ ಮೂಲದ ಪ್ರಕಾರ ಟಿ20 ವಿಶ್ವಕಪ್‌ ಮುಂದಿನ ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇಲ್ಲಿ ನಾನಾ ಲೆಕ್ಕಾಚಾರಗಳಿವೆ. ಒಂದು ವೇಳೆ ಈ ವರ್ಷದ ಟಿ20 ವಿಶ್ವಕಪ್‌ ಜಾಗದಲ್ಲಿ ಐಪಿಎಲ್‌ ನಡೆದರೂ ಅನಂತರದ 3-4 ತಿಂಗಳಲ್ಲೇ 2021ರ ಐಪಿಎಲ್‌ ನಡೆಸು ವುದು ಎಷ್ಟು ಸಮಂಜಸ ಎಂಬುದು ಮುಖ್ಯ ಪ್ರಶ್ನೆ. ಇದರಲ್ಲಿ ಸ್ಟಾರ್‌ ಸ್ಪೋರ್ಟ್ಸ್ ಪಾತ್ರವೂ ನಿರ್ಣಾಯಕ ಎಂಬುದಾಗಿ ಬಿಸಿಸಿಐ ಹೇಳಿದೆ.

2021ರಲ್ಲಿ ಮತ್ತೂಂದು ವಿಶ್ವಕಪ್‌!
ಐಸಿಸಿ ವೇಳಾಪಟ್ಟಿ ಪ್ರಕಾರ 2021ರಲ್ಲೂ ಟಿ20 ವಿಶ್ವಕಪ್‌ ನಡೆಯಲಿದ್ದು, ಇದು ಭಾರತದ ಆತಿಥ್ಯದಲ್ಲಿ ಸಾಗಲಿರುವುದು ವಿಶೇಷ. ಇದರ ದಿನಾಂಕವಿನ್ನೂ ಪ್ರಕಟಗೊಂಡಿಲ್ಲ. ತನ್ನ ಆತಿಥ್ಯವನ್ನು ಐಸಿಸಿ ಕಸಿದುಕೊಳ್ಳದು ಎಂಬ ವಿಶ್ವಾಸ ಬಿಸಿಸಿಐನದ್ದು. ಆದರೆ ಸೀಮಿತ ಅವಧಿಯಲ್ಲಿ ಅದೆಷ್ಟು ವಿಶ್ವಕಪ್‌ ಪಂದ್ಯಾವಳಿಗಳನ್ನು ನಡೆಸಲು ಸಾಧ್ಯ ಎಂಬ ಪ್ರಶ್ನೆಗೂ ಇಲ್ಲಿ ಪರಿಹಾರ ಹುಡುಕಬೇಕಿದೆ.

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.