ರೀಸ್ ಟಾಪ್ಲಿ , ದುಷ್ಮಂತ ಚಮೀರ ವಿಶ್ವಕಪ್ನಿಂದ ಔಟ್
Team Udayavani, Oct 19, 2022, 10:45 PM IST
ಮೆಲ್ಬರ್ನ್: ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಣಿಯಾಗುತ್ತಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳಿಗೆ ಬೌಲಿಂಗ್ ವಿಭಾಗದಲ್ಲಿ ಸಂಕಟ ಎದುರಾಗಿದೆ. ವೇಗಿಗಳಾದ ರೀಸ್ ಟಾಪ್ಲಿ ಮತ್ತು ದುಷ್ಮಂತ ಚಮೀರ ಗಾಯಾಳಾಗಿ ಕೂಟದಿಂದ ಹೊರಬಿದ್ದಿದ್ದಾರೆ.
ರೀಸ್ ಟಾಪ್ಲಿ ಬ್ರಿಸ್ಬೇನ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಎಡಗಾಲಿನ ಪಾದದ ನೋವಿಗೆ ಸಿಲುಕಿದ್ದರು. ಇವರ ಸ್ಥಾನಕ್ಕೆ ಟೈಮಲ್ ಮಿಲ್ಸ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ದುಷ್ಮಂತ ಚಮೀರ ಯುಎಇ ವಿರುದ್ಧದ ಅರ್ಹತಾ ಪಂದ್ಯದ ಕೊನೆಯಲ್ಲಿ ಗಾಯಾಳಾಗಿ ಮೈದಾನದಿಂದ ಹೊರನಡೆದಿದ್ದರು. ಇವರ ಸ್ಥಾನವೀಗ ಕಸುನ್ ರಜಿತ ಪಾಲಾಗಿದೆ.