ತಮಿಳುನಾಡಿನಿಂದ ಕಾಮನ್ವೆಲ್ತ್ ವಿಜೇತರಿಗೆ ಭರ್ಜರಿ ನಗದು
Team Udayavani, Apr 17, 2018, 7:35 AM IST
ಚೆನ್ನೈ: ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ತನ್ನ ರಾಜ್ಯದ ಕ್ರೀಡಾಪಟುಗಳಿಗೆ ತಮಿಳುನಾಡು ಸರ್ಕಾರ ಭರ್ಜರಿ ನಗದು ಪ್ರಕಟಿಸಿದೆ. ಚಿನ್ನ ಗೆದ್ದವರಿಗೆ 50 ಲಕ್ಷ ರೂ., ಬೆಳ್ಳಿ ಗೆದ್ದವರಿಗೆ ತಲಾ 30 ಲಕ್ಷ ರೂ. ನೀಡಲಾಯಿತು. ಕೂಟದಲ್ಲಿ ತಮಿಳುನಾಡಿನ ಜೋಶ್ನಾ ಚಿನ್ನಪ್ಪ, ದೀಪಿಕಾ ಪಳ್ಳಿàಕಲ್, ಸೌರವ್ ಘೋಷಲ್, ಶರತ್ ಕಮಲ್, ಜಿ.ಸಾಥಿಯಾನ್ ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ಪದಕ ಗೆದ್ದಿದ್ದರು.