ಲಂಕೆಯ “ಪರ್ಸಿ’ಗೆ ಟೀಮ್‌ ಇಂಡಿಯಾ ಜೆರ್ಸಿ !

Team Udayavani, Aug 8, 2017, 12:30 PM IST

ಕೊಲಂಬೊ: ಶ್ರೀಲಂಕಾ ಕ್ರಿಕೆಟಿನ ಕಟ್ಟಾ ಅಭಿಮಾನಿ ಪರ್ಸಿ ಅಭಯಶೇಖರ ಅವರಿಗೆ ಟೀಮ್‌ ಇಂಡಿಯಾ ಮತ್ತೂಂದು ಉಡುಗೊರೆ ನೀಡಿದೆ. ಭಾರತ ತಂಡದ ಆಟಗಾರರೆಲ್ಲರ ಹಸ್ತಾಕ್ಷರವುಳ್ಳ ಜೆರ್ಸಿಯೊಂದನ್ನು ಕೊಟ್ಟಿದೆ. 

ಕೊಲಂಬೊ ಟೆಸ್ಟ್‌ ಪಂದ್ಯದ 4ನೇ ದಿನವಾದ ರವಿವಾರ ಸ್ಟಾಂಡ್‌ನ‌ಲ್ಲಿದ್ದ ಅಭಯಶೇಖರ ಅವರಿಗೆ ಈ ಜೆರ್ಸಿಯನ್ನು ನೀಡಲಾಯಿತು. ಇದಕ್ಕೂ ಮುನ್ನ ಕೋಚ್‌ ರವಿಶಾಸ್ತ್ರಿ ಭಾರತ ತಂಡದ ಡ್ರೆಸ್ಸಿಂಗ್‌ ರೂಮ್‌ ನಿಂದ ಈ ಜೆರ್ಸಿಯನ್ನು ಪ್ರದರ್ಶಿ ಸುತ್ತಿದ್ದ ದೃಶ್ಯವೂ ಕಂಡುಬಂದಿತ್ತು. ಆದರೆ ಶಾಸ್ತ್ರಿ ಹೀಗೇಕೆ ಮಾಡುತ್ತಿದ್ದಾರೆ ಎಂಬುದು ಮೊದಲು ಯಾರಿಗೂ ತಿಳಿದಿರಲಿಲ್ಲ.

ಗಾಲೆ ಟೆಸ್ಟ್‌ ಪಂದ್ಯದ ವೇಳೆ ಪರ್ಸಿ ಅಭಯಶೇಖರ ತಮ್ಮ 81ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಂಡಿದ್ದರು. ಆಗ ಅವರ ಕೆನ್ನೆಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮುತ್ತನ್ನು ನೀಡಿ ಅಭಿನಂದನೆ ಸಲ್ಲಿಸಿದ್ದರು. ಈಗ ಜೆರ್ಸಿ ಉಡುಗೊರೆ. ಪಲ್ಲೆಕಿಲೆ ಟೆಸ್ಟ್‌ ಬಳಿಕ  ಭಾರತದ ಕಡೆಯಿಂದ “ಪರ್ಸಿ’ಗೆ ಯಾವ ಉಡುಗೊರೆ ಕಾದಿದೆಯೋ ನೋಡಬೇಕು!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ