Udayavni Special

ಶಿಖರ್‌ ಧವನ್‌, ಸಾಹಾ ವಾಪಸ್‌ ಸ್ಪಿನ್ನರ್‌ ರಾಹುಲ್‌ ಚಹರ್‌ ಹೊಸಮುಖ

ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ

Team Udayavani, Jul 22, 2019, 5:00 AM IST

chahar-bro

ಚಹರ್‌ ಕಸಿನ್ಸ್‌.

ಮುಂಬಯಿ: ಭಾರೀ ಚರ್ಚೆಯಲ್ಲಿದ್ದ ವೆಸ್ಟ್‌ ಇಂಡೀಸ್‌ ಪ್ರವಾಸದ ಟೀಮ್‌ ಇಂಡಿಯಾ ಆಯ್ಕೆ ಪ್ರಕ್ರಿಯೆ ರವಿವಾರ ಸುಸಂಪನ್ನಗೊಂಡಿದೆ. ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಮುಂಬಯಿಯಲ್ಲಿ ಸಭೆ ಸೇರಿ ಮೂರೂ ಮಾದರಿಯ ತಂಡಗಳನ್ನು ಪ್ರಕಟಿಸಿತು. ಎಲ್ಲವನ್ನೂ ವಿರಾಟ್‌ ಕೊಹ್ಲಿ ಅವರೇ ಮುನ್ನಡೆಸಲಿದ್ದಾರೆ. ಇದರೊಂದಿಗೆ “ಸ್ಪ್ಲಿಟ್‌ ಕ್ಯಾಪ್ಟನ್ಸಿ’ ವಿಚಾರ ನನೆಗುದಿಗೆ ಬಿತ್ತು.

ಪೂರ್ತಿ ಫಿಟ್‌ನೆಸ್‌ ಹೊಂದಿದ ಶಿಖರ್‌ ಧವನ್‌, ವೃದ್ಧಿಮಾನ್‌ ಸಾಹಾ ವಾಪಸಾದದ್ದು; ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಿದ್ದು; ಟೆಸ್ಟ್‌ ತಂಡಕ್ಕೆ ಅನುಭವಿಗಳಾದ ಅಶ್ವಿ‌ನ್‌, ಇಶಾಂತ್‌, ಉಮೇಶ್‌ ಯಾದವ್‌ ಅವರಂಥ ಆಟಗಾರರ ಮೇಲೆ ನಂಬಿಕೆ ಇರಿಸಿದ್ದು; ರಾಜಸ್ಥಾನದ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌ ಅವರನ್ನು ಇದೇ ಮೊದಲ ಸಲ ಟಿ20 ತಂಡಕ್ಕೆ ಆರಿಸಿದ್ದೆಲ್ಲ ಆಯ್ಕೆಯ ಪ್ರಮುಖ ಸಂಗತಿಗಳು.

ಏಕದಿನಕ್ಕೆ ಮರಳಿದ ಪಾಂಡೆ, ಅಯ್ಯರ್‌
ಏಕದಿನ ತಂಡಕ್ಕೆ ಮನೀಷ್‌ ಪಾಂಡೆ ಮತ್ತು ಶ್ರೇಯಸ್‌ ಅವರನ್ನು ಮರಳಿ ಸೇರಿಸಿಕೊಳ್ಳಲಾಗಿದೆ. ವಿಶ್ವಕಪ್‌ನಲ್ಲಿ ಆಡಿದ ದಿನೇಶ್‌ ಕಾರ್ತಿಕ್‌ ಅವರನ್ನು ಯಾವ ತಂಡಕ್ಕೂ ಪರಿಗಣಿಸಲಿಲ್ಲ. ಹಾಗೆಯೇ ಪಂಜಾಬಿನ ಉದಯೋನ್ಮುಖ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಅವರನ್ನೂ ಕಡೆಗಣಿಸಲಾಗಿದೆ. ಆರಂಭಕಾರ ಪೃಥ್ವಿ ಶಾ ಮತ್ತು ಆಲ್‌ರೌಂಡರ್‌ ವಿಜಯ್‌ ಶಂಕರ್‌ ಫಿಟ್‌ನೆಸ್‌ ಹೊಂದಿಲ್ಲದ ಕಾರಣ ಅವಕಾಶ ವಂಚಿತರಾದರು. ವಿಶ್ವಕಪ್‌ನಲ್ಲಿ ಕ್ಲಿಕ್‌ ಆಗದ ಕೇದಾರ್‌ ಜಾಧವ್‌ ಸ್ಥಾನ ಉಳಿಸಿಕೊಂಡಿದ್ದಾರೆ.

ಧವನ್‌ ಟಿ20 ಮತ್ತು ಏಕದಿನಕ್ಕಷ್ಟೇ ಸೀಮಿತ ವಾದ್ದರಿಂದ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌-ಕೆ.ಎಲ್‌. ರಾಹುಲ್‌ ಟೆಸ್ಟ್‌ ನಲ್ಲಿ ಭಾರತದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ತೃತೀಯ ಸ್ಪೆಷಲಿಸ್ಟ್‌ ಓಪನರ್‌ ಯಾರೂ ಇಲ್ಲ.

ಸೀಮ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ತಂಡಕ್ಕಷ್ಟೇ ಆಯ್ಕೆಯಾಗಿದ್ದರೆ. ಬಿಡುವಿಲ್ಲದ ಕ್ರಿಕೆಟ್‌ನಿಂದಾಗಿ ಅವರನ್ನು ಸೀಮಿತ ಓವರ್‌ಗಳ ಸರಣಿಗೆ ಆರಿಸಲಾಗಿಲ್ಲ. ಹಾರ್ದಿಕ್‌ ಪಾಂಡ್ಯ ಅವರಿಗೂ ಇದೇ ಮಾತು ಅನ್ವಯಿಸುತ್ತದೆ.

“ಎ’ ತಂಡದ ಸಾಧನೆಯೂ ಪರಿಗಣನೆಗೆ
ಸದ್ಯ ಮನೀಷ್‌ ಪಾಂಡೆ ನೇತೃತ್ವದ ಭಾರತ “ಎ’ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಆಯ್ಕೆಯ ವೇಳೆ ಇಲ್ಲಿನ ಸಾಧಕರನ್ನೂ ಪರಿಗಣಿಸಲಾಗಿದೆ ಎಂದು ಎಂ.ಎಸ್‌.ಕೆ. ಪ್ರಸಾದ್‌ ಹೇಳಿದರು.

“ಎ ತಂಡದಿಂದ ಸೀನಿಯರ್‌ ತಂಡದ ಆಯ್ಕೆಗೆ ಅತೀ ಹತ್ತಿರವಾದ ಕ್ರಿಕೆಟಿಗ ನೆಂದರೆ ವಿಕೆಟ್‌ ಕೀಪರ್‌ ಕೆ.ಎಸ್‌. ಭರತ್‌. ಆದರೆ ಗಾಯಾಳು ಕ್ರಿಕೆಟಿಗನೊಬ್ಬ ಸಂಪೂರ್ಣ ಚೇತರಿಸಿಕೊಂಡು ಆಯ್ಕೆಗೆ ಲಭ್ಯವಿರುವುದರಿಂದ ಅವರಿಗೆ ಮೊದಲ ಆದ್ಯತೆ ನೀಡುವುದು ಆಯ್ಕೆ ಸಮಿತಿಯ ಅಲಿಖೀತ ನಿಯಮ. ಹೀಗಾಗಿ ಇಲ್ಲಿ ಸಾಹಾ ಕಾಣಿಸಿಕೊಂಡರು’ ಎಂಬುದಾಗಿ ಪ್ರಸಾದ್‌ ಹೇಳಿದರು.

ಮೂರೂ ತಂಡಗಳಲ್ಲಿ ಪಂತ್‌
ಅನುಭವಿ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅನುಪಸ್ಥಿತಿಯಲ್ಲಿ ರಿಷಭ್‌ ಪಂತ್‌ ಅವರನ್ನು ಮೂರೂ ತಂಡಗಳಿಗೆ ಕೀಪರ್‌ ಆಗಿ ನೇಮಿಸಲಾಗಿದೆ. ಆದರೆ ಟೆಸ್ಟ್‌ ತಂಡದಲ್ಲಿ ಇಬ್ಬರು ಕೀಪರ್‌ಗಳಿದ್ದು, ಬಂಗಾಲದ ವೃದ್ಧಿಮಾನ್‌ ಸಾಹಾ ಪ್ರಧಾನ ಕೀಪರ್‌ ಆಗಿ ಕರ್ತವ್ಯ ನಿಭಾಯಿಸುವ ಸಾಧ್ಯತೆ ಇದೆ. ಸಾಹಾ 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಸಲ ಟೆಸ್ಟ್‌ ಆಡಿದ್ದರು. ಅನಂತರ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದರು.

ಮುಂದಿನ ವರ್ಷದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತದ “ಚುಟುಕು ತಂಡ’ದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಿಲ್ಲಿಯ ಪೇಸರ್‌ ನವದೀಪ್‌ ಸೈನಿ, ಎಡಗೈ ಪೇಸರ್‌ ಖಲೀಲ್‌ ಅಹ್ಮದ್‌, ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ, “ಚಹರ್‌ ಕಸಿನ್ಸ್‌’ ಇಲ್ಲಿನ ಪ್ರಮುಖರು. ಆದರೆ ಟೆಸ್ಟ್‌ ತಂಡಕ್ಕೆ ಹಳಬರನ್ನೇ ನೆಚ್ಚಿಕೊಳ್ಳಲಾಗಿದೆ. ಅಶ್ವಿ‌ನ್‌, ಸಾಹಾ, ಇಶಾಂತ್‌, ಯಾದವ್‌ ಇವರಲ್ಲಿ ಪ್ರಮುಖರು.

“ರಾಯುಡು ಜತೆ ಪಕ್ಷಪಾತದಿಂದ ವರ್ತಿಸಿಲ್ಲ’
ಆಯ್ಕೆ ಸಂದರ್ಭದಲ್ಲಿ ನಿವೃತ್ತ ಕ್ರಿಕೆಟಿಗ ಅಂಬಾಟಿ ರಾಯುಡು ಪ್ರಸ್ತಾವವೂ ಬಂತು. ಅವರ “ತ್ರೀ ಡಿ ಟ್ವೀಟ್‌’ ಕೂಡ ಚರ್ಚೆ ಯಾಯಿತು. ಆದರೆ ರಾಯುಡು ಜತೆ ಆಯ್ಕೆ ಸಮಿತಿ ಯಾವುದೇ ಪಕ್ಷಪಾತದಿಂದ ವರ್ತಿಸಿಲ್ಲ ಎಂದು ಪ್ರಸಾದ್‌ ಹೇಳಿದರು.

ವಿಶ್ವಕಪ್‌ಗಾಗಿ ಅಂಬಾಟಿ ರಾಯುಡು ಬದಲು ವಿಜಯ್‌ ಶಂಕರ್‌ ಅವರನ್ನು ಆರಿಸಿ, ಅವರೋರ್ವ ತ್ರೀ ಡೈಮೆನ್ಶನಲ್‌ ಆಟಗಾರ ಎಂದು ಆಯ್ಕೆ ಸಮಿತಿ ಸಮರ್ಥಿಸಿ ಕೊಂಡಿತ್ತು. ಆಗ ಅಂಬಾಟಿ ರಾಯುಡು, “ನಾನು ವಿಶ್ವಕಪ್‌ ವೀಕ್ಷಿಸಲು ತ್ರೀ ಡಿ ಗ್ಲಾಸ್‌ಗಳನ್ನು ಆರ್ಡರ್‌ ಮಾಡಿದ್ದೇನೆ’ ಎಂದು ವಿಡಂಬನಾತ್ಮಕವಾಗಿ ಟ್ವೀಟ್‌ ಮಾಡಿದ್ದರು.

“ಇದೊಂದು ಲವಿ ಟ್ವೀಟ್‌. ಸಕಾಲಿಕವಾಗಿತ್ತು. ನಾನು ನಿಜಕ್ಕೂ ಇದನ್ನು ಆನಂದಿಸಿದೆ. ರಾಯುಡು ಅವರನ್ನು ಕೈಬಿಡಬೇಕಾಗಿ ಬಂದಾಗ ನಮಗೂ ಬೇಸರ ವಾಗಿತ್ತು. ಆದರೆ ಯಾವ ಸಂದರ್ಭದಲ್ಲೂ ಆಯ್ಕೆ ಸಮಿತಿ ರಾಯುಡು ವಿರುದ್ಧ ಪಕ್ಷಪಾತದಿಂದ ವರ್ತಿಸಿಲ್ಲ’ ಎಂದರು.

“ಸಣ್ಣ ಉದಾಹರಣೆ. ರಾಯುಡು ಅವರನ್ನು 2018ರ ಐಪಿಎಲ್‌ ಸಾಧನೆ ಆಧಾರದಲ್ಲಿ ಏಕದಿನ ತಂಡಕ್ಕೆ ಆರಿಸಿ ದಾಗ ನಾವು ಭಾರೀ ಟೀಕೆಗಳನ್ನು ಎದುರಿಸಿದ್ದೆವು. ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಅನುತ್ತೀರ್ಣರಾದಾಗಲೂ ಆಯ್ಕೆ ಸಮಿತಿ ಅವರ ಬೆಂಬಲಕ್ಕೆ ನಿಂತಿತ್ತು. ಆದರೆ ತಂಡಕ್ಕೆ ಕೆಲವು ಕಾಂಬಿನೇಶನ್ಸ್‌ ಹೆಚ್ಚು ಸೂಕ್ತವೆಂದು ಕಂಡಾಗ ರಾಯುಡು ಅವರನ್ನು ಕೈಬಿಡಬೇಕಾಯಿತು’ ಎಂದು ಪ್ರಸಾದ್‌ ಹೇಳಿದರು.

“ಧೋನಿಯಂಥ ಲೆಜೆಂಡ್ರಿ ಆಟಗಾರನಿಗೆ ನಿವೃತ್ತಿ ಬಗ್ಗೆ ಹೇಳಬೇಕಿಲ್ಲ’
“ನಿವೃತ್ತಿ ಎಂಬುದು ಸಂಪೂರ್ಣ ವೈಯಕ್ತಿಕ ವಿಚಾರ. ಧೋನಿಯಂಥ ಲೆಜೆಂಡ್ರಿ ಆಟಗಾರನಿಗೆ ಯಾವಾಗ ನಿವೃತ್ತಿ ಹೇಳಬೇಕೆಂಬುದು ತಿಳಿದಿದೆ’ ಎಂಬುದಾಗಿ ಹೇಳಿದವರು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌. ರವಿವಾರದ ಆಯ್ಕೆ ಪ್ರಕ್ರಿಯೆ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.

“ಧೋನಿ ನಿವೃತ್ತಿ ವಿಚಾರದಲ್ಲಿ ನಾವು ಹೆಚ್ಚಿಗೇನೂ ಚರ್ಚಿಸಬೇಕಾದ ಅಗತ್ಯವಿಲ್ಲ. ಅವರು ಈ ಸರಣಿಗೆ ಲಭ್ಯರಿಲ್ಲ, ಅಷ್ಟೇ. ನಾವು ಈಗಾಗಲೇ ಯುವ ಆಟಗಾರರನ್ನು ಸಜ್ಜುಗೊಳಿಸುತ್ತಿದ್ದೇವೆ’ ಎಂದು ಪ್ರಸಾದ್‌ ಹೇಳಿದರು.

ಧೋನಿ ಸ್ಥಾನವನ್ನು ತುಂಬಲು ರಿಷಭ್‌ ಪಂತ್‌ ಸಜ್ಜಾಗುತ್ತಿದ್ದಾರೆ ಎಂದೂ ಪ್ರಸಾದ್‌ ಹೇಳಿದರು. ಹಾಗೆಯೇ ಆಂಧ್ರದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕೆ.ಎಸ್‌. ಭರತ್‌ ಶೀಘ್ರದಲ್ಲೇ ಟೆಸ್ಟ್‌ ತಂಡ ಪ್ರವೇಶಿಸಲಿದ್ದಾರೆ ಎಂಬ ಸೂಚನೆಯನ್ನೂ ನೀಡಿದರು. ಆಯ್ಕೆ ಸಭೆಯಲ್ಲಿ ಭರತ್‌ ಹೆಸರೂ ಚರ್ಚೆಗೆ ಬಂತು, ಆದರೆ ಅನುಭವದ ನೆಲೆಯಲ್ಲಿ ವೃದ್ಧಿಮಾನ್‌ ಸಾಹಾಗೆ ಅವಕಾಶ ಲಭಿಸಿತು ಎಂದರು.

ಭಾರತ ತಂಡಗಳು
ಟಿ20 ತಂಡ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ಕೃಣಾಲ್‌ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ದೀಪಕ್‌ ಚಹರ್‌, ನವದೀಪ್‌ ಸೈನಿ.

ಏಕದಿನ ತಂಡ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಕೇದಾರ್‌ ಜಾಧವ್‌, ಮೊಹಮ್ಮದ್‌ ಶಮಿ, ಭುವ ನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌, ನವದೀಪ್‌ ಸೈನಿ.

ಟೆಸ್ಟ್‌ ತಂಡ
ಕೊಹ್ಲಿ (ನಾಯಕ), ರಹಾನೆ (ಉಪನಾಯಕ), ಮಾಯಾಂಕ್‌ ಅಗರ್ವಾಲ್‌, ಕೆ.ಎಲ್‌. ರಾಹುಲ್‌, ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ, ರೋಹಿತ್‌ ಶರ್ಮ, ರಿಷಭ್‌ ಪಂತ್‌, ವೃದ್ಧಿಮಾನ್‌ ಸಾಹಾ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಇಶಾಂತ್‌ ಶರ್ಮ, ಶಮಿ, ಬುಮ್ರಾ, ಉಮೇಶ್‌ ಯಾದವ್‌.

ಟಾಪ್ ನ್ಯೂಸ್

ಏನಿದು ತೌಕ್ತೆ ಚಂಡಮಾರುತ

ಏನಿದು ತೌಕ್ತೆ ಚಂಡಮಾರುತ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಏನಿದು ತೌಕ್ತೆ ಚಂಡಮಾರುತ

ಏನಿದು ತೌಕ್ತೆ ಚಂಡಮಾರುತ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.