ರಹಾನೆಗೆ ನಿದ್ರೆಯಲ್ಲೂ ‘ಪಿಂಕ್ ಬಾಲ್’ ಕನವರಿಕೆ!

Team Udayavani, Nov 19, 2019, 4:00 PM IST

ಮುಂದಿನ ಶುಕ್ರವಾರದಿಂದ ಕೊಲ್ಕೊತ್ತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಪ್ರಾರಂಭವಾಗಲಿರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯಾಟ ಇತ್ತಂಡಗಳಿಗೂ ಐತಿಹಾಸಿಕವಾದುದಾಗಿದೆ. ಯಾಕೆಂದರೆ ಇದು ಭಾರತದಲ್ಲಿ ನಡೆಯುತ್ತಿರುವ ಮತ್ತು ಭಾರತ ಆಡುತ್ತಿರುವ ಮೊತ್ತಮೊದಲ ಪಿಂಕ್ ಬಾಲ್ ಹಗಲು ರಾತ್ರಿ ಟೆಸ್ಟ್ ಪಂದ್ಯವಾಗಲಿದೆ.

ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಭಾರತೀಯ ಟೆಸ್ಟ್ ತಂಡದ ಆಟಗಾರರು ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಮತ್ತು ಈ ವಾತಾವರಣದಲ್ಲಿ ಆಡಲು ತಮ್ಮನ್ನು ತಾವು ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಪಿಂಕ್ ಚೆಂಡಿನ ಕುರಿತಾಗಿಯೇ ಕನವರಿಸುತ್ತಿರುವ ಫೊಟೋ ಒಂದನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ತನ್ನ ತಲೆದಿಂಬಿನ ಬದಿಯಲ್ಲಿ ಪಿಂಕ್ ಚೆಂಡೊಂದನ್ನು ಇರಿಸಿಕೊಂಡು, ‘ಈಗಾಗಲೇ ಪಿಂಕ್ ಬಾಲ್ ಟೆಸ್ಟ್ ಕುರಿತಾಗಿ ಕನಸು ಕಾಣಲು ಪ್ರಾರಂಭಿಸಿದ್ದೇನೆ’ ಎಂದು ರಹಾನೆ ಬರೆದುಕೊಂಡಿದ್ದಾರೆ.

ಅಜಿಂಕ್ಯ ರಹಾನೆ ಅವರು ಕಪ್ತಾನ ವಿರಾಟ್ ಕೊಹ್ಲಿ ಜೊತೆಗೆ ಇಂದು ಕೊಲ್ಕೊತ್ತಾಗೆ ಆಗಮಿಸಿದ್ದಾರೆ. ಬಾಂಗ್ಲಾ ವಿರುದ್ಧದ ಪ್ರಥ ಟೆಸ್ಟ್ ಪಂದ್ಯವನ್ನು ಭಾರತ ಈಗಾಗಲೇ ಇನ್ನಿಂಗ್ಸ್ ಹಾಗೂ 130 ರನ್ ಗಳಿಂದ ಗೆದ್ದುಕೊಂಡಿದೆ. ಇನ್ನು ಕೊಲ್ಕೊತ್ತಾದಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಗೆಲ್ಲುವ ಮೂಲಕ ಬಾಂಗ್ಲಾ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆ ಕೊಹ್ಲಿ ಬಳಗದ್ದಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ