ಟೆನಿಸ್ : ಕೊಕೊ ಗಾಫ್ ಗೆಲುವಿನ ಗ್ರಾಫ್ : ಅವಳಿ ಪ್ರಶಸ್ತಿ ಗೆದ್ದ 17ರ ಸಾಧಕಿ
Team Udayavani, May 23, 2021, 10:41 PM IST
ಪಾರ್ಮಾ (ಇಟಲಿ) : ಅಮೆರಿಕದ 17ರ ಹರೆಯದ ಕೊಕೊ ಗಾಫ್ ಇಟಲಿಯ ಪಾರ್ಮಾದಲ್ಲಿ ನಡೆದ “ಎಮಿಲಿಯಾ ರೊಮಾಂಗ ಓಪನ್’ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ವನಿತೆಯರ ಸಿಂಗಲ್ಸ್ ಹಾಗೂ ಡಬಲ್ಸ್ ಪ್ರಶಸ್ತಿಗಳೆರಡನ್ನೂ ಗೆದ್ದು ತಮ್ಮ ಗ್ರಾಫ್ ಏರಿಸಿಕೊಂಡಿದ್ದಾರೆ. ಸಿಂಗಲ್ಸ್ ಫೈನಲ್ನಲ್ಲಿ ಅವರು ಚೀನದ ವಾಂಗ್ ಕ್ವಿಯಾಂಗ್ ವಿರುದ್ಧ ಕೇವಲ 74 ನಿಮಿಷಗಳಲ್ಲಿ 6-1, 6-3 ಅಂತರದ ಸುಲಭ ಜಯ ಸಾಧಿಸಿದರು.
ಇದು ಕೊಕೊ ಗಾಫ್ ಗೆದ್ದ ಎರಡನೇ ಸಿಂಗಲ್ಸ್ ಹಾಗೂ ಮೊದಲ ಕ್ಲೇ ಕೋರ್ಟ್ ಪ್ರಶಸ್ತಿ. ಮೊದಲ ಪ್ರಶಸ್ತಿ 2019ರಲ್ಲಿ ಆಸ್ಟ್ರಿಯಾದ ಲೀಂಝ್ ಟೆನಿಸ್ ಕೂಟದಲ್ಲಿ ಒಲಿದಿತ್ತು.
ಇದನ್ನೂ ಓದಿ :ಮೂರನೇ ಆಲೆ ಆತಂಕ: ಪರಿಷತ್ ಸಭಾಪತಿ ಹೊರಟ್ಟಿ ಸಲಹೆ
ಡಬಲ್ಸ್ ಸಾಧನೆ
ವನಿತಾ ಡಬಲ್ಸ್ನಲ್ಲಿ ಅವರು ಅಮೆರಿಕದವರೇ ಆದ ಕ್ಯಾಟಿ ಮೆಕ್ನಾಲಿ ಜತೆಗೂಡಿ ಆ್ಯಂಡ್ರೆಜಾ ಕ್ಲೆಪಾಕ್ (ಸ್ಲೊವೇನಿಯಾ)-ಡರಿಜಾ ಜುರಾಕ್ (ಜೆಕೊಸ್ಲೊವಾಕಿಯಾ) ವಿರುದ್ಧ 6-3, 6-2 ಅಂತರದ ಗೆಲುವು ಒಲಿಸಿಕೊಂಡರು. ಇದರೊಂದಿಗೆ ಕೊಕೊ ಗಾಫ್ 17 ವರ್ಷಗಳ ಬಳಿಕ ಸಿಂಗಲ್ಸ್ ಹಾಗೂ ಡಬಲ್ಸ್ ಪ್ರಶಸ್ತಿಗಳೆರಡನ್ನೂ ಗೆದ್ದ ವಿಶ್ವದ ಅತೀ ಕಿರಿಯ ಆಟಗಾರ್ತಿ ಎನಿಸಿದರು. 2004ರಲ್ಲಿ ಮರಿಯಾ ಶರಪೋವಾ ಈ ದಾಖಲೆ ಸ್ಥಾಪಿಸಿದ್ದರು. ಆಗ ಗಾಫ್ 3 ತಿಂಗಳ ಕೂಸು!
ಗಾಫ್ ಕಳೆದ ವಾರವಷ್ಟೇ ಇಟಾಲಿಯನ್ ಓಪನ್ ಟೆನಿಸ್ ಕೂಟದ ಸೆಮಿಫೈನಲ್ ತನಕ ಪ್ರವೇಶಿಸಿದ್ದರು. ಪಾರ್ಮಾ ಕೂಟದಲ್ಲಿ ಕೇವಲ ಒಂದು ಸೆಟ್ ಕಳೆದುಕೊಂಡು ತಮ್ಮ ಅಮೋಘ ಫಾರ್ಮ್ ಪ್ರದರ್ಶಿಸಿ ಫ್ರೆಂಚ್ ಓಪನ್ಗೆ ಹೊಸ ಸ್ಫೂರ್ತಿಯಿಂದ ಸಜ್ಜಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಯುವ ಜನಾಂಗಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ: ಪ್ರಧಾನಿ ಮೋದಿ
ಉಗ್ರರ ದಾಳಿ ; ಬಾಬರ್, ಶಾಹಿದ್ ಅಫ್ರಿದಿ ಸೇರಿ ಪಾಕ್ ಆಟಗಾರರು ಸುರಕ್ಷಿತ ಸ್ಥಳಕ್ಕೆ
ಪತ್ನಿಯ ಮುಖ ಕಾಣುವ ಫೋಟೋ ವೈರಲ್: ಗೌಪ್ಯತೆಗೆ ಧಕ್ಕೆ ಎಂದು ಬೇಸರ ಹಂಚಿಕೊಂಡ ಶಾಹೀನ್
ಮತ್ತೆ ಅರಬ್ಬರ ನಾಡಿನಲ್ಲಿ ನಡೆಯುತ್ತಾ ಏಷ್ಯಾಕಪ್?: ಪಾಕ್ ಗೆ ಮುಖಭಂಗ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
MUST WATCH
ಹೊಸ ಸೇರ್ಪಡೆ
ಮಂಗಳೂರು: ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ… ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಭಾರತದ ಯುವ ಜನಾಂಗಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ: ಪ್ರಧಾನಿ ಮೋದಿ
2005 ರ ಭಾರತ ಭೇಟಿ; ಬರ್ತ್ ಸರ್ಟಿಫಿಕೇಟ್ ಉಡುಗೊರೆಯಾಗಿ ಪಡೆದಿದ್ದ ಮುಷರಫ್
ಪಾಂಗಾಳ: ಚೂರಿಯಿಂದ ಇರಿದು ಯುವಕನ ಬರ್ಬರ ಹತ್ಯೆ
ಮಹದಾಯಿ ವಿಚಾರದ ಬಗ್ಗೆ ಅಧ್ಯಯನ ಮಾಡಲು ಹೆಚ್ಚಿನ ಕಾಲಾವಕಾಶ ಬೇಕಿದೆ: ಭೂಪೇಂದ್ರ ಯಾದವ್