ಶರಪೋವಾ 11 ಸ್ಥಾನ ನೆಗೆತ
Team Udayavani, May 22, 2018, 7:00 AM IST
ಪ್ಯಾರಿಸ್: ಸೋಮವಾರ ಬಿಡುಗಡೆಗೊಂಡ ನೂತನ ಡಬ್ಲ್ಯುಟಿಎ ರ್ಯಾಂಕಿಂಗ್ನಲ್ಲಿ ಮರಿಯಾ ಶರಪೋವಾ 11 ಸ್ಥಾನಗಳ ನೆಗೆತದೊಂದಿಗೆ 29ನೇ ಸ್ಥಾನಕ್ಕೇರಿದ್ದಾರೆ.
ಸಿಮೋನಾ ಹಾಲೆಪ್ ಅಗ್ರಸ್ಥಾನ ಉಳಿಸಿಕೊಂಡಿದ್ದು, ಕ್ಯಾರೋಲಿನ್ ವೋಜ್ನಿಯಾಕಿ, ಗಾರ್ಬಿನ್ ಮುಗುರುಜಾ 2ನೇ ಹಾಗೂ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಟಾಪ್-10 ಯಾದಿಯಲ್ಲಿ ಜೆಲೆನಾ ಒಸ್ಟಾಪೆಂಕೊ ಒಂದು ಸ್ಥಾನ ಮೇಲೇರಿದರೆ (5), ಕ್ಯಾರೋಲಿನಾ ಪ್ಲಿಸ್ಕೋವಾ ಒಂದು ಸ್ಥಾನ ಕೆಳಕ್ಕಿಳಿದಿದ್ದಾರೆ (6).
ಟಾಪ್-10 ವನಿತಾ ರ್ಯಾಂಕಿಂಗ್
1. ಸಿಮೋನಾ ಹಾಲೆಪ್ (7,270), 2. ಕ್ಯಾರೋಲಿನ್ ವೋಜ್ನಿಯಾಕಿ (6,935), 3. ಗಾರ್ಬಿನ್ ಮುಗುರುಜಾ (6,010), 4. ಎಲಿನಾ ಸ್ವಿಟೋಲಿನಾ (5,505), 5. ಜೆಲೆನಾ ಒಸ್ಟಾಪೆಂಕೊ (5,382), 6. ಕ್ಯಾರೋಲಿನಾ ಪ್ಲಿಸ್ಕೋವಾ (5,335), 7. ಕ್ಯಾರೋಲಿನ್ ಗಾರ್ಸಿಯಾ (5,170), 8. ಪೆಟ್ರಾ ಕ್ವಿಟೋವಾ (4,550), 9. ವೀನಸ್ ವಿಲಿಯಮ್ಸ್ (4,201), 10. ಸ್ಲೋನ್ ಸ್ಟೀಫನ್ಸ್ (4,164).