ಟೆಸ್ಟ್‌ : ಬಾಂಗ್ಲಾದೇಶಕ್ಕೆ ಇನ್ನಿಂಗ್ಸ್‌ ಗೆಲುವು

Team Udayavani, Feb 26, 2020, 6:40 AM IST

ಢಾಕಾ: ಪ್ರವಾಸಿ ಜಿಂಬಾಬ್ವೆ ಎದುರಿನ ಏಕೈಕ ಟೆಸ್ಟ್‌ ಪಂದ್ಯವನ್ನು ಬಾಂಗ್ಲಾದೇಶ ಇನ್ನಿಂಗ್ಸ್‌ ಹಾಗೂ 106 ರನ್ನುಗಳ ಅಂತರದಿಂದ ಜಯಿಸಿದೆ.

295 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಜಿಂಬಾಬ್ವೆ, ಮಂಗಳವಾರ 189ಕ್ಕೆ ತನ್ನ ದ್ವಿತೀಯ ಸರದಿಯನ್ನು ಮುಗಿಸಿತು. ಸ್ಪಿನ್ನರ್‌ಗಳಾದ ನಯೀಮ್‌ ಹಸನ್‌ (5 ವಿಕೆಟ್‌) ಮತ್ತು ತೈಜುಲ್‌ ಹಸನ್‌ (4 ವಿಕೆಟ್‌) ಜಿಂಬಾಬ್ವೆ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. 43 ರನ್‌ ಮಾಡಿದ ನಾಯಕ ಕ್ರೆಗ್‌ ಇರ್ವಿನ್‌ ಅವರದೇ ಜಿಂಬಾಬ್ವೆ ಸರದಿಯ ಸರ್ವಾಧಿಕ ವೈಯಕ್ತಿಕ ಗಳಿಕೆ. ಇರ್ವಿನ್‌ ಮೊದಲ ಇನ್ನಿಂಗ್ಸ್‌ನಲ್ಲಿ 107 ರನ್‌ ಬಾರಿಸಿದ್ದರು.

ಜಿಂಬಾಬ್ವೆಯ 265 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಬಾಂಗ್ಲಾದೇಶ 6ಕ್ಕೆ 560 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತ್ತು. ದ್ವಿಶತಕ ಬಾರಿಸಿದ ಮುಶ್ಫಿಕರ್‌ ರಹೀಂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ-265 ಮತ್ತು 189 (ಇರ್ವಿನ್‌ 43, ಮರುಮ 41, ರಾಜ 37, ನಯೀಮ್‌ 82ಕ್ಕೆ 5, ತೈಜುಲ್‌ 78ಕ್ಕೆ 4). ಬಾಂಗ್ಲಾದೇಶ-6 ವಿಕೆಟಿಗೆ 560 ಡಿಕ್ಲೇರ್‌. ಪಂದ್ಯಶ್ರೇಷ್ಠ: ಮುಶ್ಫಿಕರ್‌ ರಹೀಂ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೋವಿಡ್‌ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು...

  • ಕುಂದಾಪುರ: ಉಡುಪಿ ಜಿಲ್ಲೆಯ ಶಿರೂರು, ಹೊಸಂಗಡಿ, ಕುಂದಾಪುರ ನಗರ ಭಾಗದಲ್ಲಿ ಮಾತ್ರವಲ್ಲದೆ ಅಂಪಾರು ಮತ್ತಿತರ ಕೆಲವೆಡೆಗಳಲ್ಲಿಯೂ ಶನಿವಾರದಿಂದ ಚೆಕ್‌ಪೋಸ್ಟ್‌ಗಳನ್ನು...

  • ಬೆಂಗಳೂರು: ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ...

  • ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ. ಶನಿವಾರ...

  • ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾ. 27ರಂದು ಒಂದೇ ದಿನ ಎರಡು ಕೋವಿಡ್‌ 19 ಸೋಂಕು ದೃಢ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ಧರಿಸಿದ್ದು,...