ಟೆಸ್ಟ್‌ ಕ್ರಿಕೆಟ್‌: ಮುಶ್ಫಿಕರ್‌ ರಹೀಂ ದ್ವಿಶತಕ

Team Udayavani, Feb 25, 2020, 6:30 AM IST

ಢಾಕಾ: ಬಾಂಗ್ಲಾದೇಶದ ಅನುಭವಿ ಬ್ಯಾಟ್ಸ್‌ಮನ್‌ ಮುಶ್ಫಿಕರ್‌ ರಹೀಂ ಟೆಸ್ಟ್‌ ಕ್ರಿಕೆಟ್‌ನಲ್ಲಿ 3ನೇ ದ್ವಿಶತಕ ಬಾರಿಸಿದ್ದಾರೆ. ಪ್ರವಾಸಿ ಜಿಂಬಾಬ್ವೆ ಎದುರಿನ ಏಕೈಕ ಟೆಸ್ಟ್‌ ಪಂದ್ಯದ 3ನೇ ದಿನವಾದ ಸೋಮವಾರ ರಹೀಂ ಅಜೇಯ 203 ರನ್‌ ಹೊಡೆದು ಮೆರೆದರು.

ಜಿಂಬಾಬ್ವೆಯ 265ಕ್ಕೆ ಉತ್ತರವಾಗಿ ಬಾಂಗ್ಲಾದೇಶ 6 ವಿಕೆಟಿಗೆ 560 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಇದು ಜಿಂಬಾಬ್ವೆ ವಿರುದ್ಧ ಬಾಂಗ್ಲಾ ದಾಖಲಿಸಿದ ಅತ್ಯಧಿಕ ಮೊತ್ತ.

ರಹೀಂ 318 ಎಸೆತಗಳಿಂದ ತಮ್ಮ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 28 ಬೌಂಡರಿ ಸೇರಿತ್ತು. ನಾಯಕ ಮೊಮಿನುಲ್‌ ಹಕ್‌ 132 ರನ್‌ ಹೊಡೆದರು (234 ಎಸೆತ, 14 ಬೌಂಡರಿ). ಮುಶ್ಫಿಕರ್‌-ಮೊಮಿನುಲ್‌ ಜೋಡಿಯಿಂದ 4ನೇ ವಿಕೆಟಿಗೆ 222 ರನ್‌ ಹರಿದು ಬಂತು.

295 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿರುವ ಜಿಂಬಾಬ್ವೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 9 ರನ್‌ ಮಾಡುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡಿದೆ. ಎರಡೂ ವಿಕೆಟ್‌ ಸ್ಪಿನ್ನರ್‌ ನಯೀಂ ಹಸನ್‌ ಪಾಲಾಯಿತು. ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಜಿಂಬಾಬ್ವೆ ಇನ್ನೂ 286 ರನ್‌ ಮಾಡಬೇಕಿದೆ.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ-265 ಮತ್ತು 2 ವಿಕೆಟಿಗೆ 9. ಬಾಂಗ್ಲಾದೇಶ-6 ವಿಕೆಟಿಗೆ 560 ಡಿಕ್ಲೇರ್‌ (ರಹೀಂ 203, ಮೊಮಿನುಲ್‌ 132, ನಜ್ಮುಲ್‌ 71, ದಾಸ್‌ 53).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ