ಟೆಸ್ಟ್‌ ಕ್ರಿಕೆಟಿಗೆ ಹೊಸತನ ತುಂಬಬೇಕಿದೆ: ಗಂಗೂಲಿ

Team Udayavani, Nov 18, 2019, 11:31 PM IST

ಕೋಲ್ಕತಾ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಅಗ್ರ ತಂಡವಾಗಿರಬಹುದು. ಆದರೆ ಭಾರತದ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸ್ಟೇಡಿಯಂಗೆ ಬರುತ್ತಿಲ್ಲ. ಟೆಸ್ಟ್‌ ಕ್ರಿಕೆಟ್‌ ಆಕರ್ಷಣೆ ಕಡಿಮೆಯಾಗಿದ್ದು, ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂತಾಗಿದೆ. ಹೀಗಾಗಿ 5 ದಿನಗಳ ಪಂದ್ಯಗಳಿಗೆ ಹೊಸತನ ತುಂಬಬೇಕಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತನ್ನ ಮೊದಲ ಡೇ-ನೈಟ್‌ ಟೆಸ್ಟ್‌ ಪಂದ್ಯದ ಆಯೋಜನೆಗೆ ಸಜ್ಜಾಗಿದ್ದು, ಇಂಥ ಪ್ರಯೋಗಗಳ ಮೂಲಕ ಟೆಸ್ಟ್‌ ಕ್ರಿಕೆಟಿನ ಆಕರ್ಷಣೆಯನ್ನು ಹೆಚ್ಚಿಸಬೇಕಿದೆ ಎಂದು ಗಂಗೂಲಿ ಹೇಳಿದರು. ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನ. 22ರಿಂದ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆಯಾ ಗಿರುವ ಮಾಜಿ ನಾಯಕ ಸೌರವ್‌ ಗಂಗೂಲಿ, ಭಾರತದ ಡೇ-ನೈಟ್‌ ಟೆಸ್ಟ್‌ ಆಯೋಜನೆಯಲ್ಲಿ ಮಹತ್ತರ ಪಾತ್ರವಹಿಸಿ¨ªಾರೆ. ಇದು ಟೆಸ್ಟ್‌ ಕ್ರಿಕೆಟಿಗೆ ಹೊಸ ಚೈತನ್ಯ ತುಂಬುವ ನಿರೀಕ್ಷೆಯಿದೆ. ಮತ್ತೂಂದೆಡೆ ಪಂದ್ಯ ಆರಂಭಕ್ಕೆ 5 ದಿನಗಳ ಮೊದಲೇ “ಪಿಂಕು-ಟಿಂಕು’ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ.

ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕಾಗಿ ಇಡೀ ಕೋಲ್ಕತಾ ನಗರ ಗುಲಾಲಿಮಯವಾಗುತ್ತಿದೆ. ನಗರದೆÇÉೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ