ಟೆಸ್ಟ್‌: ಇಂಗ್ಲೆಂಡ್‌ ಎಚ್ಚರಿಕೆಯ ಆಟ

Team Udayavani, Nov 22, 2019, 12:04 AM IST

ಮೌಂಟ್‌ ಮೌಂಗನುಯಿ (ನ್ಯೂಜಿಲ್ಯಾಂಡ್‌): ಆತಿಥೇಯ ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಸರಣಿಯನ್ನು ಇಂಗ್ಲೆಂಡ್‌ ಬಹಳ ಎಚ್ಚರಿಕೆಯಿಂದ ಆರಂಭಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿದೆ.

ಇಂಗ್ಲೆಂಡ್‌ ಸರದಿಯಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ಆರಂಭಕಾರ ರೋರಿ ಬರ್ನ್ಸ್ 52, ವನ್‌ಡೌನ್‌ ಬ್ಯಾಟ್ಸ್‌ಮನ್‌ ಜೋ ಡೆನ್ಲಿ 74 ರನ್‌ ಹೊಡೆದರು. ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ 67 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ ಕ್ರೀಸಿನಲ್ಲಿರುವವರು 18 ರನ್‌ ಮಾಡಿದ ಓಲೀ ಪೋಪ್‌. ಓಪನರ್‌ ಡೊಮಿನಿಕ್‌ ಸಿಬ್ಲಿ ಗಳಿಕೆ 22 ರನ್‌. ನಾಯಕ ಜೋ ರೂಟ್‌ (2) ಮಾತ್ರ ಬೇಗನೇ ಔಟಾದರು.

ನ್ಯೂಜಿಲ್ಯಾಂಡ್‌ ಪರ ಗ್ರ್ಯಾಂಡ್‌ ಹೋಮ್‌ 2 ವಿಕೆಟ್‌, ಸೌಥಿ ಮತ್ತು ವ್ಯಾಗ್ನರ್‌ ಒಂದೊಂದು ವಿಕೆಟ್‌ ಕಿತ್ತರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ