ಐಸಿಸಿ ಬ್ಯಾಟಿಂಗ್ ರ್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ
Team Udayavani, Oct 13, 2018, 1:12 PM IST
ದುಬಾೖ: ಪಾಕಿಸ್ಥಾನ-ಆಸ್ಟ್ರೇಲಿಯ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಗಿದ ಬಳಿಕ ಐಸಿಸಿ ರ್ಯಾಂಕಿಂಗ್ ಯಾದಿ ಯನ್ನು ಪರಿಷ್ಕರಿಸಲಾಗಿದ್ದು, ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ದುಬಾೖ ಟೆಸ್ಟ್ನಲ್ಲಿ ಅಮೋಘ ಶತಕದ ಮೂಲಕ ಆಸ್ಟ್ರೇಲಿಯವನ್ನು ಸೋಲಿನಿಂದ ಬಚಾಯಿಸಿದ ಉಸ್ಮಾನ್ ಖ್ವಾಜಾ ಮೊದಲ ಬಾರಿಗೆ ಟಾಪ್-10 ಯಾದಿಯನ್ನು ಪ್ರವೇಶಿಸಿದ್ದಾರೆ.
ಪಾಕಿಸ್ಥಾನ ವಿರುದ್ಧದ ದುಬಾೖ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 85 ರನ್ ಬಾರಿಸಿದ ಖ್ವಾಜಾ, ದ್ವಿತೀಯ ಸರದಿಯಲ್ಲಿ 141 ರನ್ ಪೇರಿಸಿ ತಂಡದ ಮರ್ಯಾದೆ ಕಾಪಾಡಿದ್ದರು. ಖ್ವಾಜಾ ರ್ಯಾಂಕಿಂಗ್ ಬಡ್ತಿ ಪಡೆದುದರಿಂದ ದಕ್ಷಿಣ ಆಫ್ರಿಕಾ ಆರಂಭಕಾರ ಐಡನ್ ಮಾರ್ಕ್ರಮ್ ಟಾಪ್-10 ಯಾದಿಯಿಂದ ಹೊರಬಿದ್ದರು. ಉಳಿದಂತೆ ಟಾಪ್-10 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 936 ಅಂಕಗಳನ್ನು ಹೊಂದಿದ್ದು, ಅವರ ಜೀವನಶ್ರೇಷ್ಠ ಸಾಧನೆ ಗಿಂತ ಒಂದಂಕ ಕಡಿಮೆ ಯಾಗಿದೆ. ಸ್ಟೀವನ್ ಸ್ಮಿತ್, ಕೇನ್ ವಿಲಿಯಮ್ಸನ್ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಪಾಕಿಸ್ಥಾನದ ಬೌಲರ್ಗಳು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ದುಬಾೖ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಕಿತ್ತ ಮೊಹಮ್ಮದ್ ಅಬ್ಟಾಸ್, ವೆಸ್ಟ್ ಇಂಡೀಸಿನ ಜಾಸನ್ ಹೋಲ್ಡರ್ ಜತೆ 13ನೇ ಸ್ಥಾನ ಹಂಚಿಕೊಂಡಿದ್ದಾರೆ. ಚೊಚ್ಚಲ ಟೆಸ್ಟ್ ಆಡಿದ ಬಿಲಾಲ್ ಆಸಿಫ್ 69ನೇ ರ್ಯಾಂಕಿಂಗ್ನೊಂದಿಗೆ ಖಾತೆ ತೆರೆದಿದ್ದಾರೆ.
ಕುಲದೀಪ್ 16 ಸ್ಥಾನ ಜಿಗಿತ
ಭಾರತದ ಕುಲದೀಪ್ ಯಾದವ್ 16 ಸ್ಥಾನಗಳ ಪ್ರಗತಿ ಸಾಧಿಸಿದ್ದು, 52ನೇ ಸ್ಥಾನಕ್ಕೆ ಏರಿದ್ದಾರೆ. ರಾಜ್ಕೋಟ್ ಟೆಸ್ಟ್ನಲ್ಲಿ ಅವರು ಮೊದಲ ಬಾರಿಗೆ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಉರುಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು