ಪಾಕ್‌ ನೆಲದಲ್ಲಿ 10 ವರ್ಷ ಬಳಿಕ ಟೆಸ್ಟ್‌ ಸರಣಿ

Team Udayavani, Dec 11, 2019, 12:21 AM IST

ರಾವಲ್ಪಿಂಡಿ: ಪಾಕಿಸ್ಥಾನ ಕ್ರಿಕೆಟಿಗರು 10 ವರ್ಷಗಳ ಸುದೀರ್ಘ‌ ಸಮಯದ ಬಳಿಕ ತಾಯ್ನಾಡಿನಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡುವ ಸಂಭ್ರಮದಲ್ಲಿದ್ದಾರೆ.

ಪಾಕಿಸ್ಥಾನ ತಂಡವು ಬುಧವಾರದಿಂದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್‌ ಮೇಲೆ ಉಗ್ರರ ದಾಳಿ ನಡೆದ ಬಳಿಕ ಯಾವುದೇ ದೇಶದ ಕ್ರಿಕೆಟ್‌ ತಂಡ ಟೆಸ್ಟ್‌ ಸರಣಿ ಯನ್ನಾಡಲು ಪಾಕಿಸ್ಥಾನಕ್ಕೆ ಹೋಗಿಲ್ಲ. ಇದೀಗ ಶ್ರೀಲಂಕಾ ತಂಡವೇ ಟೆಸ್ಟ್‌ ಸರಣಿ ಆಡಲು ಮತ್ತೆ ಪಾಕಿಸ್ಥಾನ ನೆಲಕ್ಕೆ ಕಾಲಿಡುತ್ತಿದೆ. ಈ ನಡುವೆ ತಟಸ್ಥ ತಾಣಗಳಲ್ಲಿ ಪಾಕಿಸ್ಥಾನ ತಂಡವು ಉಳಿದ ತಂಡಗಳ ಜತೆ ತನ್ನ ತವರಿನ ಪಂದ್ಯಗಳನ್ನು ಆಡಿತ್ತು.

2009ರ ಉಗ್ರರ ದಾಳಿಯಲ್ಲಿ ಶ್ರೀಲಂಕಾದ ಹಲವು ಕ್ರಿಕೆಟಿಗರು ಮತ್ತು ತಂಡದ ಅಧಿಕಾರಿಗಳು ಗಾಯಗೊಂಡಿ ದ್ದರು. ಈ ಘಟನೆಯ ಬಳಿಕ ಪಾಕಿಸ್ಥಾನ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಥಗಿತಗೊಂಡಿತ್ತು.

ಭಾವನಾತ್ಮಕ ಕ್ಷಣ
ಪಾಕಿಸ್ಥಾನ ನೆಲದಲ್ಲಿ ಮರಳಿ ಟೆಸ್ಟ್‌ ಸರಣಿ ನಡೆಯುವುದು ನಮ್ಮ ಪಾಲಿಗೆ ಭಾವನಾತ್ಮಕ ಕ್ಷಣವಾಗಿದೆ. ಎಲ್ಲ ಆಟಗಾರರು ಈ ಸರಣಿ ಬಗ್ಗೆ ಉತ್ಸುಕರಾಗಿದ್ದಾರೆ. ನಮ್ಮ ತಾಯ್ನಾಡ ಮೈದಾನದಲ್ಲಿ ಟೆಸ್ಟ್‌ ನಡೆಯುವುದು ಖುಷಿಯ ಕ್ಷಣವಾಗಿದೆ. ಇನ್ನು ಮುಂದೆ ಪಾಕ್‌ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ ನಿರಂತರವಾಗಿ ನಡೆಯಲಿ ಎಂದು ಪಾಕಿಸ್ಥಾನ ತಂಡದ ನಾಯಕ ಅಜರ್‌ ಅಲಿ ಹಾರೈಸಿದ್ದಾರೆ.

ಈ ಸರಣಿ ನಮ್ಮ ಪಾಲಿಗೆ ಅತೀ ಮುಖ್ಯವಾಗಿದೆ. ಯಾಕೆಂದರೆ ಕಳೆದ ಎರಡು ಸರಣಿಗಳಲ್ಲಿ ನಾವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ವಿರುದ್ಧ ಸೋತಿದ್ದೆವು. ಆಸ್ಟ್ರೇಲಿಯ ವಿರುದ್ಧ ನಾವು ಒಪ್ಪಲಿಕ್ಕೆ ಸಾಧ್ಯವಿಲ್ಲದ ರೀತಿ ಯಲ್ಲಿ ಸೋತಿದ್ದೆವು. ಹಾಗಾಗಿ ಶ್ರೀಲಂಕಾ ವಿರುದ್ಧದ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅಜರ್‌ ತಿಳಿಸಿದರು.

ಫ‌ಲಿತಾಂಶವನ್ನು ನಮ್ಮ ಕಡೆ ತಿರುಗಿ ಸಬೇಕಾಗಿದೆ. ಗೆಲುವಿನ ಟ್ರ್ಯಾಕ್‌ಗೆ ಮರಳುವುದು ಅತ್ಯಗತ್ಯ. ಈ ಮೂಲಕ ತವರಿನ ಅಭಿಮಾನಿಗಳಲ್ಲಿ ಪಾಕ್‌ ತಂಡದ ಮೇಲೆ ಅಭಿಮಾನ ಹುಟ್ಟಿ ಸಲು ಪ್ರಯತ್ನಿಸಬೇಕಾಗಿದೆ ಎಂದು ಅಜರ್‌ ವಿವರಿಸಿದರು.

ಶ್ರೀಲಂಕಾ ಕಠಿನ ತಂಡ
ಶಿಸ್ತುಬದ್ಧ ಕ್ರಿಕೆಟ್‌ ಆಡುವ ಲಂಕಾ ತಂಡ ಯಾವಾಗಲೂ ಕಠಿನ ತಂಡ. ಪ್ರತಿಯೊಂದು ವಿಭಾಗದಲ್ಲಿ ನಾವು ಕೂಡ ಶಿಸ್ತುಬದ್ಧವಾಗಿ ಆಡಿ ಎದುರಾಳಿ ತಂಡವನ್ನು ಕಟ್ಟಿಹಾಕಬೇಕಾಗಿದೆ. ನಾವು ಒಂದು ಅವಧಿಯಲ್ಲಿ ಟೆಸ್ಟ್‌ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಒಂದು ಅವಧಿಯಲ್ಲಿ ಸೋಲು ಕಾಣಬಹುದು. ಹಾಗಾಗಿ ಶಿಸ್ತಿನಿಂದ ಆಟವಾಡಿ ಲಂಕಾ ವನ್ನು ಸೋಲಿಸಬೇಕಾಗಿದೆ ಎಂದು ಅಜರ್‌ ತಿಳಿಸಿದರು.

ಮೊದಲ ಟೆಸ್ಟ್‌ ಪಂದ್ಯವು ಪಿಂಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ದ್ವಿತೀಯ ಪಂದ್ಯ ಕರಾಚಿ ಯಲ್ಲಿ ಡಿ. 19ರಿಂದ 23ರ ವರೆಗೆ ನಡೆಯಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಗವಾಗಿ ಈ ಸರಣಿ ನಡೆಯುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಂಗಳೂರು: ಇದುವರೆಗೆ ಕಪ್ಪು ಬಿಳುಪಿನಲ್ಲಿದ್ದು, ಮುಖ ಗುರುತು ಸಿಗುವುದು ಕಷ್ಟ ಎಂಬಂತಿದ್ದ ಮತದಾರರ ಗುರುತಿನ ಚೀಟಿ ಈಗ ಬಾರ್‌ಕೋಡ್‌, ಕಲರ್‌ ಫೋಟೋ ಸಹಿತ ಬಹು ವರ್ಣಗಳಲ್ಲಿ...

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...

  • ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈಗಾಗಲೇ ಶುರುವಾಗಿದ್ದು, 26ಕ್ಕೆ ಕೊನೆಗೊಳ್ಳಲಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಈ ಮಠದಲ್ಲಿ ಭೋಜನವೂ...

  • ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ...

  • ಕುರಿಗಾಹಿಯೊಬ್ಬನಿಗೆ ಭೀಮಾ ನದಿಯಲ್ಲಿ ಗಾಜಿನ ರೂಪದ ಕಂಬದಲ್ಲಿದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. ಆ ದೇವಿಯನ್ನು ಒಂದು ಸರ್ಪವು ಕಾಯುತ್ತಿತ್ತು... ಭೀಮಾ ನದಿಯಲ್ಲಿ...