ಇಂದಿನಿಂದ ಲಂಕಾ ವಿರುದ್ಧದ ಟೆಸ್ಟ್‌ ಸರಣಿ

Team Udayavani, Aug 14, 2019, 6:30 AM IST

ಕೊಲಂಬೊ: ಶ್ರೀಲಂಕಾ ವಿರುದ್ಧ ಬುಧವಾರದಿಂದ ಆರಂಭವಾ ಗುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲ್ಯಾಂಡ್‌ ತಂಡಕ್ಕೆ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ವಿಶ್ವಕಪ್‌ ಫೈನಲ್ನಲ್ಲಿ ಇಂಗ್ಲೆಂಡಿಗೆ ಸೋತ ಒಂದು ತಿಂಗಳ ಬಳಿಕ ನ್ಯೂಜಿ ಲ್ಯಾಂಡ್‌ ಟೆಸ್ಟ್‌ ಸರಣಿ ಯೊಂದರಲ್ಲಿ ಪಾಲ್ಗೊಳ್ಳಲಿದೆ. ಟೆಸ್ಟ್‌ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಸದ್ಯ ಕಿವೀಸ್‌ 109 ಅಂಕಗಳೊಂದಿಗೆ ದ್ವಿತೀಯ ಸ್ಥಾನ ದಲ್ಲಿದ್ದರೆ ಭಾರತ 113 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಒಂದು ವೇಳೆ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಗೆದ್ದರೆ ನ್ಯೂಜಿಲ್ಯಾಂಡ್‌ ನಂ. ವನ್‌ ಸ್ಥಾನಕ್ಕೇರಲಿದೆ.

ಸಮಸ್ಯೆಯಲ್ಲಿ ಸಿಲುಕಿರುವ ಶ್ರೀಲಂಕಾ ತಂಡವು ಗಾಲ್ನಲ್ಲಿ ಸ್ಪಿನ್‌ಗೆ ಹೆಚ್ಚಿನ ನೆರವು ನೀಡುವ ಪಿಚ್‌ನಲ್ಲಿ ಯಾವ ರೀತಿ ಆಡುತ್ತದೆ ಎಂಬುದನ್ನು ನೋಡಬೇಕಾಗಿದೆ. ಈ ತಾಣದಲ್ಲಿ ಇತ್ತೀಚೆಗೆ ನಡೆದ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಶ್ರೀಲಂಕಾ ನೀರಸವಾಗಿ ಆಡಿತ್ತು. ಮೊಯಿನ್‌ ಅಲಿ, ಅದಿಲ್ ರಶೀದ್‌ ಮತ್ತು ಜ್ಯಾಕ್‌ ಲೀಚ್ ಅವರ ದಾಳಿಗೆ ಶ್ರೀಲಂಕಾ ತತ್ತರಿಸಿತ್ತು. ಹೀಗಾಗಿ ಇಂಗ್ಲೆಂಡ್‌ 3-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದಿತ್ತು.

ನ್ಯೂಜಿಲ್ಯಾಂಡ್‌ ಬಲಿಷ್ಠ

ನ್ಯೂಜಿಲ್ಯಾಂಡ್‌ ಆಟದ ಪ್ರತಿ ಯೊಂದು ವಿಭಾಗದಲ್ಲಿಯೂ ಬಲಿಷ್ಠ ವಾಗಿದೆ. ಅಭ್ಯಾಸ ಪಂದ್ಯದಲ್ಲಿ ಐದು ವಿಕೆಟ್ ಕಿತ್ತ ಅಜಾಜ್‌ ಪಟೇಲ್ ಅವರು ಟಾಡ್‌ ಆ್ಯಸ್ಟಲ್ಗೆ ನೆರವಾ ಗಲಿದ್ದಾರೆ. ಅವರಿಬ್ಬರ ಸಹಿತ ಟ್ರೆಂಟ್ ಬೌಲ್r, ನೀಲ್ ವಾಗ್ನರ್‌, ಟಿಮ್‌ ಸೌಥಿ ಅವರಲ್ಲದೇ ಕಾಲಿನ್‌ ಗ್ರ್ಯಾಂಡ್‌ಹೋಮ್‌ ತಂಡದಲ್ಲಿದ್ದಾರೆ.

ಶ್ರೀಲಂಕಾ ತಂಡವನ್ನು ಕಡೆಗಣಿಸು ವಂತಿಲ್ಲ. ತವರಿನಲ್ಲಿ ಶ್ರೀಲಂಕಾ ಶ್ರೇಷ್ಠ ನಿರ್ವಹಣೆ ನೀಡುತ್ತ ಬಂದಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸರಣಿಯಲ್ಲಿ 2-0 ಅಂತರದಿಂದ ಸರಣಿ ಗೆದ್ದ ಸಾಧನೆ ಮಾಡಿದೆ.

ಶ್ರೀಲಂಕಾ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು ಯಾವುದೇ ಕಾರಣಕ್ಕೂ ಲಂಕಾವನ್ನು ಕಡೆಗಣಿಸುವಂತಿಲ್ಲ ಮತ್ತು ನಾವು ಬಹಳಷ್ಟು ಆತ್ಮವಿಶ್ವಾಸದೊಂದಿಗೆ ಶ್ರೀಲಂಕಾಕ್ಕೆ ಬಂದಿದ್ದೇವೆ ಎಂದು ನ್ಯೂಜಿಲ್ಯಾಂಡ್‌ ತಂಡದ ಕೋಚ್ ಗ್ಯಾರಿ ಸ್ಟೀಡ್‌ ಅವರು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ