ಟೆಸ್ಟ್‌ ಸರಣಿ: ವಿಂಡೀಸ್‌ ತಂಡಕ್ಕೆ ಕಾರ್ನ್ ವಾಲ್‌

Team Udayavani, Aug 12, 2019, 5:40 AM IST

ಕಿಂಗ್‌ಸ್ಟನ್‌: ಪ್ರವಾಸಿ ಭಾರತದೆದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಗೆ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರಕಟಿಸಲಾಗಿದೆ. 26ರ ಹರೆಯದ ಆಫ್ಸ್ಪಿನ್ನಿಂಗ್‌ ಆಲ್‌ರೌಂಡರ್‌ ರಖೀಂ ಕಾರ್ನ್ ವಾಲ್‌13 ಸದಸ್ಯರ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

5 ವರ್ಷಗಳ ಹಿಂದೆ ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಕಾರ್ನ್ ವಾಲ್‌ 55 ಪಂದ್ಯಗಳಿಂದ 260 ವಿಕೆಟ್‌ ಉರುಳಿಸಿದ್ದಾರೆ. ಒಂದು ಶತಕ, 13 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಇನ್ನಷ್ಟೇ ಟೆಸ್ಟ್‌ ಆಡಬೇಕಿದೆ. ವಿಶೇಷವೆಂದರೆ, ಕಾರ್ನ್ ವಾಲ್‌ ಕ್ರಿಕೆಟ್‌ ಇತಿಹಾಸದ ದಢೂತಿ ಆಟಗಾರರಲ್ಲಿ ಒಬ್ಬರಾಗಿದ್ದು, 140 ಕೆ.ಜಿ. ತೂಕ ಹೊಂದಿದ್ದಾರೆ!

ಗಾಯಾಳು ಆಟಗಾರರಾದ ಅಲ್ಜಾರಿ ಜೋಸೆಫ್, ಜೋಮೆಲ್‌ ವ್ಯಾರಿಕ್ಯಾನ್‌ ಅವರನ್ನು ಹೊರಗಿರಿಸಲಾಗಿದೆ. ಉಳಿದಂತೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ 2-1 ಸರಣಿ ಗೆದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

ಸರಣಿಯ ಟೆಸ್ಟ್‌ ಪಂದ್ಯಗಳು ನಾರ್ತ್‌ಸೌಂಡ್‌ (ಆ. 22-26) ಮತ್ತು ಕಿಂಗ್‌ಸ್ಟನ್‌ನಲ್ಲಿ (ಆ. 30-ಸೆ. 3) ನಡೆಯಲಿವೆ.

ವಿಂಡೀಸ್‌ ತಂಡ
ಜಾಸನ್‌ ಹೋಲ್ಡರ್‌ (ನಾಯಕ), ಕ್ರೆಗ್‌ ಬ್ರಾತ್‌ವೇಟ್‌, ಡ್ಯಾರನ್‌ ಬ್ರಾವೊ, ಶಮರ್‌ ಬ್ರೂಕ್ಸ್‌, ಜಾನ್‌ ಕ್ಯಾಂಬೆಲ್‌, ರೋಸ್ಟನ್‌ ಚೇಸ್‌, ರಖೀಂ ಕಾರ್ನ್ವಾಲ್‌, ಶೇನ್‌ ಡೌರಿಚ್‌, ಶಾನನ್‌ ಗ್ಯಾಬ್ರಿಯಲ್‌, ಶಿಮ್ರನ್‌ ಹೆಟ್‌ಮೈರ್‌, ಶೈ ಹೋಪ್‌, ಕೀಮೊ ಪೌಲ್‌, ಕೆಮರ್‌ ರೋಚ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ