ಥಾಯ್ಲೆಂಡ್ ಮಾಸ್ಟರ್ಸ್ ಕೂಟ: ಪ್ರಥಮ ಸುತ್ತಿನಲ್ಲೇ ಸೋತ ಸೈನಾ ನೆಹ್ವಾಲ್

ಸಮೀರ್ ವರ್ಮಾ, ಕೆ. ಶ್ರೀಕಾಂತ್ ಮತ್ತು ಪ್ರಣೋಯ್ ಅವರಿಗೂ ಸೋಲಿನ ಆಘಾತ

Team Udayavani, Jan 22, 2020, 7:42 PM IST

ಮುಂಬರುವ ಟೊಕಿಯೋ ಒಲಂಪಿಕ್ಸ್ ಗೆ ಪ್ರವೇಶ ಪಡೆದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ್ದಾಗಿದ್ದ ಥಾಯ್ಲೆಂಟ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಡೆನ್ಮಾರ್ಕ್ ಆಟಗಾರ್ತಿಗೆ ಶರಣಾಗುವುದರೊಂದಿಗೆ ಈ ಕೂಟದ ಪ್ರಥಮ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಡೆನ್ಮಾರ್ಕ್ ನ ಲಿನೆ ಝಾರ್ಸ್ ಫೆಲ್ಡ್ಟ್ ಅವರಿಗೆ 13-21, 21-17, 15-21ರಲ್ಲಿ ಶರಣಾಗುವ ಮೂಲಕ 29 ವರ್ಷದ ಈ ಭಾರತೀಯ ಆಟಗಾರ್ತಿಯ ಕೂಟ ಪಯಣ ಅಂತ್ಯಗೊಂಡಿತು.

ಸೈನಾ ನಹ್ವಾಲ್ ಮಾತ್ರವಲ್ಲದೇ ಈ ಕೂಟದಲ್ಲಿ ಭಾಗವಹಿಸಿರುವ ಭಾರತದ ಬ್ಯಾಡ್ಮಿಂಟನ್ ತಾರೆಗಳಾಗಿರುವ ಸಮೀರ್ ವರ್ಮಾ, ಕೆ. ಶ್ರೀಕಾಂತ್ ಮತ್ತು ಹೆಚ್.ಎಸ್.ಪ್ರಣೋಯ್ ಅವರೂ ಸಹ ಇಂದು ತಮ್ಮ ಪ್ರಥಮ ಪಂದ್ಯಗಳಲ್ಲೇ ಸೋತು ಹೊರಬೀಳುವ ಮೂಲಕ ಈ ಮಾಸ್ಟರ್ಸ್ ಕೂಟದಲ್ಲಿ ಭಾರತದ ಪಾಲಿಗೆ ಇಂದು ಕೆಟ್ಟ ದಿನವೇ ಆಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ