ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ : ಶ್ರೀಕಾಂತ್‌, ಸಮೀರ್‌, ಸೈನಾಗೆ ಸೋಲು

Team Udayavani, Jan 23, 2020, 12:32 AM IST

ಬ್ಯಾಂಕಾಕ್‌ (ಥಾಯ್ಲೆಂಡ್‌): ಬುಧವಾರ ಆರಂಭಗೊಂಡ “ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌’ ಕೂಟದಲ್ಲಿ ಭಾರತೀಯ ಶಟ್ಲರ್‌ಗಳು ನೀರಸ ಪ್ರದರ್ಶನ ನೀಡಿದ್ದಾರೆ. ಭರವಸೆಯ ಆಟಗಾರರಾದ ಕೆ. ಶ್ರೀಕಾಂತ್‌ ಮತ್ತು ಸಮೀರ್‌ ವರ್ಮ ಮೊದಲ ಸುತ್ತಿನಲ್ಲಿ ಸೋತು ನಿರಾಶೆ ಮೂಡಿಸಿದ್ದಾರೆ. ವನಿತೆಯರಲ್ಲಿ ಸೈನಾ ನೆಹ್ವಾಲ್‌ ಕೂಡ ಸೋತು ಹೊರನಡೆದಿದ್ದಾರೆ.

ಸಮೀರ್‌ ಮಲೇಶ್ಯದ ಲೀ ಜೀ ಜಿಯ ವಿರುದ್ಧ 16-21, 15-21 ನೇರ ಗೇಮ್‌ಗಳಿಂದ ಸೋತು ಕೂಟದಿಂದ ಹೊರಬಿದ್ದರು. ಈ ಸೋಲಿನೊಂದಿಗೆ ಸಮೀರ್‌ ಒಂದೇ ತಿಂಗಳಲ್ಲಿ ಜಿಯಾ ವಿರುದ್ಧ ಎರಡು ಬಾರಿ ಸೋಲನುಭವಿಸಿದಂತಾಯಿತು. ಈ ಹಿಂದೆ ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಸಮೀರ್‌ ಸೋಲುಂಡಿದ್ದರು.

ಮತ್ತೋರ್ವ ಆಟಗಾರ ಶ್ರೀಕಾಂತ್‌ ಇಂಡೋನೇಶ್ಯದ ಶೇಸರ್‌ ಹಿರಿನ್‌ ರುಸ್ತವಿಟೋ ವಿರುದ್ಧ 21-12, 14-21, 12-21 ಅಂತರದಿಂದ ಪರಾಭವಗೊಂಡರು. ಮೊದಲ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದ ಶ್ರೀಕಾಂತ್‌ ಅನಂತರ ಎದುರಾಳಿ ಆಟಗಾರನ ಆಕ್ರಮಣಕಾರಿ ಆಟದ ಮುಂದೆ ಸಂಪೂರ್ಣ ವಿಫ‌ಲರಾದರು.

ನೆಹ್ವಾಲ್‌ಗೆ ಸೋಲು
ಐದನೇ ಶ್ರೇಯಾಂಕದ ಸೈನಾ ಸತತ ಎರಡನೇ ಬಾರಿ ಮೊದಲ ಸುತ್ತಿನಲ್ಲಿ ಸೋತು ನಿರಾಶೆ ಮೂಡಿಸಿದ್ದಾರೆ. ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಅವರು ಡೆನ್ಮಾರ್ಕ್‌ನ ಲಿನ್‌ ಹೋಜ್ಮಾರ್ಕ್‌ ಜಾರ್ಸ್‌ಫೆಲ್ಡ್‌ ಅವರಿಗೆ 13-21, 21-17, 15-21 ಅಂತರದಿಂದ ಶರಣಾದರು. ಈ ಹೋರಾಟ 47 ನಿಮಿಷದ ವರೆಗೆ ಸಾಗಿತ್ತು. ಈ ಸೋಲಿನಿಂದ ಥಾಯ್ಲೆಂಡ್‌ ಓಪನ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಸೈನಾ ಕಳೆದ ವಾರ ನಡೆದ ಇಂಡೋನೇಶ್ಯ ಮಾಸ್ಟರ್ ಕೂಟದ ಮೊದಲ ಸುತ್ತಿನಲ್ಲಿ ಸೋತಿದ್ದರು. ಅದಕ್ಕಿಂತ ಮೊದಲು ಮಲೇಶ್ಯ ಮಾಸ್ಟರ್ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ