10 ವರ್ಷದ ಹಿಂದಿನ ಲೆಕ್ಕ ವ್ಯತ್ಯಾಸ: ಬಿಸಿಸಿಐಗೆ ತಲೆಬಿಸಿ

ರಿಸರ್ವ್‌ ಬ್ಯಾಂಕ್‌ ನೆರವು ಕೋರಿದ ಬಿಸಿಸಿಐ

Team Udayavani, Apr 26, 2019, 9:40 AM IST

ಮುಂಬಯಿ: ಪ್ರಸ್ತುತ ರದ್ದಾಗಿರುವ ಚಾಂಪಿಯನ್ಸ್‌ ಲೀಗ್‌ ಟಿ20 ಕೂಟದ ಆರ್ಥಿಕ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿರುವ ಘಟನೆ ಈಗ ಪತ್ತೆಯಾಗಿದೆ. ಆದ್ದರಿಂದ ಇದನ್ನು ಪತ್ತೆಹಚ್ಚಲು ಬಿಸಿಸಿಐ, ಆರ್‌ಬಿಐ ನೆರವು ಕೋರಿದೆ.

2009ರಲ್ಲಿ ಬಿಸಿಸಿಐ ವಿವಿಧ ದೇಶಿ ತಂಡಗಳು ಹಾಗೂ ಐಪಿಎಲ್‌ನ ಅಗ್ರ 3 ತಂಡಗಳ ನಡುವೆ ಚಾಂಪಿಯನ್ಸ್‌ ಲೀಗ್‌ ಟಿ20 ಪಂದ್ಯಾವಳಿ ನಡೆಸುತ್ತಿತ್ತು. ಆ ವೇಳೆ ಕ್ರಿಕೆಟ್‌ ಆಸ್ಟ್ರೇಲಿಯದಿಂದ 2 ಕೋಟಿ ರೂ. ಬಿಸಿಸಿಐಗೆ ಬರಬೇಕು ಎಂಬ ಬಿಸಿಸಿಐನ ಲೆಕ್ಕಪತ್ರದಲ್ಲಿ ತೋರಿಸಲಾಗಿದೆ.

ಇದನ್ನು ಕ್ರಿಕೆಟ್‌ ಆಸ್ಟ್ರೇಲಿಯದ ಬಳಿ ವಿಚಾರಿಸಿದಾಗ 2015ರ ವೇಳೆ ಎಲ್ಲ ಹಳೆಯ ಬಾಕಿಯನ್ನು ತೀರಿಸಲಾಗಿದೆ ಎಂದು ಅದು ಮಾಹಿತಿ ನೀಡಿದೆ. ಇದರಿಂದ ಗೊಂದಲಗೊಂಡಿರುವ ಬಿಸಿಸಿಐ ಆಡಳಿತಾಧಿಕಾರಿಗಳು, ಇದರ ಸತ್ಯಾಸತ್ಯತೆ ತಿಳಿಯಲು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ನೆರವು ಕೋರಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ಪ್ರವಾಸಿ ಶ್ರೀ ಲಂಕಾ 'ಎ ' ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 622 ರನ್ ಗಳಿಗೆ...

  • ಲಂಡನ್‌: ವಿಶ್ವಕಪ್‌ಗೆ ಸಿದ್ಧವಾಗುತ್ತಿರುವ ಭಾರತದ ತಂಡದಲ್ಲೂ ಗಾಯದ ಸಮಸ್ಯೆ ಗೋಚರಿಸಿದೆ. ಆಲ್‌ರೌಂಡರ್‌ ವಿಜಯ್‌ ಶಂಕರ್‌ ನ್ಯೂಜಿಲ್ಯಾಂಡ್‌ ವಿರುದ್ಧದ ಅಭ್ಯಾಸ...

  • ಲಂಡನ್‌: ವಿಶ್ವಕಪ್‌ ನಾಯಕರೆಲ್ಲ ಕಳೆದ ರಾತ್ರಿ ಲಂಡನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದರು. "ನಿಮ್ಮ ತಂಡದಲ್ಲಿ ಎದುರಾಳಿ ತಂಡ ದ ಯಾವ ಆಟಗಾರ ಇರಬೇಕೆಂದು...

  • ಲಾಹೋರ್‌: ಮಗಳ ಅಂತ್ಯ ಸಂಸ್ಕಾರ ಮುಗಿಸಿದ ಪಾಕಿಸ್ಥಾನಿ ಕ್ರಿಕೆಟಿಗ ಆಸಿಫ್ ಅಲಿ ಶನಿವಾರ ವಿಶ್ವಕಪ್‌ ತಂಡವನ್ನು ಕೂಡಿಕೊಳ್ಳಲು ಲಂಡನ್‌ನತ್ತ ಪ್ರಯಾಣ ಬೆಳೆಸಿದರು. ಕಳೆದ...

  • 1983ರಲ್ಲಿ ಕಪಿಲ್‌ದೇವ್‌ ಪಡೆಯ ಪರಾಕ್ರಮವನ್ನು ಕಣ್ತುಂಬಿಸಿಕೊಳ್ಳದೇ ಇದ್ದವರಿಗೆ 28 ವರ್ಷಗಳಷ್ಟು ಸುದೀರ್ಘ‌ ಅವಧಿಯ ಬಳಿಕ ಧೋನಿ ಪಡೆ ಭರಪೂರ ರಂಜನೆ ಒದಗಿಸಿತು....

ಹೊಸ ಸೇರ್ಪಡೆ