ಡೆಲ್ಲಿ-ಜೈಪುರ್‌ ಪಂದ್ಯ ರೋಚಕ ಟೈ

Team Udayavani, Dec 21, 2018, 6:00 AM IST

ಪಂಚಕುಲ (ಹರ್ಯಾಣ): ಆರನೇ ಆವೃತ್ತಿ ಪ್ರೊ ಕಬಡ್ಡಿಯ ಹರ್ಯಾಣ ಚರಣದ ದಬಾಂಗ್‌ ಡೆಲ್ಲಿ-ಜೈಪುರ್‌ ಪಿಂಕ್‌ ಪ್ಯಾಂಥರ್ ನಡುವಿನ ಕಟ್ಟಕಡೆಯ ಲೀಗ್‌ ಪಂದ್ಯ 37-37 ಅಂಕಗಳಿಂದ ರೋಚಕ ಟೈಯಲ್ಲಿ ಅಂತ್ಯ ಕಂಡಿತು. 

ಗುರುವಾರ ನಡೆದ ಏಕೈಕ ಪಂದ್ಯದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿ ದರೂ ಯಾರಿಗೂ ಗೆಲುವು ಕೈಹಿಡಿಯಲಿಲ್ಲ. “ಎ’  ವಲಯದಿಂದ ಈಗಾಗಲೇ ಪ್ಲೇ-ಆಫ್ಗೆ ತೇರ್ಗಡೆ ಗೊಂಡಿರುವ ಡೆಲ್ಲಿ ಪಾಲಿಗೆ ಇದೇನೂ ಮಹತ್ವದ ಪಂದ್ಯವಾಗಿರಲಿಲ್ಲ. ಆದರೆ ತನ್ನ ಸ್ಥಿತಿಯನ್ನು ಇನ್ನಷ್ಟು ಸುಧಾರಿಸಿಕೊಳ್ಳುವ ಯೋಜನೆ ಯಲ್ಲಿತ್ತು. ಕಡೆಯ ಕ್ಷಣದಲ್ಲಿ ಡೆಲ್ಲಿ ಈ ಅವಕಾಶವನ್ನು ಕಳೆದುಕೊಂಡಿತು. ಜೈಪುರ್‌ ಪರ ದೀಪಕ್‌ ಹೂಡಾ ಹಾಗೂ ಅಜಿಂಕ್ಯ ಪವಾರ್‌ ದಾಳಿಯಲ್ಲಿ ಮಿಂಚಿದರು. 16 ಬಾರಿ ಎದುರಾಳಿ ಕೋಟೆಗೆ ದಾಳಿಯಿಟ್ಟ ದೀಪಕ್‌, 7 ಬಾರಿ ಯಶಸ್ವಿಯಾಗಿ 7 ಅಂಕ ಗಳಿಸಿದರು. 

ಡೆಲ್ಲಿ ಪರ ಚಂದ್ರನ್‌ ರಂಜಿತ್‌ ಹಾಗೂ ಪವನ್‌ ಕಡಿಯನ್‌ ಮಿಂಚಿದರು. ಚಂದ್ರನ್‌ 15 ಬಾರಿ ಎದುರಾಳಿ ಕೋಟೆಗೆ ದಾಳಿಯಿಟ್ಟು 11 ಅಂಕ ಗಳಿಸಿದರು. ಪವನ್‌ 13 ಬಾರಿ ದಾಳಿ ನಡೆಸಿ 9 ಅಂಕ ಸಂಪಾದಿಸಿದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ