ಏಷ್ಯನ್ ಗೇಮ್ಸ್ಗೆ ಭಾರತ ತಂಡ ಇನ್ನೂ ಅಂತಿಮವಿಲ್ಲ
Team Udayavani, Aug 10, 2018, 6:10 AM IST
ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾ ಕೂಟಕ್ಕೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಪ್ರಕಟಿಸಿರುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಪಟ್ಟಿಗೆ ಕೇಂದ್ರ ಕ್ರೀಡಾ ಸಚಿವಾಲಯ ಇನ್ನೂ ಅನುಮೋದನೆ ನೀಡಿಲ್ಲ. ಈಗಾಗಲೇ ಐಒಎ ನಿಂದ 575 ಅಥ್ಲೀಟ್ಗಳು, 213 ಅಧಿಕಾರಿಗಳ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ.
ಐಒಎ ಆಯ್ಕೆ ಮಾಡಿರುವ ಚೀಫ್ ಡೆ ಮಿಷನ್ ರಾಜ್ ಕುಮಾರ್ ಸಚೇತಿ ಭ್ರಷ್ಟಾಚಾರದ ಆರೋಪ ಹೊತ್ತಿರುವುದು ವಿವಾದಕ್ಕೆ ಕಾರಣವಾಗಿದ್ದು ಇವರ ಆಯ್ಕೆ ಕುರಿತಂತೆ ಗೊಂದಲ ಇನ್ನೂ ಪರಿಹಾರವಾಗಿಲ್ಲ. ಎಲ್ಲರ ಚಿತ್ತ ಕ್ರೀಡಾ ಇಲಾಖೆಯತ್ತ ನೆಟ್ಟಿದ್ದು ಇನ್ನೆರಡು ದಿನಗಳಲ್ಲಿ ಕ್ರೀಡಾ ಸಚಿವಾಲಯ ಅಂತಿಮ ಪಟ್ಟಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.