Udayavni Special

ಐಒಸಿ ಅಂಗಳದಲ್ಲಿದೆ “ಟೋಕಿಯೊ ಚೆಂಡು’

ಯಾವುದೇ ನಿರ್ಧಾರಕ್ಕೆ ಬರಲು ಐಒಸಿಗೆ ಮೂರು ಎರಡರ ಬಹುಮತ ಅಗತ್ಯ

Team Udayavani, Mar 21, 2020, 10:40 PM IST

ಐಒಸಿ ಅಂಗಳದಲ್ಲಿದೆ “ಟೋಕಿಯೊ ಚೆಂಡು’

ಟೋಕಿಯೊ: ಹೌದು, ಟೋಕಿಯೊ ಚೆಂಡು ಅಂತಾ ರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ (ಐಒಸಿ) ಅಂಗಳದಲ್ಲಿದೆ. “ಆಟಗಾರರ ಸುರಕ್ಷತೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಕ್ರೀಡಾಕೂಟವನ್ನು ರದ್ದುಗೊಳಿಸಲಾಗುವುದು’-ಎಂಬ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಶರತ್ತಿಗೆ ಆತಿಥೇಯ ದೇಶದ ಒಲಿಂಪಿಕ್ಸ್‌ ಸಮಿತಿ ಮೊದಲೇ ಸಹಿ ಹಾಕಿರುತ್ತದೆ. ಇದಕ್ಕೆ ಟೋಕಿಯೊ ಒಲಿಂಪಿಕ್ಸ್‌ ಕೂಡ ಹೊರತಲ್ಲ. ಹೀಗಾಗಿ ಕೊರೊನಾ ಭೀತಿಗೆ ಸಿಲುಕಿರುವ ಟೋಕಿಯೊ ಒಲಿಂಪಿಕ್ಸ್‌ ಭವಿಷ್ಯವನ್ನು ಐಒಸಿಯೇ ನಿರ್ಧರಿಸಬೇಕಿದೆ.

ಜಪಾನ್‌ ಮಾತ್ರ ನಿಗದಿತ ವೇಳಾಪಟ್ಟಿಯಂತೆಯೇ ಒಲಿಂಪಿಕ್ಸ್‌ ನಡೆಸುವ ವಿಶ್ವಾಸದಲ್ಲಿದೆ. ಕೂಟಕ್ಕೆ ಇನ್ನೂ 4 ತಿಂಗಳಿದೆ, ಅಷ್ಟರಲ್ಲಿ ಕೊರೊನಾ ಹತೋಟಿಗೆ ಬಂದು, ಕೂಟ ಯಶಸ್ವಿಯಾಗಿ ನಡೆಯಲಿದೆ ಎಂಬ ನಂಬಿಕೆ ಜಪಾನಿನದ್ದು.

ಮುಹಾಯುದ್ಧವಷ್ಟೇ ಅಡ್ಡಿಯಾಗಿತ್ತು
1896ರಲ್ಲಿ ಆಧುನಿಕ ಒಲಿಂಪಿಕ್ಸ್‌ ಮೊದಲ್ಗೊಂಡ ಬಳಿಕ ಈವರೆಗೆ ಈ ಕ್ರೀಡಾಕೂಟ ಮಹಾಯುದ್ಧಗಳ ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ರದ್ದುಗೊಂಡದ್ದಿಲ್ಲ. ಮಹಾಯುದ್ಧಕ್ಕೆ 1916, 1940 ಮತ್ತು 1944ರ ಒಲಿಂಪಿಕ್ಸ್‌ ಬಲಿಯಾಗಿದ್ದವು. ಉಳಿದಂತೆ ನಾನಾ ಬಹಿಷ್ಕಾರಗಳ ನಡುವೆಯೂ ಮಾಂಟ್ರಿಯಲ್‌ (1976), ಮಾಸ್ಕೊ (1980), ಲಾಸ್‌ ಏಂಜಲೀಸ್‌ (1984) ಒಲಿಂಪಿಕ್ಸ್‌ ಯಶಸ್ವಿಯಾಗಿ ನಡೆದಿದ್ದವು.

ಇಂದು ಕೊರೊನಾ ಭೀತಿ ಎದುರಾದಂತೆ 2004ರ ಅಥೇನ್ಸ್‌ ಒಲಿಂಪಿಕ್ಸ್‌ಗೆ ಸಾರ್ ವೈರಸ್‌ ಕಂಟಕ ಕಾಡಿತ್ತು. ಆದರೂ ಕೂಟ ರದ್ದುಗೊಂಡಿರಲಿಲ್ಲ. ಹಾಗೆಯೇ 2016ರ ರಿಯೋ ಡಿ ಜನೈರೊ ಒಲಿಂಪಿಕ್ಸ್‌ ವೇಳೆ ಝೀಕಾ ವೈರಸ್‌ ಕಾಟವಿತ್ತು. ಕೂಟ ಯಶಸ್ವಿಯಾಗಿಯೇ ನಡೆದಿತ್ತು. ಹೀಗಾಗಿ ಕೊರೊನಾ ಹತೋಟಿಗೆ ಬಂದರೆ ಜುಲೈ-ಆಗಸ್ಟ್‌ ತಿಂಗಳಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಯಾವುದೇ ಅಡಚಣೆಯಾಗದು ಎಂಬುದು ಆಯೋಜಕರ ಲೆಕ್ಕಾಚಾರ.

ಐಒಸಿಯ ಸದ್ಯದ ನಿರ್ಧಾರ…
ಆದರೆ ಐಒಸಿ ಈ ನಿಟ್ಟಿನಲ್ಲಿ ಯಾವ ಹೆಜ್ಜೆ ಇರಿಸೀತು ಎಂಬುದರ ಮೇಲೆ ಟೋಕಿಯೊ ಒಲಿಂಪಿಕ್ಸ್‌ ಭವಿಷ್ಯ ಅವಲಂಬಿಸಿದೆ. ಕೂಟವನ್ನು ರದ್ದುಪಡಿಸುವ ಅಥವಾ ಮುಂದೂಡುವ ಸಂಪೂರ್ಣ ನಿರ್ಧಾರ ಐಒಸಿಯದ್ದು. ಆದರೆ ಇದಕ್ಕೆ ಮೂರು ಎರಡರಷ್ಟು ಬಹುಮತ ಅಗತ್ಯ. ಅಧ್ಯಕ್ಷ ಥಾಮಸ್‌ ಬಾಕ್‌ ಪ್ರಕಾರ ವೇಳಾಪಟ್ಟಿಯಂದೇ ಒಲಿಂಪಿಕ್ಸ್‌ ಆರಂಭಿಸುವುದು ಐಒಸಿಯ ಪ್ರಮುಖ ಗುರಿ.

ಈ ನಿಟ್ಟಿನಲ್ಲಿ ವರ್ಲ್ಡ್ ಹೆಲ್ತ್‌ ಆರ್ಗನೈಸೇಶನ್‌ (ಡಬ್ಲ್ಯುಎಚ್‌ಒ), ಟೋಕಿಯೊ 2020 ಸಂಘಟನಾ ಸಮಿತಿ, ಟೋಕಿಯೊ ಮೆಟ್ರೊಪೊಲಿಟನ್‌ ಗವರ್ನ್ಮೆಂಟ್‌ ಜತೆ ಐಒಸಿ ನಿರಂತರ ಸಂಪರ್ಕ ಇರಿಸಿಕೊಂಡಿದೆ. ಆದರೆ ನಿಬಿಡ ಅಂತಾರಾಷ್ಟ್ರೀಯ ಕ್ರೀಡಾ ಕ್ಯಾಲೆಂಡರ್‌ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ ಕೂಟವನ್ನು ಮುಂದೂಡುವುದು ಅಸಾಧ್ಯ ಎಂದೇ ಹೇಳಲಾಗುತ್ತದೆ. ಆಗ ಇದನ್ನು ರದ್ದುಪಡಿಸುವುದೇ ಏಕೈಕ ಮಾರ್ಗವಾಗಿರುತ್ತದೆ.

ಒಂದು ವರ್ಷ ಮುಂದೂಡುವುದು ಉತ್ತಮ: ಉಸೇನ್‌ ಬೋಲ್ಟ್ ಕೋಚ್‌
ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ಒಂದು ವರ್ಷ ಕಾಲ ಮುಂದೂಡುವುದು ಉತ್ತಮ ನಿರ್ಧಾರವಾಗಲಿದೆ ಎಂಬುದಾಗಿ ಜಮೈಕನ್‌ ಸ್ಪ್ರಿಂಟರ್‌ ಉಸೇನ್‌ ಬೋಲ್ಟ್ ಅವರ ಕೋಚ್‌ ಗ್ಲೆನ್‌ ಮಿಲ್ಸ್‌ ಅಭಿಪ್ರಾಯಪಟ್ಟಿದ್ದಾರೆ.

“ಟೋಕಿಯೊ ಒಲಿಂಪಿಕ್ಸ್‌ ನಿಗದಿತ ದಿನಾಂಕದಂದೇ ನಡೆಯಲಿದೆ ಎಂಬ ನಂಬಿಕೆ ನನಗಿಲ್ಲ. ನಡೆದರೂ ಇದು ಯಶಸ್ವಿಯಾಗುವುದು ಅನುಮಾನ. ಇದಕ್ಕಿರುವ ಒಂದೇ ಪರಿಹಾರವೆಂದರೆ ಕೂಟವನ್ನೇ ಒಂದು ವರ್ಷದ ಮಟ್ಟಿಗೆ ಮುಂದೂಡುವುದು’ ಎಂಬುದಾಗಿ ಮಿಲ್ಸ್‌ ಹೇಳಿದ್ದಾರೆ.

ಉಸೇನ್‌ ಬೋಲ್ಟ್ ಅವರ 8 ಒಲಿಂಪಿಕ್ಸ್‌ ಚಿನ್ನ ಹಾಗೂ 11 ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿಗಳ ಹಿಂದೆ ಗ್ಲೆನ್‌ ಮಿಲ್ಸ್‌ ಅವರ ಮಾರ್ಗದರ್ಶನ ಇರುವುದನ್ನು ಮರೆಯುವಂತಿಲ್ಲ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ: ಸಚಿವಾಲಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಲಿಂಪಿಕ್ಸ್ ಮುಂದೂಡಿಕೆ: ಕ್ರೀಡಾಪಟುಗಳಿಗೆ ಕಾಡುತ್ತಿದೆ ಮಾನಸಿಕ ಕುಸಿತ ಭೀತಿ

ಒಲಿಂಪಿಕ್ಸ್ ಮುಂದೂಡಿಕೆ: ಕ್ರೀಡಾಪಟುಗಳಿಗೆ ಕಾಡುತ್ತಿದೆ ಮಾನಸಿಕ ಕುಸಿತ ಭೀತಿ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್‌

ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್‌

ಸಾಯ್‌ ಕ್ರಮಗಳ ಬಗ್ಗೆ ಸಚಿವ ಕಿರಣ್ ರಿಜಿಜು ಪರಿಶೀಲನೆ

ಸಾಯ್‌ ಕ್ರಮಗಳ ಬಗ್ಗೆ ಸಚಿವ ಕಿರಣ್ ರಿಜಿಜು ಪರಿಶೀಲನೆ

ಆ್ಯತ್ಲೀಟ್‌ಗಳಿಗೆ ಹೊಡೆತ: ಕೋಚ್‌ ರಾಧಾಕೃಷ್ಣನ್‌

ಆ್ಯತ್ಲೀಟ್‌ಗಳಿಗೆ ಹೊಡೆತ: ಕೋಚ್‌ ರಾಧಾಕೃಷ್ಣನ್‌

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ