ಪಾಕ್ ಕ್ರಿಕೆಟಿಗರ ಚಿತ್ರ ತೆರವು ಈಗ ಜೈಪುರದ ಸರದಿ
Team Udayavani, Feb 19, 2019, 1:20 AM IST
ಜೈಪುರ: ಮುಂಬಯಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಹಾಗೂ ಪಂಜಾಬ್ನ ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ತೂಗುಹಾಕಲಾಗಿದ್ದ ಪಾಕಿಸ್ಥಾನಿ ಕ್ರಿಕೆಟಿಗರ ಚಿತ್ರಗಳನ್ನು ತೆರವುಗೊಳಿಸಿದ ಬೆನ್ನಲ್ಲೇ, ಜೈಪುರದ “ಸವಾಯ್ ಮಾನ್ ಸಿಂಗ್ ಕ್ರೀಡಾಂಗಣ’ದಲ್ಲಿರುವ ಪಾಕ್ ಕ್ರಿಕೆಟಿಗರ ಭಾವಚಿತ್ರಗಳನ್ನೂ ತೆಗೆದುಹಾಕಲಾಗಿದೆ.
ಪುಲ್ವಾಮದಲ್ಲಿ ನಡೆದ ಭಾರತೀಯ ಯೋಧರ ಹತ್ಯಾಕಾಂಡದ ಅನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಪಾಕ್ ಪ್ರೇರಿತ ಉಗ್ರಕೃತ್ಯಕ್ಕೆ ದೇಶಾದ್ಯಂತ ಕ್ರಿಕೆಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.