ಕೆಪಿಎಲ್‌ನಲ್ಲೂ ಫಿಕ್ಸಿಂಗ್ ಸಾಧ್ಯತೆ: ನೀರಜ್ ಹೇಳಿಕೆ
Team Udayavani, Mar 7, 2017, 5:49 PM IST
ಹೊಸದಿಲ್ಲಿ: ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲೂ (ಕೆಪಿಎಲ್) ಫಿಕ್ಸಿಂಗ್ ನಡೆದಿರುವ ಗುಮಾನಿಯನ್ನು ಬಿಸಿಸಿಐ ಭ್ರಷ್ಟಾಚಾರ ನಿಯಂತ್ರಣ ಸಲಹೆಗಾರ ನೀರಜ್ ಕುಮಾರ್ ವ್ಯಕ್ತಪಡಿಸಿದ್ದಾರೆ.
ಕೆಳ ಮಟ್ಟದ ಟೂರ್ನಿಗಳಲ್ಲಿ ಹೆಚ್ಚಿನ ಪ್ರಮಾಣದ ಭ್ರಷ್ಟಾಚಾರ
ಕರ್ನಾಟಕ ಪ್ರೀಮಿಯರ್ ಲೀಗ್ ಸೇರಿದಂತೆ ದೇಶಾದ್ಯಂತ ಕೆಳಮಟ್ಟದಲ್ಲಿ ನಡೆಯುತ್ತಿರುವ ಲೀಗ್‌ಗಳಲ್ಲಿ ಫಿಕ್ಸಿಂಗ್ ನಡೆದಿರುವ ಸಾಧ್ಯತೆಯಿದೆ. ಪಾಕಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾದಲ್ಲೂ ನಡೆಯುತ್ತಿರುವ ಕೆಳ ಮಟ್ಟದ ಟೂರ್ನಿಗಳಲ್ಲಿ ಹೆಚ್ಚಿನ ಪ್ರಮಾಣದ ಭ್ರಷ್ಟಾಚಾರ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ದಿಲ್ಲಿಯ ಮಾಜಿ ಕಮಿಷರನ್ ಆಗಿರುವ ನೀರಜ್ ಕುಮಾರ್ ಬಿಸಿಸಿಐಗೆ ಭ್ರಷ್ಟಾಚಾರ ವಿರೋಧಿ ಸಲಹೆಗಾರರಾಗಿದ್ದಾರೆ. 2000ರಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಮತ್ತು 2013ರಲ್ಲಿ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣವನ್ನು ತನಿಖೆ ಮಾಡಿದ ದಕ್ಷ ಅಧಿಕಾರಿ ಯಾಗಿದ್ದಾರೆ.