Udayavni Special

ಕಾಮನ್ವೆಲ್ತ್ ಗೇಮ್ಸ್‌ ಬಹಿಷ್ಕಾರದ ಧ್ವನಿ ಇನ್ನಷ್ಟು ಗಟ್ಟಿ

ಐಒಎ ಪ್ರಸ್ತಾವಕ್ಕೆ ಬಾಕ್ಸಿಂಗ್‌, ವೇಟ್ಲಿಫ್ಟಿಂಗ್‌ ಒಕ್ಕೂಟ ಬೆಂಬಲ

Team Udayavani, Aug 2, 2019, 5:37 AM IST

2022.

ಹೊಸದಿಲ್ಲಿ: ಶೂಟಿಂಗ್‌ ಕ್ರೀಡೆಯನ್ನು ಕಿತ್ತು ಹಾಕಿರುವುದಕ್ಕೆ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್ ಗೇಮ್ಸ್‌ ಬಹಿಷ್ಕರಿಸಲು ಭಾರತ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಚಿಂತಿಸಿದೆ. ಪೂರಕವಾಗಿ ಕೇಂದ್ರ ಸರಕಾರಕ್ಕೂ ಪತ್ರ ಬರೆದಿದೆ. ಹೊಸ ಬೆಳವಣಿಗೆಯಲ್ಲಿ ಭಾರತ ವೇಟ್ಲಿಫ್ಟಿಂಗ್‌ ಸಂಸ್ಥೆ, ಬಾಕ್ಸಿಂಗ್‌ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಇದರಿಂದ ಕಾಮನ್ವೆಲ್ತ್ ಗೇಮ್ಸ್‌ ಸಂಘಟಕರ ಮೇಲೆ ಶೂಟಿಂಗ್‌ ಉಳಿಸಿಕೊಳ್ಳಬೇಕಾದ ಒತ್ತಡ ಜಾಸ್ತಿಯಾಗಿದೆ.

ಭಾರತಕ್ಕೆ ಗರಿಷ್ಠ ಪದಕ ಬರುವ ಕ್ರೀಡೆ ಶೂಟಿಂಗ್‌, ಅದನ್ನೇ ಕಿತ್ತು ಹಾಕಿರುವುದರ ಹಿಂದೆ ಭಾರತವನ್ನು ಕುಗ್ಗಿಸುವ ಹುನ್ನಾರವಿದೆ ಎನ್ನುವುದು ಐಒಎ ಮುಖ್ಯಸ್ಥ ನರೇಂದ್ರ ಬಾತ್ರಾ ಅಭಿಮತ. ಇದಕ್ಕೆ ಪೂರಕವಾಗಿ, ಸೆಪ್ಟೆಂಬರ್‌ ತಿಂಗಳು ರುವಾಂಡದಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್‌ ಒಕ್ಕೂಟದ ಸಭೆಯನ್ನು ಐಒಎ ಬಹಿಷ್ಕರಿಸಿದೆ. ಅದರ ಚುನಾವಣೆಯಿಂದ ಭಾರತೀಯರ ನಾಮಪತ್ರವನ್ನೂ ಹಿಂಪಡೆದಿದೆ. ಇದರ ಬೆನ್ನಲ್ಲೇ ಕಂಗೆಟ್ಟಿರುವ ಕಾಮನ್ವೆಲ್ತ್ ಗೇಮ್ಸ್‌ ಒಕ್ಕೂಟ, ‘ಇಂತ ಹ ನಿರ್ಧಾರ ಮಾಡಬೇಡಿ, ಮಾತುಕತೆ ನಡೆಸಿ ನಿರ್ಧರಿಸೋಣ’ ಎಂದು ಮನವಿ ಮಾಡಿದೆ.

ಐಒಎ ಹೇಳುವುದೇನು?
ಐಒಎ ಮುಖ್ಯಸ್ಥ ನರೇಂದ್ರ ಬಾತ್ರಾ, ಶೂಟಿಂಗ್‌ ರದ್ದು ಪಡಿಸುವುದಕ್ಕೆ ನೀಡುವ ಕಾರಣ ಬೇರೆಯೇ ಇದೆ. ಭಾರತ ಶೂಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಭಾರತದ ಪದಕ ಪಟ್ಟಿಯಲ್ಲಿ ಶೂಟಿಂಗ್‌ ಪಾಲು ಬಹುದೊಡ್ಡದು. ಶೂಟಿಂಗ್‌ ರದ್ದಾದರೆ ಭಾರತದ ಪದಕಗಳ ಸಂಖ್ಯೆ ತಗ್ಗುತ್ತದೆ. ಈ ಉದ್ದೇಶದಿಂದಲೇ ಶೂಟಿಂಗ್‌ ಕೈಬಿಡುವ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ಕ್ರೀಡೆಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿದರೇ ಹೀಗೆ ಏನಾದರೂ ಮಾಡುತ್ತಾರೆ. ಒಂದೋ ರದ್ದು ಮಾಡುತ್ತಾರೆ, ಇಲ್ಲವೇ ನಿಯಮ ಬದಲಾಯಿಸುತ್ತಾರೆ. ಈಗ ಭಾರತ ಯಾವುದೇ ರಾಷ್ಟ್ರದ ವಸಾಹತು ಅಲ್ಲ. ನಾವೀಗ ಕಠಿನ ಪ್ರಶ್ನೆಗಳನ್ನು ಕೇಳುವ ಸಮಯ ಬಂದಿದೆ ಎಂದು ಬಾತ್ರಾ ಹೇಳುತ್ತಾರೆ.

ಏಕಪಕ್ಷೀಯ ನಿರ್ಧಾರ ಅಸಾಧ್ಯ
ಜೂನ್‌ ತಿಂಗಳಲ್ಲಿ ಕಾಮನ್ವೆವೆಲ್ತ್ ಬಹಿಷ್ಕರಿಸುವ ಕುರಿತು ಬಾತ್ರಾ ಹೇಳಿಕೆ ನೀಡಿದ ಕೂಡಲೇ ಕೇಂದ್ರ ಕ್ರೀಡಾ ಸಚಿವಾಲಯ ಪ್ರತಿಕ್ರಿಯಿಸಿತು. ‘ಹಾಗೆಲ್ಲ ಐಒಎ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ನೂರಾರು ಕ್ರೀಡಾಪಟುಗಳ ಭವಿಷ್ಯ ಅಡಗಿದೆ. ಆದ್ದರಿಂದ ಈ ಬಗ್ಗೆ ಐಒಎ ಸರಕಾರದೊಂದಿಗೆ ಕೂತು ಚರ್ಚಿಸಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಾತ್ರಾ ಕೇಂದ್ರ ಸರಕಾರಕ್ಕೆ ಪತ್ರ ಬರೆದು, 2022ರ ಕೂಟವನ್ನು ರದ್ದುಪಡಿಸಬೇಕೆಂದು ಕೋರಿದ್ದಾರೆ. ಈಗ ಚೆಂಡು ಸರಕಾರದ ಅಂಗಳದಲ್ಲಿದೆ!

ಸಂಘಟಕರ ಹಾಸ್ಯಾಸ್ಪದ ಕಾರಣ
2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗನ್ನು ಯಾಕೆ ರದ್ದು ಮಾಡಲಾಗಿದೆ ಎನ್ನುವುದಕ್ಕೆ ಬರ್ಮಿಂಗ್‌ಹ್ಯಾಮ್‌ ಸಂಘಟಕರು ಹಾಸ್ಯಾಸ್ಪದ ಕಾರಣ ನೀಡಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಶೂಟಿಂಗ್‌ ಕ್ರೀಡೆ ನಡೆಸುವುದಕ್ಕೆ ಸೂಕ್ತವಾದ ತಾಣವಿಲ್ಲ ಎಂಬುದು ಅದರ ಹೇಳಿಕೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಡೆಸುವ ಗೇಮ್ಸ್‌ ತಾಣದಲ್ಲಿ ಶೂಟಿಂಗ್‌ ರೇಂಜ್‌ ನಿರ್ಮಿಸುವುದಕ್ಕೆ ಏಕೆ ಸಾಧ್ಯವಿಲ್ಲ ಎನ್ನುವುದು ಇಲ್ಲಿನ ಪ್ರಶ್ನೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

”ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು”: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

surendra

ಸುರೇಂದ್ರ ಬಂಟ್ವಾಳ್ ಹತ್ಯೆ: ಎನ್ ಕೌಂಟರ್ ಆತಂಕದಿಂದ ನ್ಯಾಯಾಧೀಶರಿಗೆ ಪತ್ರ?

ಮಲ್ಪೆ ಕಡಲ ಕಿನಾರೆ ಬಳಿ ಸಿದ್ದವಾಗುತ್ತಿದೆ ಸುಂದರ ಉದ್ಯಾನವನ, ಬಯಲು ರಂಗ ಮಂದಿರ

ಮಲ್ಪೆ ಕಡಲ ಕಿನಾರೆ ಬಳಿ ಸಿದ್ದವಾಗುತ್ತಿದೆ ಸುಂದರ ಉದ್ಯಾನವನ, ಬಯಲು ರಂಗ ಮಂದಿರ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ

ಬೆಳಪು: ಬ್ಯಾಟರಿ ಕಳವು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮೀಣ ಕಾರ್ಯಪಡೆ

ಬೆಳಪು: ಬ್ಯಾಟರಿ ಕಳವು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮೀಣ ಕಾರ್ಯಪಡೆ

ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ಧ್ವಂಸ: ಆಕ್ರೋಶ

ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ಧ್ವಂಸ: ಆಕ್ರೋಶ

ಚುನಾವಣೆ ಹಿನ್ನಲೆಯಲ್ಲಿ ಗಂಗಾವತಿ ಕೈ ಸದಸ್ಯನ ಕಿಡ್ನಾಪ್ ಕೇಸ್: ಕಾರವಾರದಲ್ಲಿ ಆರೋಪಿಗಳ ಬಂಧನ

ಚುನಾವಣೆ ಹಿನ್ನಲೆಯಲ್ಲಿ ಗಂಗಾವತಿ ಕೈ ಸದಸ್ಯನ ಕಿಡ್ನಾಪ್ ಕೇಸ್: ಕಾರವಾರದಲ್ಲಿ ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Football

ಕೆಎಸ್‌ಎ ಫುಟ್ಬಾಲ್‌ ಆಟಗಾರ ಮೈದಾನದಲ್ಲೇ ಸಾವು

ಆಸೀಸ್‌ ತಂಡಕ್ಕೆ ಆಲ್‌ರೌಂಡರ್‌ ಗ್ರೀನ್‌ ಸೇರ್ಪಡೆ

ಆಸೀಸ್‌ ತಂಡಕ್ಕೆ ಆಲ್‌ರೌಂಡರ್‌ ಗ್ರೀನ್‌ ಸೇರ್ಪಡೆ

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

IPL

IPL 2020 : ಕೊಲ್ಕತ್ತಾ – ಚೆನ್ನೈ ಮುಖಾಮುಖಿ : ಕೆಕೆಆರ್‌ಗೆ ಕಂಟಕವಾಗಿ ಪರಿಣಮಿಸಿದ ಚೆನ್ನೈ

chennai

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

”ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು”: ಗಂಗಾವತಿ ನಗರಸಭೆ ಸದಸ್ಯನ‌ ಹೇಳಿಕೆ

surendra

ಸುರೇಂದ್ರ ಬಂಟ್ವಾಳ್ ಹತ್ಯೆ: ಎನ್ ಕೌಂಟರ್ ಆತಂಕದಿಂದ ನ್ಯಾಯಾಧೀಶರಿಗೆ ಪತ್ರ?

ಕಣ್ಣೀರ ಮೇಲೆ ರಾಜಕಾರಣದ ಅಗತ್ಯವಿಲ್ಲ: ಮುನಿರತ್ನ

ಕಣ್ಣೀರ ಮೇಲೆ ರಾಜಕಾರಣದ ಅಗತ್ಯವಿಲ್ಲ: ಮುನಿರತ್ನ

bng-tdy3

ಅಂಜನಾಪುರ ಮೆಟ್ರೋ ಮಾರ್ಗ ತುಸು ವಿಳಂಬ

ಮಲ್ಪೆ ಕಡಲ ಕಿನಾರೆ ಬಳಿ ಸಿದ್ದವಾಗುತ್ತಿದೆ ಸುಂದರ ಉದ್ಯಾನವನ, ಬಯಲು ರಂಗ ಮಂದಿರ

ಮಲ್ಪೆ ಕಡಲ ಕಿನಾರೆ ಬಳಿ ಸಿದ್ದವಾಗುತ್ತಿದೆ ಸುಂದರ ಉದ್ಯಾನವನ, ಬಯಲು ರಂಗ ಮಂದಿರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.