ಥಾಯ್ಲೆಂಡ್ ಓಪನ್: ಹಿಂದೆ ಸರಿದ ಸಾತ್ವಿಕ್-ಚಿರಾಗ್
Team Udayavani, May 16, 2022, 10:55 PM IST
ಬ್ಯಾಂಕಾಕ್: ಭಾರತ ಐತಿಹಾಸಿಕ ಥಾಮಸ್ ಕಪ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಂಗಳವಾರದಿಂದ ಆರಂಭವಾಗುವ ಥಾಯ್ಲೆಂಡ್ ಓಪನ್ ಸೂಪರ್ 500 ಕೂಟದಿಂದ ಹಿಂದೆ ಸರಿದಿದ್ದಾರೆ.
ಥಾಮಸ್ ಕಪ್ ಕೂಟದ ವೇಳೆ ಚಿರಾಗ್ ಶೆಟ್ಟಿ ಗಾಯಗೊಂಡಿದ್ದರು. ಈ ಕಾರಣಕ್ಕಾಗಿ ಅವರು ಥಾಯ್ಲೆಂಡ್ ಓಪನ್‌ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದರು. ಈ ವಿಷಯವನ್ನು ಅವರು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ಗೆ ತಿಳಿಸಿದ್ದಾರೆ.
ವಿಶ್ವದ ಎಂಟನೇ ರ್‍ಯಾಂಕಿನ ಸಾತ್ವಿಕ್-ಚಿರಾಗ್ ಅವರು ಥಾಮಸ್ ಕಪ್‌ನಲ್ಲಿ ಕೇವಲ ಚೈನೀಸ್ ತೈಪೆ ವಿರುದ್ಧ ಸೋತಿದ್ದರು.
ಇದನ್ನೂ ಓದಿ:ವನಿತೆಯರ 25 ಮೀ. ಪಿಸ್ತೂಲ್ : ಭಾರತೀಯರ ಕ್ಲೀನ್ ಸ್ವೀಪ್ ಸಾಧನೆ
ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತ ಕಿದಂಬಿ ಶ್ರೀಕಾಂತ್ ಥಾಯ್ಲೆಂಡ್ ಓಪನ್‌ನ ಮೊದಲ ಸುತ್ತಿನಲ್ಲಿ ಬ್ರೈಸ್ ಲೆವೆರ್‌ಡೆಜ್ ಅವರನ್ನು ಎದುರಿಸಲಿದ್ದಾರೆ.
ಎಚ್. ಎಸ್. ಪ್ರಣಯ್ ಇನ್ನೊಂದು ಪಂದ್ಯದಲ್ಲಿ ಮಲೇಶ್ಯದ ಡ್ಯಾರೆನ್ ಲೀವ್ ಅವರನ್ನು ಎದುರಿಸಲಿದ್ದಾರೆ. ಒಲಿಂಪಿಯನ್ ಬಿ. ಸಾಯಿ ಪ್ರಣೀತ್ ಜಪಾನಿನ ಕೊಕಿ ವಾಟನಾಬೆ ಅವರ ಸವಾಲಿಗೆ ಉತ್ತರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್
ಟಿ20 ಪಂದ್ಯ: ಪೊವೆಲ್ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ವಿಜಯ
ವಿಂಬಲ್ಡನ್-2022: ರಿಬಾಕಿನಾ, ಗಾರಿನ್ ಕ್ವಾ.ಫೈನಲ್ ಪ್ರವೇಶ
ಬರ್ಮಿಂಗ್ಹ್ಯಾಮ್ ಟೆಸ್ಟ್: ಟಾರ್ಗೆಟ್ 378; ಗೆಲುವಿಗೆ ಪೈಪೋಟಿ
ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು