ಸೆನೆಗಲ್‌ ವಿರುದ್ಧ ಮೂರು ಗೋಲ್‌: ಇಂಗ್ಲೆಂಡ್‌ಗೆ ಚಾಂಪಿಯನ್‌ ಫ್ರಾನ್ಸ್‌  ಎದುರಾಳಿ


Team Udayavani, Dec 5, 2022, 11:23 PM IST

ಸೆನೆಗಲ್‌ ವಿರುದ್ಧ ಮೂರು ಗೋಲ್‌: ಇಂಗ್ಲೆಂಡ್‌ಗೆ ಚಾಂಪಿಯನ್‌ ಫ್ರಾನ್ಸ್‌  ಎದುರಾಳಿ

ದೋಹಾ: “ತ್ರೀ ಲಯನ್ಸ್‌’ ಅಬ್ಬರಿಸಿದೆ. ಆಫ್ರಿಕನ್‌ ಚಾಂಪಿಯನ್‌ ಸೆನೆಗಲ್‌ ವಿರುದ್ಧ ಗೋಲುಗಳ ಸುರಿಮಳೆಗೈದ ಇಂಗ್ಲೆಂಡ್‌ ಫಿಫಾ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಇಲ್ಲಿನ ಎದುರಾಳಿ ಹಾಲಿ ಚಾಂಪಿಯನ್‌ ಫ್ರಾನ್ಸ್‌ ಎಂಬುದು ವಿಶೇಷ.

ಇಂಗ್ಲೆಂಡ್‌ 3-0 ಗೋಲುಗಳ ಅಧಿಕಾರಯುತ ಗೆಲುವು ಸಾಧಿಸಿತು. 38ನೇ ನಿಮಿಷದಲ್ಲಿ ಜೋರ್ಡನ್‌ ಹೆಂಡ್ರಿಕ್ಸ್‌, 45 +3ನೇ ನಿಮಿಷದಲ್ಲಿ ಹ್ಯಾರಿ ಕೇನ್‌, 57ನೇ ನಿಮಿಷದಲ್ಲಿ ಬುಕಾಯೊ ಸಕಾ ಗೋಲು ಸಿಡಿಸಿ ಇಂಗ್ಲೆಂಡ್‌ ಜಯಭೇರಿ ಮೊಳಗಿಸಿದರು.

ಇದರೊಂದಿಗೆ ಫಿಫಾ ವಿಶ್ವಕಪ್‌ ಕೂಟವೊಂದರಲ್ಲಿ ಸರ್ವಾಧಿಕ 12 ಗೋಲು ಬಾರಿಸಿದ ತನ್ನ ದಾಖಲೆಯನ್ನು ಸರಿದೂಗಿಸಿತು. 2018ರ ಆವೃತ್ತಿಯಲ್ಲೂ ಇಂಗ್ಲೆಂಡ್‌ 12 ಗೋಲು ಬಾರಿಸಿತ್ತು. ಇದನ್ನು ಹಿಂದಿಕ್ಕುವ ಎಲ್ಲ ಅವಕಾಶ ಇಂಗ್ಲೆಂಡ್‌ ಮುಂದಿದೆ. ಹಾಗೆಯೇ ಪ್ರಸಕ್ತ ಕೂಟದಲ್ಲಿ ಅತ್ಯಧಿಕ ಗೋಲು ಸಿಡಿಸಿದ ಹಿರಿಮೆಯೂ ಇಂಗ್ಲೆಂಡ್‌ನ‌ದ್ದಾಗಿದೆ.

ಈ ಜಯದೊಂದಿಗೆ ಸೆನೆಗಲ್‌ ವಿರುದ್ಧ ಆಡಿದ 21 ಪಂದ್ಯಗಳಲ್ಲಿ ಇಂಗ್ಲೆಂಡ್‌ ಅಜೇಯವಾಗಿ ಉಳಿದು ಸಾರ್ವಕಾಲಿಕ ದಾಖಲೆ ಸ್ಥಾಪಿಸಿತು. ಇದರಲ್ಲಿ 8 ಗೆಲುವು (ಡ್ರಾ) ವಿಶ್ವಕಪ್‌ನಲ್ಲಿ ಎದುರಾಗಿದೆ.

ಸೆನೆಗಲ್‌ ನಿರ್ಗಮನದೊಂದಿಗೆ ಆಫ್ರಿಕಾದ ಕೇವಲ ಒಂದು ತಂಡವಷ್ಟೇ ಕೂಟದಲ್ಲಿ ಉಳಿದು ಕೊಂಡಂತಾಯಿತು. ಅದು ಮೊರೊಕ್ಕೊ. ಕ್ವಾರ್ಟರ್‌ ಫೈನಲ್‌ನಲ್ಲಿ ಈ ತಂಡದ ಹಣೆಬರಹ ನಿರ್ಧಾರ ವಾಗಲಿದೆ. ಮೊರೊಕ್ಕೊ ಎದುರಾಳಿ ಸ್ಪೇನ್‌.

ಮೊದಲಾ ರ್ಧದಲ್ಲಿ ಸೆನೆಗಲ್‌ ಆಟ ಉತ್ತಮವಾ ಗಿಯೇ ಇತ್ತು. ಅಭಿಮಾನಿ ಡ್ರಮ್ಮರ್ ಆಫ್ರಿಕನ್‌ ತಂಡವನ್ನು ಭರ್ಜರಿಯಾಗಿಯೇ ಹುರಿದುಂಬಿಸುತ್ತಿ ದ್ದರು. ಇಂಗ್ಲೆಂಡ್‌ ಆಟ ತುಸು ನಿಧಾನ ಗತಿಯಿಂದ ಕೂಡಿತ್ತು. ಅವರ ಅಭಿಮಾನಿಗಳೂ ಬಹಳ ತಣ್ಣಗೆ ಉಳಿದಿದ್ದರು. ಈ ಹಂತದಲ್ಲಿ ಸೆನೆಗಲ್‌ ಮುನ್ನಡೆಯೊಂದಕ್ಕೆ ಇಂಗ್ಲೆಂಡ್‌ ಕೀಪರ್‌ ಜೋರ್ಡನ್‌ ಪಿಕ್‌ಫೋರ್ಡ್‌ ಬಲವಾದ ತಡೆಯೊಡ್ಡಿದರು.

ಯಾವಾಗ 38ನೇ ನಿಮಿಷದಲ್ಲಿ ಜೋರ್ಡನ್‌ ಹೆಂಡ್ರಿಕ್ಸ್‌ ಗೋಲು ಬಾರಿಸಿದರೋ ಅಲ್ಲಿಗೆ ಸೆನೆಗಲ್‌ ಅಭಿಮಾನಿಗಳ ಅಬ್ಬರ ತಣ್ಣಗಾಯಿತು. ಇಂಗ್ಲೆಂಡ್‌ ಪಾಳೆಯದಲ್ಲಿ ಹೊಸ ಜೋಶ್‌ ಕಂಡುಬಂತು. ಒಂದೇ ನಿಮಿಷದಲ್ಲಿ ಹ್ಯಾರಿ ಕೇನ್‌ ಅವರಿಗೂ ಗೋಲು ಬಾರಿಸುವ ಅವಕಾಶ ಒಂದಿತ್ತು. ಇದರಲ್ಲಿ ಅವರು ಸಫ‌ಲರಾಗಲಿಲ್ಲ. ಆದರೆ ಸ್ಟಾಪೇಜ್‌ ಟೈಮ್‌ನಲ್ಲಿ ಈ ಅವಕಾಶವನ್ನು ವ್ಯರ್ಥಗೊಳಿಸಲಿಲ್ಲ. ಹೀಗೆ 2-0 ಮುನ್ನಡೆಯ ಖುಷಿಯೊಂದಿಗೆ ಇಂಗ್ಲೆಂಡ್‌ ವಿರಾಮಕ್ಕೆ ತೆರಳಿತು.

ವೇಲ್ಸ್‌ ಎದುರಿನ ಪಂದ್ಯದಿಂದ ಹೊರಗುಳಿದಿದ್ದ ಬುಕಾಯೊ ಸಕಾ ಇಂಗ್ಲೆಂಡ್‌ ಪರ 3ನೇ ಗೋಲ್‌ ಬಾರಿಸಿದರು. ಮುಂದಿನದು ಫ್ರಾನ್ಸ್‌ ಸವಾಲು. ಆದರೆ ಸ್ಟಾರ್‌ ಆಟಗಾರ ರಹೀಂ ಸ್ಟರ್ಲಿಂಗ್‌ ಗಾಯಾಳಾಗಿ ತವರಿಗೆ ವಾಪಸಾಗಿರುವುದು ಇಂಗ್ಲೆಂಡ್‌ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದೊಂದು ಪ್ರಶ್ನೆ.

ಟಾಪ್ ನ್ಯೂಸ್

1-sada-dad

ಮೋದಿ ಎಷ್ಟು ಸಲ ಬಂದರೂ ಕಾಂಗ್ರೆಸ್ಸೇ ಗೆಲ್ಲೋದು: ಪ್ರಿಯಾಂಕ್ ಖರ್ಗೆ

1-wwqeq

ಮಂಗಳೂರು : ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

china baloon

ಭಾರತ,ಜಪಾನ್‌ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್‌ ಪೋಸ್ಟ್‌ನಿಂದ ಆತಂಕಕಾರಿ ವರದಿ

money 1

ಹಣದುಬ್ಬರದ ವಿರುದ್ಧದ ಹೋರಾಟ : ರೆಪೋ ದರ ಹೆಚ್ಚಿಸಿದ ಆರ್‌ಬಿಐ

1-adadsad

ನಾಲಗೆಯ ಮೇಲೆ ನಿಯಂತ್ರಣವಿರಬೇಕು’: ಮಹುವಾ ಮೊಯಿತ್ರಾಗೆ ಹೇಮಾ ಮಾಲಿನಿ

thumb-5

ಗರ್ಭಿಣಿ ಎಂದು ಘೋಷಿಸಿದ್ದ ಕೇರಳದ ತೃತೀಯಲಿಂಗಿ ದಂಪತಿಗಳಿಗೆ ಮಗುವಿನ ಜನನ!

thumb-4

ಜೋ ಬಿಡೆನ್ ಅವರ ಪತ್ನಿ ಕಮಲಾ ಹ್ಯಾರಿಸ್ ರ ಪತಿಯನ್ನು ಚುಂಬಿಸಿದರೇ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-4

ಭೂಕಂಪ: ಕಟ್ಟಡಗಳಡಿ ಸಿಲುಕಿ ಟರ್ಕಿಯ ಖ್ಯಾತ ಫುಟ್ಬಾಲ್‌ ಆಟಗಾರ ಮೃತ್ಯು

ರಣಜಿ ಟ್ರೋಫಿ ಸೆಮಿಫೈನಲ್‌: ಅಜೇಯ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು

ರಣಜಿ ಟ್ರೋಫಿ ಸೆಮಿಫೈನಲ್‌: ಅಜೇಯ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು

 ನಾಗ್ಪುರ ಟೆಸ್ಟ್‌: ಭಾರತದಿಂದ ತ್ರಿವಳಿ ಸ್ಪಿನ್‌ ದಾಳಿ?

 ನಾಗ್ಪುರ ಟೆಸ್ಟ್‌: ಭಾರತದಿಂದ ತ್ರಿವಳಿ ಸ್ಪಿನ್‌ ದಾಳಿ?

ಫೆ. 12: ಮಣಿಪಾಲ ಮ್ಯಾರಥಾನ್‌; ಮಕ್ಕಳ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಯತ್ನ

ಫೆ. 12: ಮಣಿಪಾಲ ಮ್ಯಾರಥಾನ್‌; ಮಕ್ಕಳ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಯತ್ನ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

1-sada-dad

ಮೋದಿ ಎಷ್ಟು ಸಲ ಬಂದರೂ ಕಾಂಗ್ರೆಸ್ಸೇ ಗೆಲ್ಲೋದು: ಪ್ರಿಯಾಂಕ್ ಖರ್ಗೆ

1-wwqeq

ಮಂಗಳೂರು : ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

china baloon

ಭಾರತ,ಜಪಾನ್‌ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್‌ ಪೋಸ್ಟ್‌ನಿಂದ ಆತಂಕಕಾರಿ ವರದಿ

tdy-15

ಜಾಹೀರಾತು ಪ್ರದರ್ಶನಕ್ಕೆ ಶೀಘ್ರ ಅನುಮತಿ?

tdy-14

ವೇತನ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣಾದ ನೌಕರನ ಅಂತ್ಯಕ್ರಿಯೆ ಕಾರ್ಯ ಗೌಪ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.