ಟಿಮ್ ತಾತ್ಕಾಲಿಕ ನಾಯಕ: ಕಾಲೆಳೆದ ಪಂತ್
Team Udayavani, Dec 30, 2018, 12:40 AM IST
ಮೆಲ್ಬರ್ನ್: ಮಹೇಂದ್ರ ಸಿಂಗ್ ಧೋನಿ ಏಕದಿನ ತಂಡಕ್ಕೆ ಮರಳಿರುವುದರಿಂದ ಭಾರತ ತಂಡದಲ್ಲಿನ್ನು ರಿಷಬ್ ಪಂತ್ಗೆ ಇನ್ನೇನೂ ಕೆಲಸವಿಲ್ಲ ಎಂದು ಹಾಸ್ಯ ಮಾಡಿದ್ದ ಆಸೀಸ್ ನಾಯಕ ಟಿಮ್ ಪೇನ್ ಅವರಿಗೆ ಪಂತ್ ಅದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ.
“ಟಿಮ್ಗೆ ಗೊತ್ತಿರುವುದು ಬರೀ ಮಾತನಾಡುವುದಷ್ಟೇ. ನೀವು ಎಲ್ಲಾದರೂ ತಾತ್ಕಾಲಿಕ ನಾಯಕ ಎಂಬುದನ್ನು ಕೇಳಿದ್ದೀರಾ? ಇವತ್ತು ನೋಡಿ, ಅಂತಹ ವಿಶೇಷ ಅತಿಥಿ ನಮ್ಮ ಜತೆ ಇದ್ದಾರೆ’ ಎಂದು ಪಂತ್ ವ್ಯಂಗ್ಯವಾಗಿ ಹೇಳಿದ್ದಾರೆ. ಶನಿವಾರ ಟಿಮ್ ಪೇನ್ ಕ್ರೀಸ್ಗೆ ಬಂದ ಕೂಡಲೇ ಈ ಅಣಕ ಶುರುವಾಗಿದೆ.
ಚೆಂಡು ವಿರೂಪ ಪ್ರಕರಣದಿಂದ ತಂಡದಿಂದ ಹೊರಹೋಗಿದ್ದ ಸ್ಟೀವ್ ಸ್ಮಿತ್, ಮತ್ತೆ ತಂಡಕ್ಕೆ ವಾಪಸಾದೊಡನೆ ಪೇನ್ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಎಂಬರ್ಥದಲ್ಲಿ ರಿಷಬ್ ಪಂತ್ ಕೆಣಕಿದ್ದಾರೆ.