Udayavni Special

ಸರಣಿ ಗೆಲುವಿನ ದಾಖಲೆಯತ್ತ ಭಾರತ

ಪುಣೆಯಲ್ಲಿ ಇಂದಿನಿಂದ ಭಾರತ-ದ. ಆಫ್ರಿಕಾ 2ನೇ ಟೆಸ್ಟ್‌

Team Udayavani, Oct 10, 2019, 6:00 AM IST

PTI10_9_2019_000027B

ಪುಣೆ: ವಿಶಾಖಪಟ್ಟಣದಲ್ಲಿ 203 ರನ್ನುಗಳ ಪ್ರಚಂಡ ಜಯಭೇರಿ ಮೊಳಗಿಸಿದ ಭಾರತವೀಗ ಪುಣೆಯಲ್ಲೂ ಪ್ರವಾಸಿ ದಕ್ಷಿಣ ಆಫ್ರಿಕಾ ಮೇಲೆ ಸವಾರಿ ಮಾಡುವ ಯೋಜನೆಯಲ್ಲಿದೆ. ಇದರೊಂದಿಗೆ ತವರಲ್ಲಿ ಸತತ 11 ಟೆಸ್ಟ್‌ ಸರಣಿ ಗೆದ್ದು ನೂತನ ದಾಖಲೆ ನಿರ್ಮಿಸುವುದು ಟೀಮ್‌ ಇಂಡಿಯಾದ ಗುರಿ. ಸರಣಿಯ 2ನೇ ಟೆಸ್ಟ್‌ ಗುರುವಾರದಿಂದ ಇಲ್ಲಿನ “ಎಂ.ಸಿ.ಎ. ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ.

ವಿರಾಟ್‌ ಕೊಹ್ಲಿ ಪಾಲಿಗೂ ಇದೊಂದು ಮಹತ್ವದ ಪಂದ್ಯ. ಅವರು 50ನೇ ಟೆಸ್ಟ್‌ ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಇದನ್ನು ಜಯಿಸಿದರೆ ಭಾರತ ಮತ್ತು ಕೊಹ್ಲಿ ಪಾಲಿಗೆ ಪುಣೆ ಟೆಸ್ಟ್‌ ಪಂದ್ಯ ಸ್ಮರಣೀಯವಾಗಲಿದೆ.

ಭಾರತದ ಯಶಸ್ವಿ ನಿರ್ಧಾರ
ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ರೋಹಿತ್‌ ಶರ್ಮ ಅವರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಿದ್ದು ಹಾಗೂ ಬಹಳ ಸಮಯದ ಬಳಿಕ ಆರ್‌. ಅಶ್ವಿ‌ನ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡದ್ದು ಇದರಲ್ಲಿ ಪ್ರಮುಖವಾದುದು. ರೋಹಿತ್‌ ಎರಡೂ ಇನ್ನಿಂಗ್ಸ್‌ ಗಳಲ್ಲಿ ಶತಕ ಬಾರಿಸಿ ಮೆರೆದರೆ, ಅಶ್ವಿ‌ನ್‌ ಮೊದಲ ಸರದಿಯಲ್ಲಿ 7 ವಿಕೆಟ್‌ ಉಡಾಯಿಸಿ ಪ್ರವಾಸಿಗರಿಗೆ ಏಳYತಿ ಇಲ್ಲದಂತೆ ಮಾಡಿದ್ದು ಈಗ ಇತಿಹಾಸ.

ಉಳಿದಂತೆ ಮಾಯಾಂಕ್‌ ಅಗರ್ವಾಲ್‌ ಅವರ ಡಬಲ್‌ ಸೆಂಚುರಿ, ರವೀಂದ್ರ ಜಡೇಜ ಅವರ ಆಲ್‌ರೌಂಡ್‌ ಪ್ರದರ್ಶನ, ಮೊಹಮ್ಮದ್‌ ಶಮಿ ಅವರ ಘಾತಕ ಸ್ಪೆಲ್‌ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕೊಹ್ಲಿ, ರಹಾನೆ, ವಿಹಾರಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ಹರಿಣಗಳ ಸ್ಥಿತಿ ಇನ್ನಷ್ಟು ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ.
ಪುಣೆ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಬದಲಾವಣೆ ಗೋಚರಿಸುವ ಸಾಧ್ಯತೆ ಕಡಿಮೆ.

ಹರಿಣಗಳ ಮುಂದೆ ಬೆಟ್ಟದಂಥ ಸವಾಲು
ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಅಮೋಘವಾಗಿಯೇ ಇತ್ತು. ಭಾರತದ ಬೃಹತ್‌ ಮೊತ್ತಕ್ಕೆ ದಿಟ್ಟ ಉತ್ತರ ನೀಡಿದಾಗ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಗೋಚರಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ತೋರ್ಪಡಿಸಿದ ಬಿರುಸಿನ ಬ್ಯಾಟಿಂಗ್‌ ಹಾಗೂ ಶಮಿ ಅವರ ಶರವೇಗದ ಬೌಲಿಂಗ್‌ ಹರಿಣಗಳನ್ನು ದಿಕ್ಕಾಪಾಲಾಗಿಸಿತು. ಆಮ್ಲ, ಎಬಿಡಿ, ಸ್ಟೇನ್‌ ಅವರಂಥ ವಿಶ್ವ ದರ್ಜೆಯ ಆಟಗಾರರ ವಿದಾಯ ಎನ್ನುವುದು ಆಫ್ರಿಕಾದ ಒಟ್ಟು ಸಾಮರ್ಥ್ಯವನ್ನು ಕುಗ್ಗಿಸಿದ್ದು ಇದರಿಂದ ಸಾಬೀತಾಗಿದೆ.

ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಡು ಪ್ಲೆಸಿಸ್‌ ಪಡೆ ಭಾರತದ ಸ್ಪಿನ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸುವುದು ಮುಖ್ಯ. ಹಾಗೆಯೇ ರಬಾಡ, ಫಿಲಾಂಡರ್‌, ಎನ್‌ಗಿಡಿ, ಮಹಾರಾಜ್‌, ಮುತ್ತುಸ್ವಾಮಿ ಸೇರಿಕೊಂಡು ಜಾಣ್ಮೆಯ ಬೌಲಿಂಗ್‌ ಸಂಘಟಿಸಬೇಕಾದುದೂ ಅಗತ್ಯ.

ಹೇಗಿದೆ ಪುಣೆ ಟ್ರ್ಯಾಕ್‌?
ಇದು ಪುಣೆಯ “ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ’ನಲ್ಲಿ ನಡೆಯುವ ಕೇವಲ 2ನೇ ಟೆಸ್ಟ್‌ ಪಂದ್ಯ. 2017ರಂದು ನಡೆದ ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಟೆಸ್ಟ್‌ ಮೂರೇ ದಿನಗಳಲ್ಲಿ ಮುಗಿದಿತ್ತು. ನಥನ್‌ ಲಿಯೋನ್‌, ಸ್ಟೀವ್‌ ಓ’ಕೀಫ್ ದಾಳಿಗೆ ಉತ್ತರಿಸುವಲ್ಲಿ ವಿಫ‌ಲವಾದ ಭಾರತ 333 ರನ್ನುಗಳ ಭಾರೀ ಸೋಲನುಭವಿಸಿತ್ತು.

ಅಂದು ಪುಣೆ ಪಿಚ್‌ ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಬಿಸಿಸಿಐಗೆ ನೋಟಿಸ್‌ ಕೂಡ ನೀಡಿತ್ತು. ಈ ಬಾರಿ “ನ್ಪೋರ್ಟಿವ್‌’ ಆಗಿದೆ ಎಂದು ಕ್ಯುರೇಟರ್‌ ಪಾಂಡುರಂಗ ಸಲ್ಗಾಂವ್ಕರ್‌ ಭರವಸೆ ನೀಡಿದ್ದಾರೆ. ಆದರೆ ಪಂದ್ಯಕ್ಕೆ ಆಗಾಗ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಇದೆ.

ಸತತ 11ನೇ ಸರಣಿ ಗೆಲುವಿನತ್ತ…
ವಿಶಾಖಪಟ್ಟಣ ಟೆಸ್ಟ್‌ ಪಂದ್ಯವನ್ನು 203 ರನ್ನುಗಳಿಂದ ಗೆದ್ದ ಭಾರತ, ಪುಣೆಯಲ್ಲೂ ಜಯ ಸಾಧಿಸಿದರೆ ತವರಲ್ಲಿ ಸತತ 11ನೇ ಸರಣಿ ಗೆದ್ದು ನೂತನ ದಾಖಲೆ ಸ್ಥಾಪಿಸಲಿದೆ. ಸದ್ಯ ಭಾರತ ತಂಡ ತವರಲ್ಲಿ ಸತತ 10 ಸರಣಿಗಳನ್ನು ಗೆದ್ದು ಆಸ್ಟ್ರೇಲಿಯದೊಂದಿಗೆ ಅಗ್ರಸ್ಥಾನದಲ್ಲಿದೆ.

ಆಸ್ಟ್ರೇಲಿಯ 2 ಸಲ ಈ ಸಾಧನೆ ಮಾಡಿದೆ. ಒಮ್ಮೆ ನ. 1994ರಿಂದ ನ. 2000ದ ತನಕ; ಇನ್ನೊಮ್ಮೆ ಜು. 2004ರಿಂದ ನ. 2008ರ ತನಕ.

ಭಾರತ ತನ್ನ ತವರಿನ ಗೆಲುವಿನ ಅಭಿಯಾನ ಆರಂಭಿಸಿದ್ದು 2013ರ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಸರಣಿ ಮೂಲಕ. ಅಂದಿನ 4 ಪಂದ್ಯಗಳ ಸರಣಿಯನ್ನು ಭಾರತ 4-0 ಅಂತರದಿಂದ ವಶಪಡಿಸಿಕೊಂಡಿತ್ತು.

ಕೊಹ್ಲಿ ನಾಯಕತ್ವದ 50ನೇ ಟೆಸ್ಟ್‌
ವಿರಾಟ್‌ ಕೊಹ್ಲಿ ಪಾಲಿಗೆ ಪುಣೆ ಟೆಸ್ಟ್‌ ಪಂದ್ಯ ಸ್ಮರಣೀಯ ವಾಗಿದೆ. ಇದು ಅವರ ನಾಯಕತ್ವದ 50ನೇ ಟೆಸ್ಟ್‌ ಪಂದ್ಯವೆಂಬುದು ವಿಶೇಷ. ಈವರೆಗಿನ 49 ಟೆಸ್ಟ್‌ ಗಳಲ್ಲಿ ಕೊಹ್ಲಿ 29ರಲ್ಲಿ ಗೆಲುವು ಕಂಡಿದ್ದಾರೆ. 10 ಪಂದ್ಯಗಳಲ್ಲಿ ಸೋಲು ಎದುರಾಗಿದೆ. ಉಳಿದ 10 ಪಂದ್ಯ ಡ್ರಾಗೊಂಡಿದೆ.

ಕೊಹ್ಲಿ 50 ಟೆಸ್ಟ್‌ ಪಂದ್ಯಗಳಲ್ಲಿ ನಾಯಕತ್ವ ವಹಿಸಲಿರುವ ವಿಶ್ವದ 17ನೇ ಹಾಗೂ ಭಾರತದ 2ನೇ ನಾಯಕ. ಭಾರತೀಯ ದಾಖಲೆ ಹೊಂದಿರುವವರು ಮಹೇಂದ್ರ ಸಿಂಗ್‌ ಧೋನಿ (60 ಟೆಸ್ಟ್‌). ಧೋನಿ ನಾಯಕತ್ವದಲ್ಲಿ 27 ಗೆಲುವು ಒಲಿದಿದೆ. ಸದ್ಯ ಕೊಹ್ಲಿ ಮತ್ತು ಸೌರವ್‌ ಗಂಗೂಲಿ ಭಾರತೀಯ ಕಪ್ತಾನರ ದಾಖಲೆಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಗಂಗೂಲಿ ಕೂಡ 49 ಟೆಸ್ಟ್‌ ಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 21ರಲ್ಲಿ ಜಯ ಕಂಡಿದ್ದಾರೆ.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಮಾಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್‌ ಸಾಹಾ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ.

ದಕ್ಷಿಣ ಆಫ್ರಿಕಾ: ಐಡನ್‌ ಮಾರ್ಕ್‌ರಮ್‌, ಡೀನ್‌ ಎಲ್ಗರ್‌, ಥಿಯುನಿಸ್‌ ಡಿ ಬ್ರುಯಿನ್‌, ಟೆಂಬ ಬವುಮ, ಫಾ ಡು ಪ್ಲೆಸಿಸ್‌ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೇನುರಣ್‌ ಮುತ್ತುಸ್ವಾಮಿ, ವೆರ್ನನ್‌ ಫಿಲಾಂಡರ್‌, ಕೇಶವ್‌ ಮಹಾರಾಜ್‌, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡ.

ಆರಂಭ: 9.30 ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆ ಒಂದು ಶತಕದವರೆಗೆ ಧೋನಿ ಮೇಲೆ ನಂಬಿಕೆಯಿರಲಿಲ್ಲ; ಮಾಜಿ ನಾಯಕನ ಬಗ್ಗೆ ನೆಹ್ರಾ ಮಾತು

ಆ ಒಂದು ಶತಕದವರೆಗೆ ಧೋನಿ ಮೇಲೆ ನಂಬಿಕೆಯಿರಲಿಲ್ಲ; ಮಾಜಿ ನಾಯಕನ ಬಗ್ಗೆ ನೆಹ್ರಾ ಮಾತು

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

‘ಆತ ಮೊದಲು ತಂಡಕ್ಕೆ ಬಂದಾಗ ಇಂಝಮಾಮ್ ಹಕ್ ನೆನಪಾಗಿತ್ತು’ ಟೀಂ ಇಂಡಿಯಾ ಸ್ಟಾರ್ ಬಗ್ಗೆ ಯುವಿ

‘ಆತ ಮೊದಲು ತಂಡಕ್ಕೆ ಬಂದಾಗ ಇಂಝಮಾಮ್ ಹಕ್ ನೆನಪಾಗಿತ್ತು’ ಟೀಂ ಇಂಡಿಯಾ ಸ್ಟಾರ್ ಬಗ್ಗೆ ಯುವಿ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

3-4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

3-4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

ಆರೋಗ್ಯ ಯೋಧರು: 10 ಲಕ್ಷ ಮಾಸ್ಕ್ ತಯಾರಿಸಿದ ಮಹಿಳೆಯರು

ಆರೋಗ್ಯ ಯೋಧರು: 10 ಲಕ್ಷ ಮಾಸ್ಕ್ ತಯಾರಿಸಿದ ಮಹಿಳೆಯರು

ಮಧ್ಯಪ್ರದೇಶದಲ್ಲಿ 26,00 ಜನರಿಗೆ ಗೃಹ ನಿರ್ಬಂಧ ; ಇದಕ್ಕೆ ಕಾರಣ ಇಲ್ಲಿದೆ!

ಮಧ್ಯಪ್ರದೇಶದಲ್ಲಿ 26,00 ಜನರಿಗೆ ಗೃಹ ನಿರ್ಬಂಧ ; ಇದಕ್ಕೆ ಕಾರಣ ಇಲ್ಲಿದೆ!

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ