Udayavni Special

ಇಂದು ಲಸಿತ ಮಾಲಿಂಗ ಕೊನೆಯ ಆಟ

ಶ್ರೀಲಂಕಾ-ಬಾಂಗ್ಲಾದೇಶ ಮೊದಲ ಏಕದಿನ ; ಕೊಲಂಬೊದಲ್ಲಿ ಮಾಲಿಂಗ ವಿದಾಯ ಪಂದ್ಯ

Team Udayavani, Jul 26, 2019, 5:09 AM IST

MALINGA

ಕೊಲಂಬೊ: “ಲಗೋರಿ ಬೌಲರ್‌’ ಎಂದೇ ಗುರುತಿಸಲ್ಪಟ್ಟ ಶ್ರೀಲಂಕಾದ ವಿಚಿತ್ರ ಶೈಲಿಯ ವೇಗಿ, ರಂಗು ರಂಗಿನ ಆಟಗಾರ ಲಸಿತ ಮಾಲಿಂಗ ಶುಕ್ರವಾರ ತಮ್ಮ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಈ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು, ಮಾಲಿಂಗ ಕೊನೆಯ ಸಲ ಅಂಗಳಕ್ಕಿಳಿಯಲಿದ್ದಾರೆ.

ಈ ಸರಣಿಯಲ್ಲಿ 3 ಏಕದಿನ ಮುಖಾಮುಖೀ ನಡೆಯಲಿದ್ದು, ಶುಕ್ರವಾರದ ಮೊದಲ ಪಂದ್ಯ ಲಸಿತ ಮಾಲಿಂಗ ಪಾಲಿನ “ವಿದಾಯ ಪಂದ್ಯ’ವಾಗಲಿದೆ.

ಸತತ ಗಾಯದಿಂದ ಹಿನ್ನಡೆ
ಮಾಲಿಂಗ 2004ರಲ್ಲಿ ಯುಎಇ ವಿರುದ್ಧ ಡಂಬುಲದಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿ ದ್ದರು. ಈ 15 ವರ್ಷಗಳ ಅವಧಿಯಲ್ಲಿ ಬಹಳಷ್ಟು ಸಲ ಗಾಯಾಳಾಗಿ ಹೊರಗುಳಿದುದರಿಂದ ಅವರ ವಿಕೆಟ್‌ ಬೇಟೆಗೆ ಭಾರೀ ಹಿನ್ನಡೆಯಾದದ್ದು ಸುಳ್ಳಲ್ಲ. ಮಾಲಿಂಗ ವಿದಾಯದಿಂದ ಶ್ರೀಲಂಕಾ ಸ್ಟಾರ್‌ ಆಟಗಾರನೊಬ್ಬನ ಸೇವೆಯನ್ನು ಕಳೆದುಕೊಳ್ಳಲಿದೆ, ಜತೆಗೆ “ವಿಕೆಟ್‌ ಟೇಕರ್‌’ ಬೌಲರ್‌ ಒಬ್ಬನನ್ನೂ.

ದಾಳಿ ಬಳಿಕ ಮೊದಲ ಸರಣಿ
“ಈಸ್ಟರ್‌ ಸಂಡೇ’ಯಂದು ನಡೆದ ಭೀಕರ ಭಯೋತ್ಪಾದಕ ದಾಳಿ ಬಳಿಕ ಇದು ಶ್ರೀಲಂಕಾದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿ. ಬಿಗಿ ಭದ್ರತೆ ನಡುವೆ ಬಾಂಗ್ಲಾದೇಶ ತಂಡ ಇಲ್ಲಿಗೆ ಆಗಮಿಸಿದೆ.

ಮಶ್ರಫೆ ಮೊರ್ತಜಾ ಗಾಯಾಳಾಗಿ ಹೊರ ಗುಳಿದ ಕಾರಣ ಆರಂಭಕಾರ ತಮಿಮ್‌ ಇಕ್ಬಾಲ್‌ ಈ ಸರಣಿಯಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆ ಸಲಿದ್ದಾರೆ. ವಿಶ್ವಕಪ್‌ನಲ್ಲಿ 606 ರನ್‌ ಹಾಗೂ 11 ವಿಕೆಟ್‌ ಸಂಪಾದಿಸಿದ ಆಲೌರೌಂಡರ್‌ ಶಕಿಬ್‌ ಅಲ್‌ ಹಸನ್‌ ಸೇವೆ ಕೂಡ ಬಾಂಗ್ಲಾಕ್ಕೆ ಸಿಗುತ್ತಿಲ್ಲ.

ಲಂಕೆಯ 3ನೇ ಸಾಧಕ
35ರ ಹರೆಯದ “ಸೆಪರಮಡು ಲಸಿತ ಮಾಲಿಂಗ ಸ್ವರ್ಣಜಿತ್‌’ ಪಾಲಿಗೆ ಇದು 226ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ. ಒಟ್ಟು 335 ವಿಕೆಟ್‌ ಹಾರಿಸಿ ಲಂಕಾ ಬೌಲಿಂಗ್‌ ಸಾಧಕರ ಯಾದಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ. ಮುತ್ತಯ್ಯ ಮುರಳೀಧರನ್‌ (523), ಚಮಿಂಡ ವಾಸ್‌ (399) ಹೊರತುಪಡಿಸಿದರೆ ಮಾಲಿಂಗ ಅವರೇ ಲಂಕೆಯ ಶ್ರೇಷ್ಠ ಬೌಲರ್‌. ಇನ್ನು 3 ವಿಕೆಟ್‌ ಉರುಳಿಸಿದರೆ ಅನಿಲ್‌ ಕುಂಬ್ಳೆ (337) ಅವರನ್ನು ಹಿಂದಿಕ್ಕಿ ವಿಶ್ವ ಮಟ್ಟದಲ್ಲಿ 9ನೇ ಸ್ಥಾನ ಅಲಂಕರಿಸಲಿದ್ದಾರೆ.

2004-2010ರ ಅವಧಿಯಲ್ಲಿ 30 ಟೆಸ್ಟ್‌ ಗಳನ್ನಾಡಿದ ಲಸಿತ ಮಾಲಿಂಗ, 5 ದಿನಗಳ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡದಿದ್ದರೂ ವಿಕೆಟ್‌ ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ (101).

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

Watch: ಜಮ್ಮು-ಕಾಶ್ಮೀರ-PDP ಕಚೇರಿಗೆ ನುಗ್ಗಿ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು

Watch: ಜಮ್ಮು-ಕಾಶ್ಮೀರ-PDP ಕಚೇರಿಗೆ ನುಗ್ಗಿ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು

ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಾರೆ, ನಮಗೆ ಕಾಂಗ್ರೆಸ್ ಒಂದೇ ಜಾತಿ: ಡಿ ಕೆ ಶಿವಕುಮಾರ್

ಬಿಜೆಪಿಯವರು ಜಾತಿ ರಾಜಕಾರಣ ಮಾಡುತ್ತಾರೆ, ನಮಗೆ ಕಾಂಗ್ರೆಸ್ ಒಂದೇ ಜಾತಿ: ಡಿ ಕೆ ಶಿವಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chennai super kings out of playoff race 2020

ರಾಜಸ್ಥಾನದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಟದಿಂದಲೇ ಔಟ್

ಬೆನ್ ಸ್ಟೋಕ್ಸ್ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ರಾಜಸ್ಥಾನ್ ಗೆ ಭರ್ಜರಿ ಜಯ

ಬೆನ್ ಸ್ಟೋಕ್ಸ್ ಭರ್ಜರಿ ಶತಕ: ಹಾಲಿ ಚಾಂಪಿಯನ್ನರ ವಿರುದ್ಧ ರಾಜಸ್ಥಾನ್ ಗೆ ಭರ್ಜರಿ ಜಯ

mumbai

ಮುಂಬೈ – ರಾಜಸ್ಥಾನ್ ಕಾಳಗ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲಾರ್ಡ್ ಬಳಗ

RCB

ಗಾಯಕ್ವಾಡ್ ಮನಮೋಹಕ ಅರ್ಧಶತಕ: ಚೆನ್ನೈ ಎದುರು ಮುಗ್ಗರಿಸಿದ ಆರ್ ಸಿಬಿ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಚಾಮರಾಜನಗರ :18 ಹೊಸ ಕೋವಿಡ್ ಪ್ರಕರಣ ದೃಢ! 284 ಸಕ್ರಿಯ ಪ್ರಕರಣ

ಚಾಮರಾಜನಗರ :18 ಹೊಸ ಕೋವಿಡ್ ಪ್ರಕರಣ ದೃಢ! 284 ಸಕ್ರಿಯ ಪ್ರಕರಣ

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.