“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ
Team Udayavani, Jun 17, 2021, 11:20 PM IST
ಟೋಕಿಯೊ : ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಜಪಾನ್ ಸರಕಾರ ಟೋಕಿಯೊ ಮತ್ತು ಸುತ್ತಮುತ್ತಲ ಆರು ಪ್ರದೇಶಗಳನ್ನು “ಕೊರೊನಾ ಮುಕ್ತ’ ವಲಯಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಒಲಿಂಪಿಕ್ಸ್ ತಾಣವಾಗಿರುವ ಟೋಕಿಯೊ ಮತ್ತು ಒಸಾಕಾ ನಗರದಲ್ಲಿ ಇತ್ತೀಚೆಗೆ ರೂಪಾಂತರಿ ವೈರಾಣು ಕಾಣಿಸಿಕೊಂಡದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಟೋಕಿಯೊದಲ್ಲಿ ಸೋಂಕು ಪ್ರಮಾಣ ಇಳಿಮುಖವಾಗುತ್ತಿರುವುದರಿಂದ ಇದನ್ನು “ತುರ್ತು ಪ್ರದೇಶ’ ಎಂದು ಗುರುತಿಸಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸಲು ಜಪಾನ್ ಮುಂದಾಗಿದೆ.
“ಜುಲೈ 23ರಂದು ಆರಂಭ ವಾಗಲಿರುವ ಒಲಿಂಪಿಕ್ಸ್ಗೆ ಯಾವುದೇ ಅಡ್ಡಿ, ಆತಂಕ ಎದು ರಾಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗಾ ತಿಳಿಸಿದ್ದಾರೆ.
ಇದನ್ನೂ ಓದಿ :ವನಿತಾ ಟೆಸ್ಟ್ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ