ಮಾಜಿ ನಂ.1 ಟೆನಿಸಿಗ ಬೆರ್ಡಿಶ್‌ ವಿದಾಯ

Team Udayavani, Nov 18, 2019, 12:45 AM IST

ಲಂಡನ್‌: ವಿಶ್ವದ ಮಾಜಿ ನಂಬರ್‌ ವನ್‌ ಟೆನಿಸಿಗ, ವಿಂಬಲ್ಡನ್‌ ರನ್ನರ್‌ ಅಪ್‌ ಖ್ಯಾತಿಯ ಜೆಕ್‌ ಆಟಗಾರ ಥಾಮಸ್‌ ಬೆರ್ಡಿಶ್‌ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ.

17 ವರ್ಷಗಳ ಸುದೀರ್ಘ‌ ಟೆನಿಸ್‌ ಬಾಳ್ವೆಯಲ್ಲಿ 17 ಎಟಿಪಿ ಸಿಂಗಲ್ಸ್‌ ಪ್ರಶಸ್ತಿ ಜಯಿಸಿರುವ ಥಾಮಸ್‌ ಬೆರ್ಡಿಶ್‌, 2010-2016 ಅವಧಿಯಲ್ಲಿ ವಿಶ್ವದ ಟಾಪ್‌-10 ಯಾದಿಯನ್ನು ಅಲಂಕರಿಸಿದ್ದರು.

ಬೆರ್ಡಿಶ್‌ ಒಮ್ಮೆಯಷ್ಟೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ್ದು, 2010ರ ವಿಂಬಲ್ಡನ್‌ ಪ್ರಶಸ್ತಿ ಸಮರದಲ್ಲಿ ರಫೆಲ್‌ ನಡಾಲ್‌ಗೆ ಶರಣಾಗಿದ್ದರು. ಜೆಕೋಸ್ಲೊವಾಕಿಯಾ 2012 ಮತ್ತು 2013ರಲ್ಲಿ ಸತತ 2 ವರ್ಷ ಡೇವಿಸ್‌ ಕಪ್‌ ಜಯಿಸುವಲ್ಲಿ ಬೆರ್ಡಿಶ್‌ ಪಾತ್ರ ಮಹತ್ವದ್ದಾಗಿತ್ತು.

34ರ ಹರೆಯದ ಥಾಮಸ್‌ ಬೆರ್ಡಿಶ್‌ ಕಳೆದ ಯುಎಸ್‌ ಓಪನ್‌ ಕೂಟದ ಮೊದಲ ಸುತ್ತಿನಲ್ಲೇ ಪರಾಭವಗೊಂಡ ಬಳಿಕ ಯಾವುದೇ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ. ನ್ಯೂಯಾರ್ಕ್‌ನಲ್ಲಿ ನಡೆದ ಎಟಿಪಿ ಫೈನಲ್ಸ್‌ ಅರ್ಹತಾ ಸುತ್ತಿನಲ್ಲಿ ಜೆನ್ಸನ್‌ ಬ್ರೂಕ್ಸ್‌ ಬಿ ವಿರುದ್ಧ ಸೋಲನುಭವಿಸಿದ ಬಳಿಕ ಬೆರ್ಡಿಶ್‌ ನಿವೃತ್ತಿಯ ನಿರ್ಧಾರ ಮಾಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ