ಉಗಾಂಡದಲ್ಲಿ ಪೇಚಿಗೆ ಸಿಲುಕಿದ ಪಾಕ್‌ ಕ್ರಿಕೆಟಿಗರು!


Team Udayavani, Dec 23, 2017, 10:11 AM IST

23-16.jpg

ಕಂಪಲ (ಉಗಾಂಡ): ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟಿಗರು ಉಗಾಂಡದಲ್ಲಿ ಟಿ20 ಕ್ರಿಕೆಟ್‌ ಆಡಲು ಹೋಗಿ ಈಗ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಕೂಟದ ಪ್ರಾಯೋಜಕ ಹಿಂದೆ ಸರಿದಿದ್ದಾರೆಂದು ಸಂಘಟಕರು ಘೋಷಿಸಿದ್ದರಿಂದ ಆಡಲು ಹೋದ ಟಿ20 ಕೂಟವೇ ರದ್ದುಗೊಂಡಿದೆ. ಕಡೆಗೆ ಸಂಘಟಕರು ಹಣ ಕೊಡಲಿಲ್ಲವೆಂದು ಪ್ರವಾಸ ವ್ಯವಸ್ಥಾ ಸಂಸ್ಥೆ ವಿಮಾನ ಟಿಕೆಟನ್ನೇ ರದ್ದುಗೊಳಿಸಿದೆ. ಇದರಿಂದಾಗಿ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಿ ಆಡಲು ಕಳುಹಿಸಿಕೊಟ್ಟಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬಾರೀ ಮುಖಭಂಗಕ್ಕೆ ಒಳಗಾಗಿದೆ.

ಪರದಾಡಿದ ಪಾಕ್‌ನ ತಾರೆಯರು:
ಸಯೀದ್‌ ಅಜ್ಮಲ್‌, ಯಾಸಿರ್‌ ಹಮೀದ್‌, ಇಮ್ರಾನ್‌ ಫ‌ರತ್‌ ಸೇರಿದಂತೆ ಪಾಕ್‌ನ ತಾರಾ ಆಟಗಾರರು ಕೂಟಕ್ಕೆ ತೆರಳಿದ್ದರು. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಆಟಗಾರರು ಪ್ರವಾಸಕ್ಕೆ ಹೊರಡುವ ಮೊದಲೇ ಉಗಾಂಡ ಕ್ರಿಕೆಟ್‌ ಸಂಸ್ಥೆ ಜತೆಗೆ ಒಪ್ಪಂದ ನಡೆಸಿತ್ತು. ಈ ಪ್ರಕಾರವಾಗಿ ಒಪ್ಪಂದದ ಮೊತ್ತವಾಗಿ ಉಗಾಂಡ ಕ್ರಿಕೆಟ್‌ ಸಂಸ್ಥೆ ಪಾಕಿಸ್ತಾನ ಆಟಗಾರರಿಗೆ ಶೇ.50ರಷ್ಟು ಹಣ ನೀಡಬೇಕಿತ್ತು. ಒಪ್ಪಂದದ ಪ್ರಕಾರ ಪಾಕ್‌ ಆಟಗಾರರು ಉಗಾಂಡದ ಕಂಪಲಕ್ಕೆ ತಲುಪಿದರು. ಈ ನಡುವೆ ಪ್ರಾಯೋಜಕರು ದಿಢೀರ್‌ ಕೈಕೊಟ್ಟಿದ್ದಾರೆ. ಸುಮ್ಮನೆ 2 ದಿನ ವ್ಯರ್ಥ
ಮಾಡಿದ ನಂತರ ದೇಶಕ್ಕೆ ಹಿಂತಿರುಗಲು ಹೊರಟರೆ ಅಲ್ಲೂ ಎಡವಟ್ಟಾಗಿದೆ.

ವಿಮಾನದ ಟಿಕೆಟ್‌ ಬುಕ್‌ ಮಾಡಿದ್ದ ಪ್ರವಾಸಿ ಯೋಜನಾ ಸಂಸ್ಥೆ ಹಣ ಪಾವತಿ ಮಾಡಿಲ್ಲವೆಂದು ಟಿಕೆಟನ್ನು ಬ್ಲಾಕ್‌ ಮಾಡಿದೆ. ಮರಳಿ ಹೋಟೆಲ್‌ಗೆ ತೆರಳುವ ದುಸ್ಥಿತಿ ಎದುರಾಗಿದೆ. ಈಗ ಉಗಾಂಡಾದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಆಟಗಾರರನ್ನು ಪಾಕಿಸ್ತಾನಕ್ಕೆ ತಲುಪುವ ಹೊಣೆ ಹೊತ್ತುಕೊಂಡಿದೆ. 

ಟಾಪ್ ನ್ಯೂಸ್

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

vikrant rona

ಅಡ್ವೆಂಚರ್ ಹೀರೋಗಾಗಿ ಮತ್ತಷ್ಟು ಕಾಯಬೇಕು.. ‘ವಿಕ್ರಾಂತ್ ರೋಣ’ನ ದರ್ಶನ ಸದ್ಯಕ್ಕಿಲ್ಲ

1-rwerw

ರಾಮದಾಸ್, ಸಿಂಹ ಕೋಲ್ಡ್ ವಾರ್ : ಮೈಸೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

Charanjit Singh

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ನಾಯಕ ಚರಣ್ ಜಿತ್ ಸಿಂಗ್ ನಿಧನ

whatsapp group

ಇನ್ನು ಬೇಕಾಬಿಟ್ಟಿ ಗ್ರೂಪ್ ಚಾಟ್ ಮಾಡುವಂತಿಲ್ಲ..: ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸಪ್

ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉತ್ಪಲ್ ಪರಿಕ್ಕರ್

ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉತ್ಪಲ್ ಪರ್ರಿಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charanjit Singh

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ನಾಯಕ ಚರಣ್ ಜಿತ್ ಸಿಂಗ್ ನಿಧನ

brett lee

ಟೆಸ್ಟ್ ನಾಯಕರಾಗಬಲ್ಲ ನಾಲ್ಕೈದು ಆಟಗಾರರು ಭಾರತ ತಂಡದಲ್ಲಿದ್ದಾರೆ: ಬ್ರೆಟ್ ಲೀ

west indies odi team

ಭಾರತ ಪ್ರವಾಸಕ್ಕೆ ಬಲಿಷ್ಠ ತಂಡ ಕಟ್ಟಿದ ವಿಂಡೀಸ್: 3 ವರ್ಷದ ಬಳಿಕ ತಂಡ ಸೇರಿದ ರೋಚ್

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ರೈತರು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಲಿ

ರೈತರು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಲಿ

ವಿದ್ಯಾರ್ಥಿಗಳಲ್ಲಿರಲಿ ಸವಾಲು ಎದುರಿಸುವ ದಿಟ್ಟ ಶಕ್ತಿ; ಶಾಸಕ ದೊಡ್ಡನಗೌಡ

23farmers

ಸಾಗರ: ಅರಣ್ಯ ಭೂಮಿ ಸಾಗುವಳಿ ಅರ್ಜಿ ವಜಾ; ಧರಣಿ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.