ಕೆಕೆಆರ್‌ಗೆ ಟ್ರೆವರ್‌ ಬೈಲೀಸ್‌ ಕೋಚ್‌?

Team Udayavani, Jul 18, 2019, 5:46 AM IST

ಕೋಲ್ಕತಾ: ಶಾರುಕ್‌ ಖಾನ್‌ ಒಡೆತನದ ಕೋಲ್ಕತಾ ನೈಟ್‌ರೈಡರ್ ತಂಡದ ಕೋಚ್‌ ಹುದ್ದೆಗೆ ವಿಶ್ವಕಪ್‌ ವಿಜೇತ ಇಂಗ್ಲೆಂಡ್‌ ತಂಡದ ಕೋಚ್‌ ಟ್ರೆವರ್‌ ಬೈಲೀಸ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಮುಖ್ಯ ಕೋಚ್‌ ಆಗಿದ್ದ ಜಾಕ್‌ ಕ್ಯಾಲಿಸ್‌ ಅವರನ್ನು ಇತ್ತೀಚೆಗೆ ಕೈಬಿಡಲಾಗಿತ್ತು, ಇದೀಗ ನೂತನ ಕೋಚ್‌ ಆಗಿ ಟ್ರೆವರ್‌ ಬೈಲೀಸ್‌ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ. ಆದರೆ ಬೈಲೀಸ್‌ ನಿರ್ಧಾರ ಇನ್ನಷ್ಟೇ ತಿಳಿಯಬೇಕಿದೆ.

ಆಸ್ಟ್ರೇಲಿಯದವರಾದ ಟ್ರೆವರ್‌ ಬೈಲೀಸ್‌ ಇಂಗ್ಲೆಂಡ್‌ ತಂಡವನ್ನು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎರಡು ಬಾರಿಯ ಐಪಿಎಲ್‌ ಚಾಂಪಿಯನ್‌ ಆಗಿರುವ ಕೆಕೆಆರ್‌ ತಂಡಕ್ಕೆ ಬೈಲೀಸ್‌ ಸಲಹೆ ಬೇಕಿದೆ ಎನ್ನುವುದು ಫ್ರಾಂಚೈಸಿಯ ಬಯಕೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ