ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್: ಮೈ ಎಮಿರೇಟ್ಸ್ ಟಿ 20 ತಂಡ ಘೋಷಣೆ
Team Udayavani, Aug 12, 2022, 11:08 PM IST
ಮುಂಬಯಿ: ಮುಂಬೈ ಇಂಡಿಯನ್ಸ್ ಒಡೆತನದ, ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸಲಿರುವ “ಮೈ ಎಮಿರೇಟ್ಸ್’ ತಂಡದ ಸದಸ್ಯರ ಹೆಸರು ಪ್ರಕಟಗೊಂಡಿದೆ.
ವೆಸ್ಟ್ ಇಂಡೀಸ್ನ ತಾರಾ ಆಟಗಾರರಾದ ಕೈರನ್ ಪೊಲಾರ್ಡ್, ಡ್ವೇನ್ ಬ್ರಾವೊ ನಿಕೋಲಸ್ ಪೂರಣ್; ನ್ಯೂಜಿಲ್ಯಾಂಡ್ ವೇಗಿ ಟ್ರೆಂಟ್ ಬೌಲ್ಟ್ ಈ ತಂಡದ ಪ್ರಮುಖರು.
“ಮೈ ಎಮಿರೇಟ್ಸ್ ಕುಟುಂಬದ 14 ಆಟಗಾರರಿಗೆ ಸ್ವಾಗತ. ಪ್ರಮುಖ ಆಧಾರಸ್ತಂಭಗಳಲ್ಲಿ ಒಬ್ಬರಾಗಿರುವ ಕೈರನ್ ಪೊಲಾರ್ಡ್ ಅವರನ್ನು ಹೊಂದಿರುವುದು ಖುಷಿಯ ಸಂಗತಿ.
ಬ್ರಾವೊ, ಬೌಲ್ಟ್, ಪೂರಣ್ ಕೂಡ ಇದ್ದಾರೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡ ಸಂತುಲಿತ ತಂಡ ಇದಾಗಿದೆ’ ಎಂಬುದಾಗಿ ರಿಲಯನ್ಸ್ ಜಿಯೋದ ಚೇರ್ಮನ್ ಆಕಾಶ್ ಎಂ. ಅಂಬಾನಿ ಹೇಳಿದರು.
ಮೈ ಎಮಿರೇಟ್ಸ್ ತಂಡ: ಕೈರನ್ ಪೊಲಾರ್ಡ್, ಡ್ವೇನ್ ಬ್ರಾವೊ, ನಿಕೋಲಸ್ ಪೂರಣ್, ಟ್ರೆಂಟ್ ಬೌಲ್ಟ್, ಆ್ಯಂಡ್ರೆ ಫ್ಲೆಚರ್, ಇಮ್ರಾನ್ ತಾಹಿರ್, ಸಮಿತ್ ಪಟೇಲ್, ವಿಲ್ ಸ್ಮಿಡ್, ಜೋರ್ಡನ್ ಥಾಮ್ಸನ್, ನಜೀಬುಲ್ಲ ಜದ್ರಾನ್, ಜಹೀರ್ ಖಾನ್, ಫಜಲ್ ಹಕ್ ಫಾರೂಖೀ, ಬ್ರಾಡ್ಲಿ ವೀಲ್, ಬಾಸ್ ಡೆ ಲೀಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ