ಪಿಎಸ್ ಎಲ್ ಆರಂಭದ ದಿನವೇ ಆಘಾತ: ಉಮರ್ ಅಕ್ಮಲ್ ರನ್ನು ಅಮಾನತು ಮಾಡಿದ ಪಿಸಿಬಿ

Team Udayavani, Feb 20, 2020, 2:24 PM IST

ಇಸ್ಲಮಾಬಾದ್: ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ರನ್ನು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ. ಗುರುವಾರದಿಂದಲೇ ಜಾರಿಗೆ ಬರುವಂತೆ ಉಮರ್ ಅಕ್ಮಲ್ ರನ್ನು ಅಮಾನತು ಮಾಡಿದ್ದು, ಇದಿರಿಂದಾಗಿ ಅವರು ಇಂದಿನಿಂದ ಆರಂಭವಾಗಲಿರುವ  ಪಿಎಸ್ ಎಲ್ ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ಪಿಸಿಬಿಯು ಭ್ರಷ್ಟಾಚಾರ ವಿರೋಧಿ ನಿಯಮದ 4.7.1 ನಿಯಮ ಉಲ್ಲಂಘನೆಯಾದ ಕಾರಣ ಉಮರ್ ಅಕ್ಮಲ್ ರನ್ನು ಅಮಾನತು ಮಾಡಿದೆ. ತನಿಖೆ ಇನ್ನೂ ಜಾರಿಯಲ್ಲಿರುವ ಕಾರಣ ಹೆಚ್ಚಿನ ವಿಷಯ ಬಹಿರಂಗ ಮಾಡುವಂತಿಲ್ಲ ಎಂದು ಪಿಸಿಬಿ ಹೇಳಿದೆ.

ಅಮಾನತು ಆದೇಶ ಜಾರಿಯಲ್ಲಿರುವ ತನಕ ಉಮರ್ ಅಕ್ಮಲ್ ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಪಿಎಸ್ ಎಲ್ ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ ತಂಡವನ್ನು ಉಮರ್ ಅಕ್ಮಲ್ ಪ್ರತಿನಿಧಿಸುತ್ತಿದ್ದರು. ಇವರ ಅಮಾನತಿನ ಕಾರಣ ಬದಲಿ ಆಟಗಾರನನ್ನು ಖರೀದಿಸಲು ತಂಡಕ್ಕೆ ಅವಕಾಶ ನೀಡಲಾಗಿದೆ.

ಫೆಬ್ರವರಿ 20ರಿಂದ ಮಾರ್ಚ್ 22ರವರೆಗೆ ಪಿಎಸ್ ಎಲ್ ಕೂಟ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ ಮತ್ತು ಇಸ್ಲಮಾಬಾದ್ ಯುನೈಟೆಡ್ ಮುಖಾಮುಖಿಯಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ