Udayavni Special

ದ್ರಾವಿಡ್ ಗರಡಿಯ ಖಲೀಲ್ ಅಹಮದ್ ಏಶ್ಯಾಕಪ್ ಗೆ ಆಯ್ಕೆ


Team Udayavani, Sep 1, 2018, 4:56 PM IST

khaleel.jpg

ಖಲೀಲ್ ಅಹಮದ್. ಈ ಹೆಸರು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಪರಿಚಿತ ಹೆಸರು. 2016ರ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನಲ್ಲಿ ಆಡಿ ಗಮನ ಸೆಳೆದಿದ್ದ ಈ ಎಡಗೈ ವೇಗಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಸಪ್ಟೆಂಬರ್ 15 ರಿಂದ ದುಬೈನಲ್ಲಿ ನಡೆಯುವ ಏಶ್ಯಾಕಪ್ ಏಕದಿನ ಸರಣಿಗೆ ಖಲೀಲ್ ಅಹಮದ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. 

ಮೂಲತಃ ರಾಜಸ್ಥಾನದವರಾದ ಖಲೀಲ್ ಹುಟ್ಟಿದ್ದು 1997ರ ಡಿಸೆಂಬರ್ 5ರಂದು. ಅಂಡರ್ 16 ಮತ್ತು ಅಂಡರ್ 19 ಕೂಟಗಳಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸಿದ್ದರು. 2016ರ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತದ ಪ್ರಮುಖ ವೇಗಿಯಾಗಿದ್ದರು. ರಾಹುಲ್ ದ್ರಾವಿಡ್ ಕೋಚಿಂಗ್ ನಲ್ಲಿ ಖಲೀಲ್ ಅಹಮದ್ ಭಾರತ ಟೂರ್ನಿಯಲ್ಲಿ ಫೈನಲ್ ಗೇರಲು ಪ್ರಮುಖ ಪಾತ್ರ ವಹಿಸಿದ್ದರು. 


ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅಷ್ಟೇನು ಗಮನ ಸೆಳೆಯದ ಖಲೀಲ್ ಎರಡು ಪಂದ್ಯಗಳಿಂದ ಎರಡು ವಿಕಟ್ ಅಷ್ಟೇ ಪಡೆದಿದ್ದಾರೆ. ಆದರೆ ಲಿಸ್ಟ್ ಎ ಕ್ರಿಕೆಟ್ ನಲ್ಲಿ 17 ಪಂದ್ಯಗಳಿಂದ ಬರೋಬ್ಬರಿ 28 ವಿಕೆಟ್ ಕಬಳಿಸಿದ್ದಾರೆ. ದೇಶೀಯ ಟಿ20ಯ 12 ಪಂದ್ಯಗಳಿಂದ 17 ವಿಕೆಟ್ ಉರುಳಿಸಿರುವ ಖಲೀಲ್ ಅಹಮದ್ ಸಾಧನೆ ಕಡಿಮೆಯೇನಲ್ಲ.  2018ರ ಸೈಯ್ಯದ್ ಮುಶ್ತಾಕ್ ಅಲಿ ಕೂಟದಲ್ಲಿ ಖಲೀಲ್ 10 ಪಂದ್ಯಗಳಿಂದ 17 ವಿಕಟ್ ಉರುಳಿಸಿದ ಖಲೀಲ್ ಎಕಾನಮಿ ರೇಟ್ ಕೇವಲ 6.77.

ಭಾರತ ಎ ತಂಡದಲ್ಲಿ ಸಾಧನೆ:
ಭಾರತ ಎ ತಂಡದ ಪರವಾಗಿ ಖಲೀಲ್ ತೋರ್ಪಡಿಸಿದ ಅದ್ಭುತ ಸಾಧನೆ ರಾಷ್ಟ್ರೀಯ ಆಯ್ಕೆಗಾರರ ಚಿತ್ತ ಸೆಳೆಯುವಲ್ಲಿ ಕಾರಣವಾಯಿತು. ಎ ತಂಡದ ಪರವಾಗಿ ಇಂಗ್ಲೆಂಡ್ ಸರಣಿ ಮತ್ತು ಇತ್ತೀಚೆಗೆ ಮುಗಿದ ಚತುಷ್ಕೋನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೊರಿದ್ದರು.  ಕಳೆದ 9 ಪಂದ್ಯಗಳಿಂದ 15 ವಿಕೆಟ್ ಪಡೆದ ಖಲೀಲ್ ಪ್ರತೀ ಪಂದ್ಯದಲ್ಲೂ ವಿಕೆಟ್ ಕಬಳಿಸಿದ್ದಾರೆ ಎನ್ನುವುದು ವಿಶೇಷ. 

ಐಪಿಎಲ್ ನಲ್ಲೂ ಆಡಿರುವ ಖಲೀಲ್ ಅಹಮದ್ ಕಳೆದ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. 20 ಲಕ್ಷ ಮೂಲ ಬೆಲೆ ಹೊಂದಿದ್ದ ಖಲೀಲ್ ಬಿಕರಿಯಾಗಿದ್ದು ಮಾತ್ರ ಬರೋಬ್ಬರಿ ಮೂರೂ ಕೋಟಿ ರೂಪಾಯಿಗಳಿಗೆ. 

ಭಾರತದ ಮಾಜಿ ಎಡಗೈ ವೇಗಿ ಜಹೀರ್ ಖಾನ್ ಅವರನ್ನು ಬಹುವಾಗಿ ಮೆಚ್ಚುವ ಖಲೀಲ್ ಅಹಮದ್ ಕೂಡಾ ಎಡಗೈ ವೇಗಿ. ತಾನು ವೇಗದ ಬೌಲರ್ ಆಗಲು ಜಹೀರ್ ಖಾನ್ ಸ್ಪೂರ್ತಿ ಎನ್ನುವ ಖಲೀಲ್ ಬೌಲಿಂಗ್ ಶೈಲಿ ಕೂಡಾ ಜಹೀರ್ ಬೌಲಿಂಗ್ ಶೈಲಿಯನ್ನು ಹೋಲುತ್ತದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.  

ಟಾಪ್ ನ್ಯೂಸ್

ವಿಧವಾ ವೇತನ ನೀಡಲು ಲಂಚ : ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ

ವಿಜಯಪುರ : ವಿಧವಾ ವೇತನ ನೀಡಲು ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ಚಾಮುಂಡಿ ಕ್ಷೇತ್ರದಲ್ಲಿ ಸೋತು ಅಧಿಕಾರ ಕಳೆದುಕೊಂಡರು ಸಿದ್ದುಗೆ ಬುದ್ದಿ ಬಂದಿಲ್ಲ : ಈಶ್ವರಪ್ಪ

ಚಾಮುಂಡಿ ಕ್ಷೇತ್ರದಲ್ಲಿ ಸೋತು ಅಧಿಕಾರ ಕಳೆದುಕೊಂಡರೂ ಸಿದ್ದುಗೆ ಬುದ್ದಿ ಬಂದಿಲ್ಲ : ಈಶ್ವರಪ್ಪ

Minister K.S.Eswarappa

ಬಹಿರಂಗ ಟೀಕೆ ಸಲ್ಲದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ : ಯತ್ನಾಳಗೆ ಈಶ್ವರಪ್ಪ ಕಿವಿಮಾತು

Ramesh Jarakiholi

ಜಲವಿವಾದಗಳ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಭೆ ಕರೆದ ಸಚಿವ ರಮೇಶ್ ಜಾರಕಿಹೊಳಿ  

ಡಿಜೆ ಹಳ್ಳಿ ಗಲಭೆಯ ಎನ್‌ಐಎ ವರದಿ ಆಧಾರದಡಿ ಜಮೀರ್ ಮೇಲೆ ಕೇಸ್ ಹಾಕಿ: ಅಶ್ವತ್ಥ್ ನಾರಾಯಣ

ಡಿಜೆ ಹಳ್ಳಿ ಗಲಭೆಯ ಎನ್‌ಐಎ ವರದಿ ಆಧಾರದಡಿ ಜಮೀರ್ ಮೇಲೆ ಕೇಸ್ ಹಾಕಿ: ಅಶ್ವತ್ಥ್ ನಾರಾಯಣ

ವಂಚನೆ ಪ್ರಕರಣ: ನೀರವ್ ಮೋದಿ ಭಾರತಕ್ಕೆ ಗಡಿಪಾರು: ಬ್ರಿಟನ್ ಕೋರ್ಟ್ ತೀರ್ಪು

ವಂಚನೆ ಪ್ರಕರಣ: ನೀರವ್ ಮೋದಿ ಭಾರತಕ್ಕೆ ಗಡಿಪಾರು: ಬ್ರಿಟನ್ ಕೋರ್ಟ್ ತೀರ್ಪು

ಇಂಗ್ಲೆಂಡ್ ಸ್ಪಿನ್ ಜಾಲಕ್ಕೆ ಸಿಲುಕಿದ ಟೀಂ ಇಂಡಿಯಾ: 145ಕ್ಕೆ ಆಲೌಟ್, ಅಲ್ಪ ಮುನ್ನಡೆ

ಇಂಗ್ಲೆಂಡ್ ಸ್ಪಿನ್ ಜಾಲಕ್ಕೆ ಸಿಲುಕಿದ ಟೀಂ ಇಂಡಿಯಾ: 145ಕ್ಕೆ ಆಲೌಟ್, ಅಲ್ಪ ಮುನ್ನಡೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲೆಂಡ್ ಸ್ಪಿನ್ ಜಾಲಕ್ಕೆ ಸಿಲುಕಿದ ಟೀಂ ಇಂಡಿಯಾ: 145ಕ್ಕೆ ಆಲೌಟ್, ಅಲ್ಪ ಮುನ್ನಡೆ

ಇಂಗ್ಲೆಂಡ್ ಸ್ಪಿನ್ ಜಾಲಕ್ಕೆ ಸಿಲುಕಿದ ಟೀಂ ಇಂಡಿಯಾ: 145ಕ್ಕೆ ಆಲೌಟ್, ಅಲ್ಪ ಮುನ್ನಡೆ

ಏಕದಿನ ಪಂದ್ಯದಲ್ಲಿ ಪೃಥ್ವಿ ಶಾ ದ್ವಿಶತಕ, ಸೂರ್ಯಕುಮಾರ್ ಭರ್ಜರಿ ಶತಕ: 457 ರನ್ ಗಳಿಸಿದ ಮುಂಬೈ !

ಏಕದಿನದಲ್ಲಿ ಪೃಥ್ವಿ ಶಾ ದ್ವಿಶತಕ, ಸೂರ್ಯಕುಮಾರ್ ಭರ್ಜರಿ ಶತಕ: 457 ರನ್ ಗಳಿಸಿದ ಮುಂಬೈ !

virat kohli spoke about light of motera stadium

ಮೊಟೆರಾ ಸ್ಟೇಡಿಯಂ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ!

This day that year: Sachin Tendulkar becomes first man to complete double ton in ODIs

ಈ ದಿನ, ಆ ವರ್ಷ : ಸ‘ಚಿನ್ನ’ ಡಬಲ್ ಸೆಂಚೂರಿ..!

Untitled-1

ಪಿಂಕ್ ಬಾಲ್ ನಲ್ಲಿ ಅಕ್ಷರ್ – ಅಶ್ವಿನ್ ಮ್ಯಾಜಿಕ್ : ಅಲ್ಪ ಮೊತ್ತಕ್ಕೆ ಕುಸಿದ ಆಂಗ್ಲರು

MUST WATCH

udayavani youtube

ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

udayavani youtube

ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1

udayavani youtube

ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani

ಹೊಸ ಸೇರ್ಪಡೆ

DC

ಡೀಸಿ ಗ್ರಾಮ ವಾಸ್ತವ್ಯದಲ್ಲಿ ಸಮಸ್ಯೆಗಳ ಸುರಿಮಳೆ

ಸಂಪ್ರದಾಯ ಉಳಿಸಿ-ಬೆಳೆಸಿ

ಸಂಪ್ರದಾಯ ಉಳಿಸಿ-ಬೆಳೆಸಿ

chikkaballapur

ಜಿಲ್ಲೆಯಲ್ಲಿ ಗಣಿ ಮಾಫಿಯಾ ತಡೆಗೆ ಸರ್ಕಾರ ವಿಫ‌ಲ

Crushar

ಕೋಲಾರ ಅಧಿಕಾರಿಗಳಿಂದ ಕ್ರಷರ್‌, ಕ್ವಾರಿ ಮಾಲೀಕರ ಸಭೆ

28ಕ್ಕೆ ಧಮ್ಮ ದೀಕ್ಷಾ-ಚಿಂತನಾ ಸಮಾವೇಶ

28ಕ್ಕೆ ಧಮ್ಮ ದೀಕ್ಷಾ-ಚಿಂತನಾ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.