ಬದಲಾಗದ ಪಾಕ್ ಟೆಸ್ಟ್ ತಂಡ
Team Udayavani, Nov 29, 2018, 6:35 AM IST
ಲಾಹೋರ್: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 1-1 ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದ ಪಾಕಿಸ್ಥಾನ, ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಈ ನಿರ್ಣಾಯಕ ಟೆಸ್ಟ್ ಡಿ. 3ರಿಂದ ಅಬುಧಾಬಿಯಲ್ಲಿ ಆರಂಭವಾಗಲಿದೆ.
ಪಾಕಿಸ್ಥಾನ ತಂಡ: ಸರ್ಫ್ರಾಜ್ ಅಹ್ಮದ್ (ನಾಯಕ), ಮೊಹಮ್ಮದ್ ಹಫೀಜ್, ಇಮಾಮ್ ಉಲ್ ಹಕ್, ಅಜರ್ ಅಲಿ, ಹ್ಯಾರಿಸ್ ಸೊಹೈಲ್, ಅಸದ್ ಶಫೀಕ್, ಬಾಬರ್ ಆಜಂ, ಬಿಲಾಲ್ ಆಸಿಫ್, ಹಸನ್ ಅಲಿ, ಯಾಸಿರ್ ಶಾ, ಮೊಹಮ್ಮದ್ ಅಬ್ಟಾಸ್, ಸಾದ್ ಅಲಿ, ಶಹೀನ್ ಅಫ್ರಿದಿ, ಫಾಹಿಮ್ ಅಶ್ರಫ್, ಮಿರ್ ಹಮ್ಜ.