ಅಂಡರ್‌-19 ವಿಶ್ವಕಪ್‌: ಗಫಾರಿ ಗೂಗ್ಲಿಗೆ ಆತಿಥೇಯ ಆಫ್ರಿಕಾ ಬೌಲ್ಡ್‌

Team Udayavani, Jan 17, 2020, 10:54 PM IST

ಕಿಂಬರ್ಲಿ: ಅಫ್ಘಾನಿಸ್ಥಾನ ವಿರುದ್ಧ ಆಡಲಾದ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಆಘಾತಕಾರಿ ಸೋಲನುಭವಿಸಿದೆ.

ಕಿಂಬರ್ಲಿಯಲ್ಲಿ ನಡೆದ ಈ ಮುಖಾಮುಖೀಯಲ್ಲಿ ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ಶಫಿಯುಲ್ಲ ಗಫಾರಿ 15 ರನ್ನಿಗೆ 6 ವಿಕೆಟ್‌ ಹಾರಿಸಿ ಹರಿಣಗಳ ಕತೆ ಮುಗಿಸಿದರು. ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 29.1 ಓವರ್‌ಗಳಲ್ಲಿ ಕೇವಲ 129ಕ್ಕೆ ಕುಸಿದರೆ, ಅಫ್ಘಾನಿಸ್ಥಾನ 25 ಓವರ್‌ಗಳಲ್ಲಿ 3 ವಿಕೆಟಿಗೆ 130 ರನ್‌ ಬಾರಿಸಿ ಅಮೋಘ ಗೆಲುವು ಸಾಧಿಸಿತು.

ಗಫಾರಿ 12ನೇ ಓವರ್‌ನಲ್ಲಿ ಬೌಲಿಂಗ್‌ ದಾಳಿಗೆ ಇಳಿದರು. ಆಗ ದಕ್ಷಿಣ ಆಫ್ರಿಕಾ 2ಕ್ಕೆ 59 ರನ್‌ ಮಾಡಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಗಫಾರಿ ಗೂಗ್ಲಿಗೆ ಉತ್ತರಿಸುವಲ್ಲಿ ವಿಫ‌ಲವಾದ ಆತಿಥೇಯ ಪಡೆ ಪಟಪಟನೆ ವಿಕೆಟ್‌ ಕಳೆದುಕೊಳ್ಳುತ್ತ ಹೋಯಿತು. ಆತಿಥೇಯ ತಂಡದ ಬಹುತೇಕ ಮಂದಿ ಬಲಗೈ ಆಟಗಾರರಾದ್ದರಿಂದ ಗಫಾರಿ ಭರ್ಜರಿ ಯಶಸ್ಸು ಕಂಡರು. ಅಂಡರ್‌-19 ವಿಶ್ವಕಪ್‌ನಲ್ಲಿ ಗಫಾರಿ ಅವರದು 8ನೇ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-29.1 ಓವರ್‌ಗಳಲ್ಲಿ 129 (ಪಾರ್ಸನ್ಸ್‌ 40, ಕೋಟಿj 38, ಬ್ಯೂಫೋರ್ಟ್‌ 25, ಗಫಾರಿ 15ಕ್ಕೆ 6, ಫ‌ಜಲ್‌ ಹಕ್‌ 43ಕ್ಕೆ 2, ನೂರ್‌ ಅಹ್ಮದ್‌ 44ಕ್ಕೆ 2). ಅಫ್ಘಾನಿಸ್ಥಾನ-25 ಓವರ್‌ಗಳಲ್ಲಿ 3 ವಿಕೆಟಿಗೆ 130 (ಇಮ್ರಾನ್‌ ಮಿರ್‌ 57, ಇಬ್ರಾಹಿಂ ಜದ್ರಾನ್‌ 52, ಆ್ಯಚಿಲ್‌ ಕ್ಲೋಟ್‌ 20ಕ್ಕೆ 2).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ