26ನೇ ಕ್ಲಬ್ಗ ಸಹಿ: ಉರುಗ್ವೆ ಫುಟ್ಬಾಲಿಗ ಸೆಬಾಸ್ಟಿಯನ್ ವಿಶ್ವದಾಖಲೆ
Team Udayavani, Dec 29, 2017, 6:45 AM IST
ರಿಯೋ ಡಿ ಜನೈರೊ: ಮಾಜಿ ಉರುಗ್ವೆ ಫುಟ್ಬಾಲ್ ಆಟಗಾರ ಸೆಬಾಸ್ಟಿಯನ್ ಆ್ಯಬ್ರೂé 26ನೇ ವೃತ್ತಿ ಪರ ಫುಟ್ಬಾಲ್ ಕ್ಲಬ್ ಪರ ಸಹಿ ಹಾಕಿದ್ದಾರೆ. ಈ ಮೂಲಕ ಆಟಗಾರನೊಬ್ಬ ಅತೀ ಹೆಚ್ಚು ಕ್ಲಬ್ ಪರ ಸಹಿ ಹಾಕಿದ ಮೊದಲ ಆಟಗಾರ ಎನ್ನುವ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. 41 ವರ್ಷದ ಸೆಬಾಸ್ಟಿಯನ್ ತಾವು ಸ್ಯಾಂಟಿಯಾಗೊ ತಂಡದ ಪರ ಸಹಿ ಹಾಕಿರುವುದನ್ನು ಖಚಿತಪಡಿಸಿದ್ದಾರೆ.
ಸೆಬಾಸ್ಟಿಯನ್ ಆ್ಯಬ್ರೂé ಇದುವರೆಗೆ ಅರ್ಜೆಂಟೀನಾ, ಸ್ಪೇನ್, ಬ್ರೆಜಿಲ್, ಮೆಕ್ಸಿಕೊ, ಅರ್ಜೆಂಟೀನಾ, ಇಸ್ರೇಲ್, ಪೆರುಗ್ವೆ ಹಾಗೂ ಸಾಲ್ವಡೊರ್ ಕ್ಲಬ್ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ.