ಯುಎಸ್ ಓಪನ್ ಬ್ಯಾಡ್ಮಿಂಟನ್: ಭಾರತದ ಪ್ರಮುಖರ ಗೈರು
Team Udayavani, Jun 12, 2018, 6:00 AM IST
ನ್ಯೂಯಾರ್ಕ್: ಯುಎಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮಂಗಳವಾರದಿಂದ ಆರಂಭವಾಗಲಿದೆ. ಅನುಭವಿ ಆಟಗಾರರಾದ ಪ್ರಣಯ್, ಕಶ್ಯಪ್ ಗಾಯಗೊಂಡಿರುವುದರಿಂದ ಭಾರತ ತಂಡವನ್ನು ಅಜಯ್ ಜಯರಾಮ್ ಮುನ್ನಡೆಸಲಿದ್ದಾರೆ. ಅಜಯ್ ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಕೂಟಕ್ಕೆ ಮರಳಿದ್ದಾರೆ.
ಮುಂದೆ ಏಶ್ಯನ್ ಗೇಮ್ಸ್ ಸೇರಿದಂತೆ ಪ್ರಮುಖ ಕೂಟಗಳು ನಡೆಯಲಿರುವುದರಿಂದ ಯುಎಸ್ ಓಪನ್ನಿಂದ ಹಿಂದೆ ಸರಿಯಲು ಪ್ರಣಯ್ ನಿರ್ಧರಿಸಿದ್ದಾರೆ. ಮತ್ತೋರ್ವ ಆಟಗಾರ ಕಶ್ಯಪ್ ಗಾಯಕ್ಕೆ ತುತ್ತಾಗಿದ್ದು ಚೇತರಿಸಿ ಕೊಂಡಿಲ್ಲ. ಮಹಿಳಾ ವಿಭಾಗದ ಅಗ್ರ ತಾರೆಯರಾದ ಸೈನಾ, ಸಿಂಧು ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇವರ ಅನುಪಸ್ಥಿತಿಯಿಂದ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.