ಯುಎಸ್ ಓಪನ್ ಟೆನಿಸ್ : ಬಾರ್ಟಿಗೆ ಆಘಾತವಿಕ್ಕಿದ ಶೆಲ್ಬಿ ರೋಜರ್
Team Udayavani, Sep 5, 2021, 9:28 PM IST
ನ್ಯೂಯಾರ್ಕ್: ಯುಎಸ್ ಓಪನ್ ಟೂರ್ನಿಯಲ್ಲಿ ಸ್ಟಾರ್ ಆಟಗಾರರ ಪತನ ಮುಂದುವರಿದಿದೆ. ಕೂಟದ 6ನೇ ದಿನ ನಿರ್ಗಮಿಸುವ ಸರದಿ ವಿಶ್ವದ ನಂ.1 ಹಾಗೂ ವಿಂಬಲ್ಡನ್ ಚಾಂಪಿಯನ್ ಖ್ಯಾತಿಯ ಆ್ಯಶ್ಲಿ ಬಾರ್ಟಿ ಅವರದಾಯಿತು. ಈ ದೊಡ್ಡ ಬೇಟೆಯ ಮೂಲಕ ಸುದ್ದಿಯಾದವರು ತವರಿನ ಆಟಗಾರ್ತಿ ಶೆಲ್ಬಿ ರೋಜರ್.
“ಆರ್ಥರ್ ಆ್ಯಶ್ ಸ್ಟೇಡಿಯಂ’ನಲ್ಲಿ ನಡೆದ ಬಾರ್ಟಿ ಎದುರಿನ 3ನೇ ಸುತ್ತಿನ ಮುಖಾಮುಖೀಯನ್ನು 6-2, 1-6, 7-6 (5)ರಿಂದ ಗೆದ್ದ ಶೆಲ್ಬಿ ಅಮೆರಿಕ ಪಾಲಿನ ನೂತನ ಆಶಾಕಿರಣವಾಗಿ ಮೂಡಿಬಂದರು. ಇವರ ಮುಂದಿನ ಎದುರಾಳಿ ಬ್ರಿಟನ್ನಿನ ಎಮ್ಮಾ ರ್ಯಾಡುಕಾನು. ಒಂದು ದಿನದ ಹಿಂದಷ್ಟೇ ಹಾಲಿ ಚಾಂಪಿಯನ್ ನವೋಮಿ ಒಸಾಕಾಗೆ ಲೇಲಾ ಫೆರ್ನಾಂಡಿಸ್ ಆಘಾತವಿಕ್ಕಿದ್ದರು. ಹೀಗಾಗಿ ವನಿತಾ ಸಿಂಗಲ್ಸ್ ವಿಭಾಗವೀಗ ಮುಕ್ತಗೊಂಡಿದೆ.
4ನೇ ಶ್ರೇಯಾಂಕದ ಜೆಕ್ ಆಟಗಾರ್ತಿ, ವಿಂಬಲ್ಡನ್ ರನ್ನರ್ ಅಪ್ ಕ್ಯಾರೋಲಿನಾ ಪ್ಲಿಸ್ಕೋವಾ 6-3, 6-2ರಿಂದ ಅಜ್ಲಾ ಟೊಮ್ಲಾನೋವಿಕ್ ಅವರನ್ನು ಮಣಿಸಿ 4ನೇ ಸುತ್ತು ತಲುಪಿದರು.
ಬೋಪಣ್ಣ ಜೋಡಿ ಮುನ್ನಡೆ :
ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಹಾಗೂ ಅವರ ಕ್ರೊವೇಶಿಯನ್ ಜತೆಗಾರ ಇನಾನ್ ಡೋಡಿಗ್ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರು 6-3, 4-6, 6-4 ಅಂತರದಿಂದ ಹ್ಯುಗೊ ನಿಸ್ (ಮೊನಾಕೊ)-ಆರ್ಥರ್ ರೈಂಡರ್ನೆಕ್ (ಫ್ರಾನ್ಸ್) ಜೋಡಿಗೆ ಸೋಲುಣಿಸಿದರು.
ಜೊಕೋ 4 ಸೆಟ್ ಹೋರಾಟ :
ಇದೇ ಮೊದಲ ಸಲ ಯುಎಸ್ ಓಪನ್ ಆಡುತ್ತಿರುವ ಆಟಗಾರರನ್ನು ಮೊದಲೆರಡು ಸುತ್ತುಗಳಲ್ಲಿ ಸೋಲಿಸಿದ್ದ ನಂ.1 ನೊವಾಕ್ ಜೊಕೋವಿಕ್ 3ನೇ ಸುತ್ತು ದಾಟಿ ಮುಂದುವರಿದಿದ್ದಾರೆ. ಇಲ್ಲಿ ಅವರು ಜಪಾನಿನ ಕೀ ನಿಶಿಕೊರಿ ವಿರುದ್ಧ 4 ಸೆಟ್ ಹೋರಾಟ ನಡೆಸಿ ಗೆದ್ದು ಬಂದರು. ಅಂತರ 6-7 (4), 6-3, 6-3, 6-2. ಮುಂದಿನ ಎದುರಾಳಿ ಅಮೆರಿಕದ ಜೆನ್ಸನ್.
ಶಪೊವಲೋವ್ ಶರಣು :
ಇದೇ ವೇಳೆ ದಕ್ಷಿಣ ಆಫ್ರಿಕಾದ ಲಾಯ್ಡ ಹ್ಯಾರಿಸ್ ಅಮೋಘ ಸಾಧನೆಯ ಮೂಲಕ ಮೊದಲ ಸಲ ಗ್ರ್ಯಾನ್ಸ್ಲಾಮ್ 4ನೇ ಸುತ್ತಿಗೆ ಏರಿದರು. ಅವರು ಕೆನಡಾದ ಡೆನ್ನಿಸ್ ಶಪೊವಲೋವ್ಗೆ 6-4, 6-4, 6-4 ನೇರ ಸೆಟ್ಗಳ ಆಘಾತವಿಕ್ಕಿದರು.
4ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ 4ನೇ ಸುತ್ತು ತಲುಪಿದ್ದಾರೆ. ಎದುರಾಳಿ ಜಾಕ್ ಸಾಕ್ 4ನೇ ಸೆಟ್ ವೇಳೆ ಗಾಯಾಳಾದ ಕಾರಣ ಹಿಂದೆ ಸರಿದರು.
ವಿಂಬಲ್ಡನ್ ರನ್ನರ್ಅಪ್ ಇಟಲಿಯ ಮ್ಯಾಟಿಯೊ ಬೆರೆಟಿನಿ 5 ಸೆಟ್ಗಳ ಥ್ರಿಲ್ಲರ್ನಲ್ಲಿ ಬೆಲರೂಸ್ನ ಇಲ್ಯ ಇವಾಷ್ಕ ಸವಾಲನ್ನು ಮೆಟ್ಟಿನಿಂತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ