ವಿ.ವಿ. ಕ್ರೀಡಾಕೂಟ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

Team Udayavani, Nov 15, 2019, 10:50 PM IST

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ 3 ದಿನಗಳ ಕಾಲ ನಡೆದ ರಾಜೀವ್‌ಗಾಂಧಿ ಆರೋಗ್ಯ ವಿ.ವಿ.ಯ 20ನೇ ವಾರ್ಷಿಕ ಕ್ರೀಡಾಕೂಟದಲ್ಲಿ ಆತಿಥೇಯ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಎಡ್ಮಿನಿಸ್ಟ್ರೇಷನ್‌ ತಂಡವು 162 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಆಳ್ವಾಸ್‌ ಪುರುಷರ ತಂಡ 91 ಅಂಕ ಮತ್ತು ವನಿತಾ ತಂಡ 71 ಅಂಕ ಗಳಿಸಿತು. ಸುಳ್ಯದ ಕೆ.ವಿ.ಜಿ. ಡೆಂಟಲ್‌ ಕಾಲೇಜಿನ ನೋಯಲ್‌ ಥೋಮಸ್‌ ಅಬ್ರಹಾಂ 13 ಅಂಕ ಗಳಿಸಿ ಪುರುಷರ ವೈಯಕ್ತಿಕ ಚಾಂಪಿಯನ್‌ಶಿಪ್‌ ಗಳಿಸಿದರೆ ಆಳ್ವಾಸ್‌ ಕಾಲೇಜ್‌ ಆಫ್‌ ಹಾಸ್ಪಿಟಲ್‌ ಎಡ್ಮಿನಿಸ್ಟ್ರೇಷನ್‌ನ ಶಹರ್‌ಬಾನ 15 ಅಂಕಗಳೊಂದಿಗೆ ವನಿತೆಯರ ವೈಯಕ್ತಿಕ ಚಾಂಪಿಯನ್‌ ಗಳಿಸಿದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ