ವನಿತಾ ಯೂತ್ ವಿಶ್ವ ಬಾಕ್ಸಿಂಗ್: ಭಾರತಕ್ಕೆ ಐದು ಪದಕ ಖಚಿತ
Team Udayavani, Nov 23, 2017, 10:12 AM IST
ಗುವಾಹಾಟಿ: ಭಾರತೀಯ ಬಾಕ್ಸರ್ಗಳು ಇಲ್ಲಿ ನಡೆಯುತ್ತಿರುವ ಎಐಬಿಎ ವನಿತಾ ಯೂತ್ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿದ್ದು ಐದು ಪದಕ ಗೆಲ್ಲುವುದನ್ನು ಖಚಿತಗೊಳಿಸಿದ್ದಾರೆ.
ಜ್ಯೋತಿ ಗೂಲಿಯ (51 ಕೆ.ಜಿ.) ಶಶಿ ಚೋಪ್ರಾ (57 ಕೆ.ಜಿ.) ಮತ್ತು ಅಂಕುಶಿತಾ ಬೊರೊ (64 ಕೆ.ಜಿ.) ಅವರು ತಮ್ಮ ಕ್ವಾರ್ಟರ್ಫೈನಲ್ ಹೋರಾಟಗಳಲ್ಲಿ ಜಯ ಸಾಧಿಸಿ ಸೆಮಿಫೈನಲಿಗೇರುವ ಮೂಲಕ ಪದಕ ದೃಢಪಡಿಸಿದ್ದಾರೆ. ಈ ಮೊದಲು ನೇಹಾ ಯಾದವ್ (+81 ಕೆ.ಜಿ.) ಮತ್ತು ಅನುಪಮಾ (81 ಕೆ.ಜಿ.) ವಿಭಾಗದಲ್ಲಿ ಸೆಮಿಫೈನಲ್ ತಲುಪಿ ಪದಕ ಗೆಲ್ಲುವುದನ್ನು ಖಚಿತಪಡಿಸಿದ್ದರು. ಆದರೆ ನಿಹಾರಿಕಾ ಗೊನೆಲ್ಲಾ 75 ಕೆ.ಜಿ. ವಿಭಾಗದಲ್ಲಿ ಇಂಗ್ಲೆಂಡಿನ ಜಾರ್ಜಿಯಾ ಓ’ಕಾನರ್ ಅವರಿಗೆ ಶರಣಾಗಿ ಪದಕ ರೇಸ್ನಿಂದ ಹೊರಬಿದ್ದರು.
ಮೊದಲಾಗಿ ಸ್ಪರ್ಧೆ ಆರಂಭಿಸಿದ ಜ್ಯೋತಿ ಗೂಲಿಯ ಇಟೆಲಿಯ ಗ್ಲೋವಾನ್ನಾ ಮಾರ್ಚೆಸೆ ಅವರನ್ನು ಎದುರಿಸಿ ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಚಿನ್ನ ಗೆದ್ದಿರುವ ಹರಿಯಾಣದ ಜ್ಯೋತಿ ಆಕ್ರಮಣಕಾರಿಯಾಗಿ ಆಡಿ 5-0 ತೀರ್ಪಿನೊಂದಿಗೆ ಅವಿರೋಧವಾಗಿ ಗೆಲುವು ಒಲಿಸಿಕೊಂಡರು. ಭಾರತದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ 38 ದೇಶಗಳ 150ಕ್ಕಿಂತ ಹೆಚ್ಚಿನ ಬಾಕ್ಸರ್ಗಳು ಭಾಗವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ