ಬಿಸಿಸಿಐ ಗೆ ಧನ್ಯವಾದ ಹೇಳಿದ ವೇದಾ ಕೃಷ್ಣಮೂರ್ತಿ: ಲೀಸಾ ಸ್ಥಾಲೇಕರ್ ಗೆ ಮುಖಭಂಗ
Team Udayavani, May 19, 2021, 8:55 AM IST
ಚಿಕ್ಕಮಗಳೂರು: ಕೊರೊನಾದಿಂದ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ನೆರವಿಗೆ ನಿಂತು ತನ್ನಲ್ಲಿ ಆತ್ಮವಿಸ್ವಾಸ ತುಂಬಿದ ಬಿಸಿಸಿಐಗೆ ಮತ್ತು ಕಾರ್ಯದರ್ಶಿ ಜಯ್ ಶಾ ಅವರಿಗೆ ವೇದಾ ಕೃಷ್ಣಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದರಿಂದ ಆಸ್ಟ್ರೇಲಿಯದ ಆಟಗಾರ್ತಿ ಲೀಸಾ ಸ್ಥಾಲೇಕರ್ ಬಿಸಿಸಿಐ ವಿರುದ್ಧ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
“ಕಳೆದ ತಿಂಗಳು ನನ್ನ ಹಾಗೂ ನನ್ನ ಕುಟುಂಬದ ಪಾಲಿಗೆ ಅತ್ಯಂತ ದುಃಖ ಹಾಗೂ ಸಂಕಷ್ಟದ ಸಮಯವಾಗಿತ್ತು. ಅನಿರೀಕ್ಷಿತ ಆಘಾತದಿಂದ ನಾವೆಲ್ಲ ತತ್ತರಿಸಿದ್ದೆವು. ಇಂಥ ಸಂದರ್ಭದಲ್ಲಿ ಬಿಸಿಸಿಐ ನಮ್ಮ ನೆರವಿಗೆ ನಿಂತಿದೆ. ಕೆಲವೇ ದಿನಗಳ ಹಿಂದೆ ಕಾರ್ಯದರ್ಶಿ ಜಯ್ ಶಾ ಅವರು ಕರೆ ಮಾಡಿ ನಮ್ಮನ್ನು ವಿಚಾರಿಸಿದ್ದಾರೆ. ಬಿಸಿಸಿಐ ಬೆಂಬಲ ಮುಂದುವರಿಯಲಿದೆ ಎಂಬ ಭರವಸೆ ನೀಡಿದ್ದಾರೆ. ಮೆನಿ ಥ್ಯಾಂಕ್ಸ್ ಸರ್’ ಎಂದು ವೇದಾ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ವೇದಾ ಕೃಷ್ಣಮೂರ್ತಿ ವಿಚಾರದಲ್ಲಿ ಬಿಸಿಸಿಐ ವರ್ತಿಸಿದ ನಡವಳಿಕೆ ಬಗ್ಗೆ ಲೀಸಾ ಸ್ಥಾಲೇಕರ್ ಆಕ್ರೋಶ ವ್ಯಕ್ತಪಡಿಸಿದ್ದರು.
ವೇದಾ ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡರೂ ಬಿಸಿಸಿಐ ಅವರಿಗೆ ಸ್ವಲ್ಪವೂ ಸಾಂತ್ವನ ಹೇಳಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.