ಅಮೋಘ ಚೇಸಿಂಗ್‌; ವೆಲಾಸಿಟಿ ವಿಕ್ರಮ

Team Udayavani, Nov 4, 2020, 11:15 PM IST

IPLಅಮೋಘ ಚೇಸಿಂಗ್‌; ವೆಲಾಸಿಟಿ ವಿಕ್ರಮ

ಶಾರ್ಜಾ: ಬಹಳ ರೋಚಕವಾಗಿ ಆರಂಭಗೊಂಡ ವನಿತಾ ಚಾಲೆಂಜರ್‌ ಟಿ20 ಸರಣಿಯಲ್ಲಿ ವೆಲಾಸಿಟಿ ತಂಡ ಕಳೆದೆರಡು ಬಾರಿಯ ಚಾಂಪಿಯನ್‌ ಸೂಪರ್‌ನೋವಾಸ್‌ ವಿರುದ್ಧ 5 ವಿಕೆಟ್‌ ಅಂತರದ ಅಮೋಘ ಜಯ ಸಾಧಿಸಿದೆ. ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌ 8 ವಿಕೆಟಿಗೆ 126 ರನ್‌ ಗಳಿಸಿದರೆ, ಮಿಥಾಲಿ ರಾಜ್‌ ನಾಯಕತ್ವದ ವೆಲಾಸಿಟಿ ಒಂದು ಎಸೆತ ಬಾಕಿ ಇರುವಾಗ 5 ವಿಕೆಟಿಗೆ 129 ರನ್‌ ಬಾರಿಸಿ ಗೆದ್ದು ಬಂದಿತು.

ವಿಜೇತ ತಂಡದ ಪರ ದಕ್ಷಿಣ ಆಫ್ರಿಕಾದ ಸುನೆ ಲುಸ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ತಂಡವನ್ನು ದಡ ಮುಟ್ಟಿಸಿದರು. ಅವರ ಗಳಿಕೆ 21 ಎಸೆತಗಳಿಂದ ಅಜೇಯ 37 ರನ್‌ (4 ಬೌಂಡರಿ, 1 ಸಿಕ್ಸರ್‌). ಸುಷ್ಮಾ ವರ್ಮ 34, ಕನ್ನಡತಿ ವೇದಾ ಕೃಷ°ಮೂರ್ತಿ 29 ಮತ್ತು ಶಫಾಲಿ ವರ್ಮ 17 ರನ್‌ ಮಾಡಿದರು.

ಇದಕ್ಕೂ ಮುನ್ನ ಸೂಪರ್‌ನೋವಾಸ್‌ ಪರ ಚಾಮರಿ ಅತಪಟ್ಟು ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಬಿರುಸಿನ ಆಟವಾಡಿದರು. ಉಳಿದಂತೆ ವೆಲಾಸಿಟಿ ತಂಡದ ಏಕ್ತಾ ಬಿಷ್ಟ್ 3, ಲೀಗ್‌ ಕ್ಯಾಸ್ಪರೆಕ್‌ ಮತ್ತು ಜಹನಾರಾ ಆಲಂ ತಲಾ 2 ವಿಕೆಟ್‌ ಉರುಳಿಸಿದರು. ಚಾಮರಿ 39 ಎಸೆತಗಳಿಂದ 44 ರನ್‌ ಹೊಡೆದರು. 2 ಬೌಂಡರಿ, 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.

ಚಾಮರಿ ನಿರ್ಗಮನದ ಬಳಿಕ ಕೌರ್‌ ಬಿರುಸಿನ ಆಟದ ಸೂಚನೆ ನೀಡಿದರು. 27 ಎಸೆತಗಳಿಂದ, ಒಂದು ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿ 31 ರನ್‌ ಹೊಡೆದರು. ಆಗ ಆಲಂ ಈ ದೊಡ್ಡ ವಿಕೆಟ್‌ ಉರುಳಿಸಿ ತಂಡಕ್ಕೆ ಮೇಲುಗೈ ಒದಗಿಸಿದರು.

ಓಪನರ್‌ ಪ್ರಿಯಾ ಪೂನಿಯಾ 11 ರನ್ನಿಗೆ ಔಟಾದರೆ, ಭಾರತದ ಮತ್ತೋರ್ವ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಕೇವಲ 7 ರನ್‌ ಮಾಡಿ ಏಕ್ತಾ ಬಿಷ್ಟ್ ಎಸೆತದಲ್ಲಿ ಬೌಲ್ಡ್‌ ಆದರು.

ಲೀಗ್‌ ಕ್ಯಾಸ್ಪರೆಕ್‌ 6ನೇ ಓವರಿನಲ್ಲಿ ಪ್ರಿಯಾ ಪೂನಿಯಾ ವಿಕೆಟ್‌ ಕಿತ್ತು ವೆಲಾಸಿಟಿಗೆ ಮೊದಲ ಯಶಸ್ಸು ತಂದಿತ್ತರು. ಚಾಮರಿ ಅವರ ಬಿಗ್‌ ವಿಕೆಟ್‌ ಜಹನಾರಾ ಆಲಂ ಪಾಲಾಯಿತು. ಆಗಸಕ್ಕೆ ನೆಗೆದ ಚೆಂಡನ್ನು ವೇದಾ ಕೃಷ್ಟಮೂರ್ತಿ ಅಷ್ಟೇ ಸೊಗಸಾಗಿ ಕ್ಯಾಚ್‌ ಪಡೆದರು. ಬಿಷ್ಟ್ 20ನೇ ಓವರಿನ ಅಂತಿಮ 2 ಎಸೆತಗಳಲ್ಲಿ ವಿಕೆಟ್‌ ಬೇಟೆಯಾಡಿದರು.

ಸಂಕ್ಷಿಪ್ತ ಸ್ಕೋರ್‌:
ಸೂಪರ್‌ನೋವಾಸ್‌-8 ವಿಕೆಟಿಗೆ 126 (ಚಾಮರಿ 44, ಹರ್ಮನ್‌ಪ್ರೀತ್‌ 31, ಶಶಿಕಲಾ 18, ಬಿಷ್ಟ್ 22ಕ್ಕೆ 3, ಕ್ಯಾಸ್ಪರೆಕ್‌ 23ಕ್ಕೆ 2, ಆಲಂ 27ಕ್ಕೆ 2). ವೆಲಾಸಿಟಿ-19.5 ಓವರ್‌ಗಳಲ್ಲಿ 5 ವಿಕೆಟಿಗೆ 129 (ಲುಸ್‌ ಔಟಾಗದೆ 37, ಸುಷ್ಮಾ 34, ವೇದಾ 29, ಖಾಕಾ 27ಕ್ಕೆ 2).

ಟಾಪ್ ನ್ಯೂಸ್

2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಜಯಗಳಿಸುವುದು ಕಷ್ಟ: ಗುಲಾಂ ನಬಿ

2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಜಯಗಳಿಸುವುದು ಕಷ್ಟ: ಗುಲಾಂ ನಬಿ

ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ

ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಬೆಂಗಳೂರು ಬುಲ್ಸ್‌-ಮುಂಬಾ ಪ್ರೊ ಕಬಡ್ಡಿ ಉದ್ಘಾಟನಾ ಪಂದ್ಯ

ಬೆಂಗಳೂರು ಬುಲ್ಸ್‌-ಮುಂಬಾ ಪ್ರೊ ಕಬಡ್ಡಿ ಉದ್ಘಾಟನಾ ಪಂದ್ಯ

ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ಏಶ್ಯನ್‌ ಸ್ಕ್ವಾ ಷ್‌: ಪಾಕಿಸ್ಥಾನವನ್ನು 2-1ರಿಂದ ಮಣಿಸಿದ ಭಾರತ

ಏಶ್ಯನ್‌ ಸ್ಕ್ವಾ ಷ್‌: ಪಾಕಿಸ್ಥಾನವನ್ನು 2-1ರಿಂದ ಮಣಿಸಿದ ಭಾರತ

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

MUST WATCH

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

ಹೊಸ ಸೇರ್ಪಡೆ

2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಜಯಗಳಿಸುವುದು ಕಷ್ಟ: ಗುಲಾಂ ನಬಿ

2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಜಯಗಳಿಸುವುದು ಕಷ್ಟ: ಗುಲಾಂ ನಬಿ

cow

ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಿಡಾಡಿ ದನಕರುಗಳು

ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ

ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ

Untitled-2 copy

ಆಂಧ್ರದ ಶೂಟರ್‌ಗಳಿಗೆ ಸುಪಾರಿ ಸಂಚು..!

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.