ವಿದರ್ಭ ಮತ್ತೆ ರಣಜಿ ಚಾಂಪಿಯನ್
Team Udayavani, Feb 7, 2019, 8:16 AM IST
ನಾಗ್ಪುರ : ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ ಮತ್ತೆ ರಣಜಿ ಚಾಂಪಿಯನ್ ಆಗಿ ಮೆರೆದಾಡಿದೆ. ಫೈನಲ್ ನಲ್ಲಿ ಸೌರಾಷ್ಟ್ರ ವಿರುದ್ಧ 78 ರನ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ವಿದರ್ಭ 85 ನೇ ರಣಜಿ ಋತುವಿನ ವಿಜಯಿಯಾಯಿತು.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ವಿದರ್ಭ 312 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಸೌರಾಷ್ಟ್ರ ಸ್ನೆಲ್ ಪಟೇಲ್ ಶತಕದ ಹೊರತಾಗಿಯೂ307 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. 5 ರನ್ ಗಳ ಮುನ್ನಡೆ ಪಡೆದ ವಿದರ್ಭ ದ್ವಿತೀಯ ಇನ್ನಿಂಗ್ಸ್ ನಲ್ಲಿ ಗಳಿಸಿತ್ತು ಭರ್ತಿ 200 ರನ್.
ಗೆಲ್ಲಲು ಸೌರಾಷ್ಟ್ರ ಗಳಿಸಬೇಕಿದ್ದು 205 ರನ್. ಆದರೆ ಪ್ರಮುಖ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದ ಗಳಿಸಿದ್ದು127 ಮಾತ್ರ. ವಿಶ್ವರಾಜ್ ಜಡೇಜಾ ಅರ್ಧಶತಕ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರರು ಉನಾದ್ಕತ್ ಬಳಗದ ನೆರವಿಗೆ ಬರಲಿಲ್ಲ.
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಗಳಿಸಿದ್ದು 1 ಮತ್ತು ಶೂನ್ಯ. ಇದು ಸೌರಾಷ್ಟ್ರಕ್ಕೆ ದುಬಾರಿಯಾಯಿತು. ಪಂದ್ಯದಲ್ಲಿ ಒಟ್ಟು 11 ವಿಕೆಟ್ ಪಡೆದ ಆದಿತ್ಯ ಸರ್ವಾಟೆ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ