ವಿಜಯ್‌ ಹಜಾರೆ: ಇಂದು ಮುಂಬಯಿ- ದಿಲ್ಲಿ ಫೈನಲ್‌

Team Udayavani, Oct 20, 2018, 8:51 AM IST

ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟ ಫೈನಲ್‌ ಹಂತಕ್ಕೆ ಬಂದು ತಲುಪಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ತಂಡವನ್ನು ದಿಲ್ಲಿ ತಂಡ ಎದುರಿಸಲಿದೆ.

3ನೇ ಸಲ ಪ್ರಶಸ್ತಿ ಗೆಲ್ಲುವುದೇ ಮುಂಬಯಿ?
ಮುಂಬಯಿ 11 ವರ್ಷದ ಬಳಿಕ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. 2006-07ರಲ್ಲಿ ಮುಂಬಯಿ ಫೈನಲ್‌ನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ 2ನೇ ಬಾರಿಗೆ ವಿಜಯ್‌ ಹಜಾರೆ ಟ್ರೋಫಿ ಗೆದ್ದಿತ್ತು. ಆ ಬಳಿಕ 2011-12ರಲ್ಲಿ ಮುಂಬಯಿ ಫೈನಲ್‌ ಪ್ರವೇಶಿಸಿತ್ತಾದರೂ ಬಂಗಾಲ್‌ ವಿರುದ್ಧ ಸೋಲುಂಡು ರನ್ನರ್‌ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದಕ್ಕೂ ಮೊದಲು 2003-04ರಲ್ಲಿ ಮುಂಬಯಿ ಬಂಗಾಲ್‌ ತಂಡವನ್ನು ಮಣಿಸಿ ಮೊದಲ ಸಲ ಮುಂಬಯಿ ಟ್ರೋಫಿ ಗೆದ್ದಿತ್ತು. ಈ ಸಲ ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌, ಅಜಿಂಕ್ಯ ರಹಾನೆ ಒಳಗೊಂಡ ಮುಂಬಯಿ ತಂಡ ಬಲಿಷ್ಠವಾಗಿದ್ದು 3ನೇ ಸಲ ಟ್ರೋಫಿ ಗೆಲ್ಲುವ ಕನಸನ್ನು ಕಾಣುತ್ತಿದೆ.

ದಿಲ್ಲಿಗೆ 2ನೇ ಸಲ ಟ್ರೋಫಿ ನಿರೀಕ್ಷೆ
2012-13ರಲ್ಲಿ ದಿಲ್ಲಿ ಫೈನಲ್‌ನಲ್ಲಿ ಅಸ್ಸಾಂ ತಂಡವನ್ನು ಸೋಲಿಸಿ ಮೊದಲ ಸಲ ಟ್ರೋಫಿಗೆ ಮುತ್ತಿಕ್ಕಿತ್ತು. ಆ ಬಳಿಕ 2015-16ರಲ್ಲಿ ಪೈನಲ್‌ ಪ್ರವೇಶಿಸಿದ್ದ ದಿಲ್ಲಿ ತಂಡವು ಗುಜರಾತ್‌ ವಿರುದ್ಧ ಸೋತು ರನ್ನರ್‌ಅಪ್‌ ಪ್ರಶಸ್ತಿಗೆ ಸಮಾಧಾನ ಪಟ್ಟುಕೊಂಡಿತ್ತು. ಗೌತಮ್‌ ಗಂಭೀರ್‌ ನಾಯಕತ್ವ ಹೊಂದಿರುವ ದಿಲ್ಲಿ ತಂಡದಲ್ಲಿ ಉನ್ಮುಕ್‌¤ ಚಾಂದ್‌, ನಿತೀಶ್‌ ರಾಣಾ ಬ್ಯಾಟಿಂಗ್‌ ಭರವಸೆಯಾಗಿದ್ದಾರೆ.
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ