ಮಿಂಚಿದ ಮಿಥುನ್, ಮಯಾಂಕ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಚಾಂಪಿಯನ್

Team Udayavani, Oct 25, 2019, 4:18 PM IST

ಬೆಂಗಳೂರು: ತಮಿಳುನಾಡು ವಿರುದ್ದ ನಡೆದ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಗೆದ್ದು ಚಾಂಪಿಯನ್ ಆಗಿ ಮೂಡಿ ಬಂದಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್ ಗೆ ಆಲ್ ಔಟ್ ಆಯಿತು. ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಹಿತ ಮೂರು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಕರ್ನಾಟಕ ಒಂದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದ ವೇಳೆ ಮಳೆ ಅಡ್ಡಿಯಾಯಿತು. ರಾಹುಲ್ 52, ಮಯಾಂಕ್ 69 ರನ್ ಗಳಿಸಿ ಅಡುತ್ತಿದ್ದರು. ಮಳೆ ನಿಲ್ಲದ ಕಾರಣ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡ 60 ರನ್ ಅಂತರದಿಂದ ಗೆಲುವು ಸಾಧಿಸಿದೆ ಎಂದು ಘೋಷಿಸಲಾಯಿತು.

ಇದರೊಂದಿಗೆ ಕರ್ನಾಟಕ ನಾಲ್ಕು ಬಾರಿ ವಿಜಯ್ ಹಜಾರೆ ಚಾಂಪಿಯನ್ ಶಿಪ್ ಗೆದ್ದ ದಾಖಲೆ ಬರೆಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ