Udayavni Special

ಸಿಒಎ ವಿರುದ್ಧ ಕೆಂಡಕಾರಿದ ಬಿಸಿಸಿಐ ಕಾರ್ಯದರ್ಶಿ


Team Udayavani, Aug 5, 2018, 6:10 AM IST

bcci-secretary-amitabh-choudhary.jpg

ಹೊಸದಿಲ್ಲಿ: ನ್ಯಾಯಪೀಠ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿ ವಿನೋದ್‌ ರಾಯ್‌ ವಿರುದ್ಧ ಇದೇ ಮೊದಲ ಬಾರಿಗೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ನೇರನೇರಾ ವಾಗ್ಧಾಳಿ ನಡೆಸಿದ್ದಾರೆ. ಈ ಹಿಂದೆ ಎಂಥದೇ ವಿಷಮ ಸ್ಥಿತಿಯಲ್ಲೂ ಚೌಧರಿ ತುಟಿ ಬಿಚ್ಚಿರಲಿಲ್ಲ ಎನ್ನುವುದು ಗಮನಾರ್ಹ.

“ಲೋಧಾ ಸಮಿತಿ ಶಿಫಾರಸನ್ನು ಜಾರಿ ಮಾಡುವಲ್ಲಿ ವಿನೋದ್‌ ರಾಯ್‌ ಸಂಪೂರ್ಣ ವಿಫ‌ಲರಾಗಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಪದಾಧಿಕಾರಿಗಳು ಬಿಸಿಸಿಐನಿಂದ ಹೊರಹೋಗಲಿ ಎಂದು ಬಯಸುತ್ತಿದ್ದಾರೆ’ ಎಂದು ಚೌಧರಿ ಆರೋಪಿಸಿದ್ದಾರೆ.

“ನ್ಯಾಯಾಲಯಕ್ಕೆ ಇ-ಮೇಲ್‌ ಕಳುಹಿಸುವುದು, ದೂರು ಸಲ್ಲಿಸುವುದನ್ನು ಬಿಟ್ಟು ಅವರು ಬೇರೇನನ್ನೂ ಮಾಡುತ್ತಿಲ್ಲ. ಈಗ ಪದಾಧಿಕಾರಿಗಳನ್ನು ಅವರು ದೂಷಿಸುತ್ತಿದ್ದಾರೆ. 4ನೇ ವರದಿಯಲ್ಲಿ ನನ್ನನ್ನು ಎಲ್ಲ ಕಾರ್ಯಾಚರಣೆಗೂ ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದರು. ಆಗ 13 ರಾಜ್ಯಗಳನ್ನು ಲೋಧಾ ಶಿಫಾರಸು ಜಾರಿಗೆ ಮನ ಒಲಿಸಿದ್ದೆ. ಅದರಲ್ಲಿ 4 ಪ್ರಮುಖ ಶಿಫಾರಸುಗಳಿಗೆ ರಾಜ್ಯಗಳು ಒಪ್ಪಿರಲಿಲ್ಲ. ಅದು ಅವರಿಗಿರುವ ಸ್ವಾತಂತ್ರ್ಯ. ಆದರೆ ರಾಯ್‌ ನೀಡಿರುವ 7ನೇ ವರದಿಯಲ್ಲಿ ನಾನು ಎಲ್ಲದಕ್ಕೂ ಅಡ್ಡಿಪಡಿಸುತ್ತಿದ್ದೇನೆ. ಸುಗಮ ಕಾರ್ಯಾಚರಣೆಗೆ ಇವರು ಅಡ್ಡಿ ಎಂದು ಹೇಳಲಾಗಿದೆ. ಆಗ ಬೆಂಬಲವಾಗಿದ್ದವನು ಈಗ ಹಾಗಾಗಲು ಸಾಧ್ಯವೇ?’ ಎಂದು ಅಮಿತಾಭ್‌ ಪ್ರಶ್ನಿಸಿದ್ದಾರೆ.

“ಈಗ ನನ್ನ ದಿನನಿತ್ಯದ ಖರ್ಚಿನ ಬಗ್ಗೆ ಪ್ರಶ್ನಿಸಲಾಗುತ್ತದೆ. ನಾನು 4ನೇ ವರದಿಯಲ್ಲಿ ಎಷ್ಟು ಖರ್ಚು ನೀಡಿದ್ದೇನೆ, ಈಗ ಎಷ್ಟು ನೀಡಿದ್ದೇನೆ ಎಂದು ಪರೀಕ್ಷಿಸಿ. ಹಾಗೆಯೇ ಆಟಗಾರರಿಗಿಂತ ಜಾಸ್ತಿ ಟಿಎಡಿಎ ನಮಗೇಕೆ ಎಂದೂ ಕೇಳಲಾಗುತ್ತದೆ. ಆಟಗಾರರಿಗೆ ಕೋಟ್ಯಂತರ ರೂ. ವಾರ್ಷಿಕ ವೇತನದ ಜೊತೆಗೆ ಗರಿಷ್ಠ ಪಂದ್ಯದ ಶುಲ್ಕವನ್ನು ನೀಡಲಾಗುತ್ತದೆ. ನಮಗೆ ಆ ಸೌಲಭ್ಯವಿಲ್ಲ’ ಎಂದಿದ್ದಾರೆ.

ಸುಪ್ರೀಂ ಬಗ್ಗೆ ನೊಂದ ರಾಯ್‌
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ವಿನೋದ್‌ ರಾಯ್‌, ಬಿಸಿಸಿಐಗೆ ಸಾಂವಿಧಾನಿಕ ತಿದ್ದುಪಡಿ ಮಾಡುವ ಅಂತಿಮ ಆಜ್ಞೆ ಹೊರಡಿಸಲು ಸರ್ವೋಚ್ಚ ನ್ಯಾಯಾಲಯ ಇಷ್ಟು ದೀರ್ಘ‌ಕಾಲ ತೆಗೆದುಕೊಳ್ಳುತ್ತದೆ ಎಂದರೆ ಅದಕ್ಕೆ ನಾನೇನು ಹೇಳಲು ಸಾಧ್ಯ? ಅದರಲ್ಲೂ 40 ವರ್ಷ ಸರಕಾರಿ ಹುದ್ದೆಯಲ್ಲಿದ್ದುಕೊಂಡು ಮಾತನಾಡಲು ಆಗುತ್ತದೆಯೇ ಎಂದಿದ್ದರು. ಇದು ನ್ಯಾಯಾಂಗ ನಿಂದನೆಯಾಗಲಿಲ್ಲವೇ ಎಂಬ ವಾದವೂ ಕೇಳಿ ಬಂದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದುರ್ಮರಣ

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್

ಎಬಿಡಿಗೆ “ಕುಡ್ಲ’ ಅಂದರೆ ತುಂಬಾ ಇಷ್ಟ !

ಎಬಿಡಿಗೆ “ಕುಡ್ಲ’ ಅಂದರೆ ತುಂಬಾ ಇಷ್ಟ !

Sannu-01

ಶಾರ್ಜಾ ಮೈದಾನದಲ್ಲಿ ಸ್ಯಾಮ್ಸನ್-ಸ್ಮಿತ್ ಸ್ಪೋಟಕ ಜೊತೆಯಾಟ ; ಚೆನ್ನೈಗೆ 217 ರನ್ ಟಾರ್ಗೆಟ್

Gilirama

Viral Video: ದೈತ್ಯ ಗಿಳಿಯ ಫುಟ್ಬಾಲ್ ಮೋಹ ; ಆಟಗಾರ್ತಿಯ ತಲೆಯೇರಿದ್ದೇಕೆ ಗಿಣಿರಾಮ?

dhoni

ಚೆನ್ನೈ- ರಾಜಸ್ಥಾನ್ ಕಾಳಗ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಧೋನಿಪಡೆ

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

3 ದಿನಗಳಲ್ಲಿ ಮೆಸ್ಕಾಂಗೆ 42 ಲಕ್ಷ ರೂ. ನಷ್ಟ!

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಆಹಾರ ಉತ್ಪಾದನೆ ಗುರಿ ಹೆಚ್ಚಿಸಲು ಕೇಂದ್ರ ನಿರ್ಧಾರ

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಧರಣಿನಿರತರಿಗೆ ಚಹಾ ತಂದ ವಿಶೇಷ ಅತಿಥಿ!

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

ಅಸಾಂಜ್‌ಗೆ ಕೇಳುತ್ತಿದೆಯಂತೆ ಅನಾಮಿಕ ಧ್ವನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.